ಕೊಡಗಿನಲ್ಲಿ ಮುಂದುವರೆದ ನಕ್ಸಲ್ ಕಾರ್ಯಾಚರಣೆ
ಭಾಗಮಂಡಲ ವಲಯದ ಕಾಕಬೇ ಅರಣ್ಯ ಪ್ರದೇಶದಲ್ಲಿ ಜಿಲ್ಲಾ ಪೊಲೀಸ್ ಮತ್ತು ಎಎನ್ ಎಫ್ ತಂಡ ನಕ್ಸಲರಿಗಾಗಿ ಕೂಂಬಿಂಗ್ ಕಾರ್ಯಾಚರಣೆ ಮುಂದುವರಿಸಿದೆ...

Published On :
ಮಡಿಕೇರಿ: ಭಾಗಮಂಡಲ ವಲಯದ ಕಾಕಬೇ ಅರಣ್ಯ ಪ್ರದೇಶದಲ್ಲಿ ಜಿಲ್ಲಾ ಪೊಲೀಸ್ ಮತ್ತು ಎಎನ್ ಎಫ್ ತಂಡ ನಕ್ಸಲರಿಗಾಗಿ ಕೂಂಬಿಂಗ್ ಕಾರ್ಯಾಚರಣೆ ಮುಂದುವರಿಸಿದೆ, ನಾಪೋಕ್ಲುವಿನ ನಳದಿಯ ಮನೆಯೊಂದಕ್ಕೆ ನಕ್ಸಲರು ಸೋಮವಾರ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಕೂಂಬಿಂಗ್ ಆರಂಭವಾಗಿದೆ.
ಕೊಡಗಿನ ಕೊಯನಾಡುಗೆ ಕಳೆದ 15 ದಿನಗಳ ಹಿಂದೆ ನಕ್ಸಲ್ ತಂಡ ಭೇಟಿ ನೀಡಿತ್ತು, ಹಾಗೂ ದಕ್ಷಿಣ ಕನ್ನಡ ಗಡಿಯ ನಾಪೋಕ್ಲುಗೆ ಕೂಡ ನಕ್ಸಲ್ ತಂಡ ಭೇಟಿ ನೀಡಿತ್ತು. ನಕ್ಸಲ್ ತಂಡ ಕಾಫಿ ಬೆಳೆಗಾರ ಮುತ್ತನ್ನ ಎಸ್ಟೇಟ್ ಮತ್ತು ಬರಹಗಾರ ಪೆಮ್ಮಯ್ಯ ಮನೆಗೆ ಸಂಜೆ 5.30ರ ವೇಳೆಗೆ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ.
ತಮ್ಮನ್ನು ನಕ್ಸಲರೆಂದು ಹೇಳಿಕೊಂಡ ತಂಡ ಕುಟುಂಬದ ಸದಸ್ಯರಿಗೆ ಹಂದಿ ಮಾಂಸದ ಅಡುಗೆ ಮಾಡುವಂತೆ ಕೇಳಿದೆ, ಊಟ ಮುಗಿಸಿ ರಾತ್ರಿ 10.30ರ ವೇಳೆಗೆ ಅಲ್ಲಿಂದ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


