ಗೀತಾಂಜಲಿ ಜೆಮ್ಸ್ ಫ್ರ್ಯಾಂಚೈಸಿಗಳಿಗೆ ರೂ.300 ಕೋಟಿ ನಷ್ಟ!
ಗೀತಾಂಜಲಿ ಗ್ರೂಪ್ ಪ್ರವರ್ತಕ ಮೆಹುಲ್ ಚೊಕ್ಸಿ ಮಾತ್ರವಲ್ಲ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಬಹುಕೋಟಿ ...

ಬೆಂಗಳೂರು: ಗೀತಾಂಜಲಿಗ್ರೂಪ್ ಪ್ರವರ್ತಕ ಮೆಹುಲ್ ಚೊಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಮಾತ್ರವಲ್ಲ ಬಹುಕೋಟಿ ರೂಪಾಯಿ ವಂಚಿಸಿದ್ದು. ದೇಶಾದ್ಯಂತ 200ಕ್ಕೂಅಧಿಕವಾಗಿರುವ ಗೀತಾಂಜಲಿ ಜೆಮ್ಸ್ ಫ್ರಾಂಚೈಸಿಗಳು ಕೂಡ ಮೆಹುಲ್ ಚೊಕ್ಸಿಯಿಂದ ಮೋಸಕ್ಕೀಡಾಗಿವೆ. ಈಎಲ್ಲಾ ಸಂಸ್ಥೆಗಳು ಅನಿವಾರ್ಯವಾಗಿ ಅಂಗಡಿಗಳಿಗೆ ಬಾಗಿಲು ಹಾಕಬೇಕಾದ ಪರಿಸ್ಥಿತಿ ಬಂದಿದೆ.
2015ರಲ್ಲಿ ಕೇಂದ್ರ ಹಣಕಾಸು ಸಚಿವಾಲಯ ಮತ್ತುಜಾರಿ ನಿರ್ದೇಶನಾಲಯದಲ್ಲಿ ಮತ್ತು ಸ್ಥಳೀಯ ಕೋರ್ಟ್ ಗಳಲ್ಲಿ ಹಲವು ಫ್ರಾಂಚೈಸಿಗಳು ವೈಯಕ್ತಿಕವಾಗಿಮತ್ತು ಸಾಮೂಹಿಕವಾಗಿ ದೂರು ದಾಖಲಿಸಿವೆ. ಬೆಂಗಳೂರು, ಮೈಸೂರು, ಹೈದರಾಬಾದ್, ಕರ್ನೂಲ್, ಕೊಚ್ಚಿ,ಜೋಧ್ ಪರ, ತಿರುವನಂತಪುರಂ, ದೆಹಲಿ, ಅಹಮದಾಬಾದ್, ನಾಗ್ಪುರ, ಮುಂಬೈ ಮತ್ತು ಇತರೆಡೆಗಳಲ್ಲಿಫ್ರಾಂಚೈಸಿ ಮಾಲೀಕರಿದ್ದಾರೆ. ತಾವು ಈ ಮೋಸದ ಜಾಲಕ್ಕೆ ಸಿಕ್ಕಿಬಿದ್ದಿದ್ದು ತಮ್ಮ ಬಾಕಿಉಳಿಕೆಗಾಗಿ 2015ರಿಂದ ಹೋರಾಟ ನಡೆಸುತ್ತಾ ಬಂದಿವೆ. ಪ್ರತಿ ಫ್ರಾಂಚೈಸಿ ಮಾಲೀಕರು 5 ಕೋಟಿಯಿಂದ25 ಕೋಟಿಯವರೆಗೆ ಒಟ್ಟು ಸುಮಾರು 300 ಕೋಟಿ ರೂಪಾಯಿ ಹೂಡಿಕೆ ಮಾಡಿವೆ. ತಮ್ಮ ಬಾಕಿ ಮೊತ್ತಸಿಗದಿದ್ದಾಗ ಹರಿಪ್ರಸಾದ್ ಮತ್ತು ಇತರ ಆರು ಮಂದಿ 2016ರಲ್ಲಿ ಪ್ರಧಾನಿ ಕಚೇರಿಯ ಗಮನಕ್ಕೆತಂದಿದ್ದರು.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ಜೊತೆ ಮಾತನಾಡಿದ 2013ರಲ್ಲಿ ಫ್ರಾಂಚೈಸಿ ಆದ ಕೊಚ್ಚಿ ಮೂಲದ ಶರತ್, ಭರವಸೆ ನೀಡಿದಂತೆ ತಿಂಗಳುತಿಂಗಳು ಹಣ ಸಿಗದೆ ಮರುವರ್ಷವೇ ತಮಗೆ ಮೋಸವಾಗಿತ್ತು. ನನಗೆ 14ರಿಂದ 15 ಕೋಟಿಗಳಷ್ಟುನಷ್ಟವಾಗಿದ್ದು, ಕೊಚ್ಚಿ ಪೊಲೀಸರಿಗೆ ದೂರು ನೀಡಿದ್ದೆ. ಆದರೆ ಅವರು ತನಿಖೆ ಬಗ್ಗೆ ಗಮನಹರಿಸಿರಲಿಲ್ಲ ಎನ್ನುತ್ತಾರೆ.
13 ಕೋಟಿ ರೂಪಾಯಿ ಹೂಡಿಕೆ ಕಳೆದುಕೊಂಡಬೆಂಗಳೂರಿನ ಹರಿಪ್ರಸಾದ್, ನನ್ನ ಬಾಕಿ ಹಣ ವಾಪಸ್ ಬರಲು ನಾನು ಹೋರಾಟ ನಡೆಸುತ್ತೇನೆ. ತಿಂಗಳಿಗೆ10 ಲಕ್ಷ ರೂಪಾಯಿ ಬಾಡಿಗೆ ಬರಬಹುದು ಎಂದು ಭರವಸೆ ನೀಡಿದ್ದರು. ಆದರೆ ಇದುವರೆಗೆ ಹಣ ಬಂದಿಲ್ಲಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


