ಸರಳವಾಗಿ ನಡೆದ ನಾಮಕರಣ; ಮೈಸೂರು ಯದುವಂಶದ ಯುವರಾಜನ ಹೆಸರೇನು ಗೊತ್ತಾ?
ಮೈಸೂರಿನ ಯದುವಂಶದ ಕುಡಿ, ಯುವರಾಜನ ನಾಮಕರಣ ಸಮಾರಂಭ ಸರಳವಾಗಿ ನೆರವೇರಿದ್ದು ಯುವರಾಜನಿಗೆ ರಾಜಮಾತೆ ಪ್ರಮೋದಾದೇವಿ...

Published On :
ಬೆಂಗಳೂರು: ಮೈಸೂರಿನ ಯದುವಂಶದ ಕುಡಿ, ಯುವರಾಜನ ನಾಮಕರಣ ಸಮಾರಂಭ ಸರಳವಾಗಿ ನೆರವೇರಿದ್ದು ಯುವರಾಜನಿಗೆ ರಾಜಮಾತೆ ಪ್ರಮೋದಾದೇವಿ ಆದ್ಯವೀರ್ ನರಸಿಂಹ ರಾಜ ಒಡೆಯರ್ ಎಂದು ಹೆಸರಿಟ್ಟಿದ್ದಾರೆ.
ಮೈಸೂರು ಅರಮನೆ ಬಿಟ್ಟು ಬೆಂಗಳೂರಿನ ಪ್ಯಾಲೇಸ್ ನಲ್ಲಿ ನಾಮಕರಣ ಸಮಾರಂಭ ಸರಳವಾಗಿ ನೆರವೇರಿತು. ಮೈಸೂರು ರಾಜಮನೆತನಕ್ಕೆ ರಾಜಕುಮಾರನ ಆಗಮನವಾದಾಗ ಇಡೀ ರಾಜ್ಯವೇ ಸಂಭ್ರಮ ಪಟ್ಟಿತ್ತು. ಇಂದು ಯದುವೀರ್ ತ್ರಿಷಿಕಾ ದಂಪತಿಯ ಮುದ್ದು ಕಂದನ ನಾಮಕರಣ ಸಮಾರಂಭದಲ್ಲಿ ರಾಜ ಕುಟುಂಬಸ್ಥರು ಭಾಗಿಯಾಗಿ ಯುವರಾಜನಿಗೆ ಶುಭ ಹಾರೈಸಿದರು.
ಸಮಾರಂಭಕ್ಕೆ ಮಾಧ್ಯಮದವರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಹತ್ತಿರದ ಸಂಬಂಧಿಗಳಷ್ಟೇ ಭಾಗಿಯಾಗಿದ್ದು ಆದ್ಯವೀರ್ ಯುವರಾಜ ಮೈಸೂರು ಸಂಸ್ಥಾನದ ಹೆಸರು ಉಳಿಸಿ ಬೆಳಸಲಿ ಎಂದು ಹಾರೈಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


