ರಾಜ್ಯ

ಕೆಜಿಎಫ್: ಆಸ್ಪತ್ರೆಯಿಂದ ನವಜಾತ ಶಿಶು ಅಪಹರಣ

ಕೋಲಾರ ಜಿಲ್ಲೆ ಕೆಜಿಎಫ್ ಆಸ್ಪತ್ರೆಯಲ್ಲಿ ನಿನ್ನೆದಿನ ಜನಿಸಿದ ಗಂಡುಮಗುವನ್ನು ಅಪರಿಚಿತ ಮಹಿಳೆಯೋರ್ವಳು ಕದ್ದು ಪರಾರಿಯಾಗಿದ್ದಾಳೆ.

ಕೆಜಿಎಫ್: ಆಸ್ಪತ್ರೆಯಿಂದ ನವಜಾತ ಶಿಶು ಅಪಹರಣ
ಮಗುವಿನ (ಸಾಂದರ್ಭಿಕ ಚಿತ್ರ)
Published On :

ಕೋಲಾರ: ಕೋಲಾರ ಜಿಲ್ಲೆ ಕೆಜಿಎಫ್ ಆಸ್ಪತ್ರೆಯಲ್ಲಿ ನಿನ್ನೆದಿನವಷ್ಟೇ ಜನಿಸಿದ ಗಂಡುಮಗುವನ್ನು ಅಪರಿಚಿತ ಮಹಿಳೆಯೋರ್ವಳು ಕದ್ದು ಪರಾರಿಯಾಗಿದ್ದಾಳೆ. 

ಚೆಲ್ ದಾಗಾನಹಳ್ಳಿಯ ರವಿಚಂದ್ರನ್ ಅವರ ಪತ್ನಿ ಮಾಲಾ ಅವರು ಶುಕ್ರವಾರ ಬೆಳಿಗ್ಗೆ ಮಗುವಿನ ಜನನ ನೀಡಿದ್ದರು.  ವೀಕ್ಷಣೆಗಾಗಿ ತಾಯಿ ಹಾಗೂ ಮಗುವನನ್ನು ಸಾಮಾನ್ಯ ವಾರ್ಡ್ ಗೆ ಸ್ಥಳಾಂತರಿಸಲಾಗಿತ್ತು.

ಮಾಲಾ ಸೇರಿದಂತೆ ಆರು ಮಂದಿ ಆ ವಾರ್ಡ್ ನಲ್ಲಿದ್ದರು.  ಮಧ್ಯರಾತ್ರಿಯವರೆಗೂ ಆಕೆಯ ತಾಯಿಯೊಂದಿಗೆ ಮಗು ಇತ್ತು.  ಮಧ್ಯರಾತ್ರಿ ಮೂರು ಗಂಟೆ ವೇಳೆಯಲ್ಲಿ ಆಕೆ ನಿದ್ರೆಗೆ ಜಾರಿದ್ದಾಗ ಅಲ್ಲಿಯೇ ಮಲಗಿದ್ದ ಅಪರಿಚಿತ ಮಹಿಳೆಯೋರ್ವಳು ಮಗು ಕದ್ದು ಪರಾರಿಯಾಗಿದ್ದಾಳೆ.

ಈ ಕುರಿತು ಪ್ರತಿಕ್ರಿಯಿಸಿದ  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಲೋಕೇಶ್ ಕುಮಾರ್, ದೂರು ಆಧರಿಸಿ,  ರಾಬರ್ಟ್ ಸನ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಲಾಗಿದೆ.  ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಈ ಪ್ರಕರಣ ಸಂಬಂಧ ಆರೋಪಿ ಪತ್ತೆಗಾಗಿ ತಂಡವನ್ನೊಂದಿಗೆ ರಚಿಸಲಾಗಿದೆ.  ರಾಜ್ಯ ಮಾತ್ರವಲ್ಲದೇ ನೆರೆಯ ಆಂದ್ರಪ್ರದೇಶದಲ್ಲಿ ಈ ಬಗ್ಗೆ ಸಂದೇಶ ನೀಡಲಾಗಿದೆ.  ಎಂದು ತಿಳಿಸಿದರು.

ಮತ್ತೊಂದೆಡೆ ವೈದ್ಯರ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಆರೋಪಿಸಿ ಕೆಲ ಸಂಘಟನೆಗಲು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ದವು. ಘಟನೆ ಸಂಬಂಧ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಆರೋಗ್ಯಧಿಕಾರಿ ವಿಜಯ್ ಕುಮಾರ್  ಭರವಸೆ ನೀಡಿದ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.