ಬೆಂಗಳೂರಿಗೆ ಮತ್ತೆ ಕಾಲಿಟ್ಟ ಹಕ್ಕಿ ಜ್ವರ, ಜನರಿಗೆ ಆರೋಗ್ಯ ಅಧಿಕಾರಿಗಳ ಎಚ್ಚರಿಕೆ
ಬೆಂಗಳೂರಿನಲ್ಲಿ ಮತ್ತೆ ಹಕ್ಕಿ ಜ್ವರ ಕಾಣಿಸಿಕೊಂಡಿದೆ.

Published On :
ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಬೆಂಗಳೂರಿನ ಕನಕಪುರ ರಸ್ತೆ ದಾಸರಹಳ್ಳಿಯ ಚಿಕನ್ ಸೆಂಟರ್ ನ ಕೋಳಿಗಳಲ್ಲಿ ಎಚ್5 ಎನ್1 ಹಕ್ಕಿ ಜ್ವರದ ವೈರಸ್ ಪತ್ತೆಯಾಗಿದ್ದು ಅಂಗಡಿಯು ಡಿ.30ರಿಂದ ಬಾಗಿಲು ಮುಚ್ಚಿದೆ. ಅಂತೆಯೇ ಆ ಅಂಗಡಿ ಸುತ್ತಲಿನ ಒಂದು ಕಿಮೀ ವ್ಯಾಪ್ತಿಯಲ್ಲಿ ಇದ್ದ ಎಲ್ಲಾ ಚಿಕನ್ ಶಾಪ್ ಗಳೂ ಮುಚ್ಚುವಂತೆ ಆರೋಗ್ಯ ಇಲಾಖೆ ಸೂಚಿಸಿದೆ
ದಾಸರಹಳ್ಳಿ ಕೆಜಿಎನ್ ಕೋಳಿ ಅಂಗಡಿಯಲ್ಲಿ ಹಕ್ಕಿ ಜ್ವರ ಪತ್ತೆಯಾಗಿದ್ದು ಕಳೆದ ವಾರ ಅಂಗಡಿ ಮಾಲೀಕರು ತಮಿಳುನಾಡಿನಿಂದ 15 ಕೋಳಿಗಳನ್ನು ತರಿಸಿದ್ದರು. ಅವುಗಳಲ್ಲಿ ನಾಲ್ಕರಿಂದ ಐದು ಕೋಳಿಗಳು ಸಾವನ್ನಪ್ಪಿದ್ದು ಹೀಗೆ ಮೃತಪಟ್ಟ ಕೋಳಿಗಳನ್ನು ಪರೀಕ್ಷೆ ನಡೆಸಿದಾಗ ಹಕ್ಕಿ ಜ್ವರ ಇರುವುದು ಖಚಿತವಾಗಿದೆ.
ಬಿಬಿಎಂಪಿ ಮೇಯರ್ ಸೇರಿ ಪಾಲಿಕೆ ಆರೋಗ್ಯ ಅಧಿಕಾರಿಗಳು ಈ ಕುರಿತಂತೆ ಜನ ಜಾಗೃತರಾಗಿರಬೇಕೆಂದು ತಿಳಿಸಿದ್ದಾರೆ. ಅಲ್ಲದೆ ಹೊರರಾಜ್ಯಗಳಿಂದ ಕೋಳಿಗಳನ್ನು ತರದಂತೆ ಸೂಚನೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengaluruBird Fluಹಕ್ಕಿ ಜ್ವರDasarahalli poultry shopBBMP health departmentದಾಸರಾಹಳ್ಳಿ ಕೋಳಿ ಅಂಗಡಿಬಿಬಿಎಂಪಿ ಆರೋಗ್ಯ ಇಲಾಖೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


