ಮೈಸೂರು-ಚೆನ್ನೈ ಎಕ್ಸ್'ಪ್ರೆಸ್'ನಲ್ಲಿ ಪ್ರಯಾಣಿಕರೊಂದಿಗೆ 'ರೈಲ್ ಪೆ ಚರ್ಚಾ' ನಡೆಸಿದ ರೈಲ್ವೇ ಸಚಿವ
ಮೈಸೂರು-ಚೆನ್ನೈ ರೈಲಿನಲ್ಲಿ ಸಂಚರಿಸದ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರು, ಪ್ರಯಾಣಿಕರೊಂದಿಗೆ 'ರೈಲ್ ಪೇ ಚರ್ಚಾ' ಸಂವಾದ ನಡೆಸಿದರು...

Published On :
ಮೈಸೂರು: ಮೈಸೂರು-ಚೆನ್ನೈ ರೈಲಿನಲ್ಲಿ ಸಂಚರಿಸದ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರು, ಪ್ರಯಾಣಿಕರೊಂದಿಗೆ 'ರೈಲ್ ಪೇ ಚರ್ಚಾ' ಸಂವಾದ ನಡೆಸಿದರು.
ಬೆಂಗಳೂರು ಮತ್ತು ಮೈಸೂರು ನಡುವೆ ರೈಲ್ವೆ ಮಾರ್ಗದ ವಿದ್ಯುದ್ದೀಕರಣ ಚಾಲನೆ ಸಮಾರಂಭದಲ್ಲಿ ಭಾಗವಹಿಸುವ ಸಲುವಾಗಿ ನಗರಕ್ಕೆ ಆಗಮಿಸಿರುವ ಗೋಯಲ್ ಅವರು, ಬೆಂಗಳೂರಿಗೆ ರೈಲಿನ ಮೂಲಕ ಪ್ರಯಾಣಿಸಿದರು. ಪ್ರಯಾಣದ ವೇಳೆ ಪ್ರಯಾಣಿಕರ ಜೊತೆಗೆ ಸಂವಾದ ನಡೆಸಿ ಪ್ರಯಾಣಿಕರ ಕುಂದುಕೊರತೆಗಳನ್ನು ಆಲಿಸಿದರು.
ಗೋಯಲ್ ಅವರು ರೈಲಿನ ಸಾಮಾನ್ಯ ಬೋಗಿಯಲ್ಲಿ ಪ್ರಯಾಣ ಮಾಡುತ್ತಿರುವುದನ್ನು ನೋಡಿದ ಪ್ರಯಾಣಿಕರು ಆರಂಭದಲ್ಲಿ ಆಶ್ಚರ್ಯಗೊಂಡರು. ಬಳಿಕ ಸಚಿವರ ಸ್ಲೀಪರ್ ಕೋಚ್ ಬಳಿ ತೆರಳಿ ಪ್ರಯಾಣಿಕರೊಂದಿಗೆ ಮಾತುಕತೆ ನಡೆಸಲು ಆರಂಭಿಸಿದರು. ಈ ವೇಳೆ ಪ್ರಯಾಣದ ಅನುಭವ, ಸೇವೆಗಳು, ಸ್ವಚ್ಛತೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಪ್ರಯಾಣಿಕರನ್ನು ವಿಚಾರಿಸಿ ಸಲಹೆಗಳನ್ನು ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
mysoreಮೈಸೂರುPiyush Goyalಪಿಯೂಷ್ ಗೋಯಲ್Mysuru-Chennai ExpressRail pe charchaಮೈಸೂರು-ಚೆನ್ನೈ ಎಕ್ಸ್ ಪ್ರೆಸ್ರೈಲ್ ಪೇ ಚರ್ಚಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


