ರಾಜ್ಯ

ಕಾರ್ಪೋರೇಟ್ ಸಹಭಾಗಿತ್ವದಲ್ಲಿ ಮೆಟ್ರೋ ಹೊರ ವರ್ತುಲ ಮಾರ್ಗ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ

ಕೆ. ಆರ್. ಪುರಂನಿಂದ ಸಿಲ್ಕ್ ಬೋರ್ಡ್ ವರೆಗೂ ಸುಮಾರು 17 ಕಿಲೋಮೀಟರ್ ಉದ್ದದ ಮೆಟ್ರೋ ರೈಲು ಮಾರ್ಗ ನಿರ್ಮಾಣಕ್ಕೆ ರಾಜ್ಯಸಚಿವ ಸಂಪುಟ ಅನುಮೋದನೆ ನೀಡಿದೆ.

ಕಾರ್ಪೋರೇಟ್ ಸಹಭಾಗಿತ್ವದಲ್ಲಿ ಮೆಟ್ರೋ ಹೊರ  ವರ್ತುಲ ಮಾರ್ಗ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ
ಬೆಂಗಳೂರು ನಮ್ಮ ಮೇಟ್ರೋ ರೈಲಿನ (ಸಾಂದರ್ಭಿಕ ಟಿತ್ರ)
Published On :

ಬೆಂಗಳೂರು: ಕೆ. ಆರ್. ಪುರಂನಿಂದ ಸಿಲ್ಕ್ ಬೋರ್ಡ್ ವರೆಗೂ ಸುಮಾರು 17 ಕಿಲೋಮೀಟರ್ ಉದ್ದದ ಮೆಟ್ರೋ ರೈಲು ಮಾರ್ಗ ನಿರ್ಮಾಣಕ್ಕೆ ರಾಜ್ಯಸಚಿವ ಸಂಪುಟ ಅನುಮೋದನೆ ನೀಡಿದೆ.

ಮೆಟ್ರೋ 2(ಎ) ಯೋಜನೆಯಡಿ ಕಾಮಗಾರಿ ಆರಂಭಿಸಲಾಗುತ್ತಿದೆ. ಈ ಸಂಬಂಧ ಶೀಘ್ರ ಟೆಂಡರ್ ಕರೆಯಲು ಬಿಎಂಆರ್ ಸಿಎಲ್ ಚಿಂತನೆ ನಡೆಸಿದೆ.

ಇಂಟೆಲ್ ಹಾಗೂ ಎಂಬೆಸಿ ಕಂಪನಿಗಳ ಸಹಭಾಗಿತ್ವದಲ್ಲಿ 4.202 ಕೋಟಿ ರೂ ಮೊತ್ತದಲ್ಲಿ ಹೊರ ವರ್ತುಲ ಮಾರ್ಗ ನಿರ್ಮಿಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ಈ ಯೋಜನೆಯಡಿ ಭೂಮಿ ಗುತ್ತಿಗೆ ಕೆಲಸಕ್ಕಾಗಿ ಬಿಎಂಆರ್ ಸಿಎಲ್ 250 ಕೋಟಿ ಕ್ರೋಢಿಕರಿಸುತ್ತಿದೆ. 200 ಕೋಟಿ ಮೊತ್ತವನ್ನು  ಖಾಸಗಿ ಕಂಪನಿಗಳಿಂದ ಸಂಗ್ರಹಿಸಲಾಗುತ್ತಿದೆ ಎಂದು  ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ತಿಳಿಸಿದ್ದಾರೆ.

ಬೆಳ್ಳಂದೂರು ಮೆಟ್ರೋ ನಿಲ್ದಾಣ ಅಭಿವೃದ್ಧಿಗಾಗಿ ಇಂಟೆಲ್ ಸಂಸ್ಥೆಯೊಂದಿಗೆ ಹಾಗೂ ಕಾಡುಬೀಸನಹಳ್ಳಿ ಮೆಟ್ರೋ ನಿಲ್ದಾಣದ ಅಭಿವೃದ್ಧಿಗಾಗಿ ಎಂಬೆಸಿ ಕಂಪನಿಯೊಂದಿಗೆ ಕೆಲ ತಿಂಗಳ ಹಿಂದೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕೆ. ಆರ್ . ಪುರಂ ಕೇಂದ್ರ ನಿಲ್ದಾಣವಾಗಿದ್ದು, ಮಹದೇವಪುರ, ಡಿಆರ್ ಡಿಒ ಕ್ರೀಡಾ ಸಂಕೀರ್ಣ, ದೊಡ್ಡನಕ್ಕುಂದಿ, ಇಸ್ರೋ, ಮಾರತ್ ಹಳ್ಳಿ, ಕಾಡುಬೀಸನಹಳ್ಳಿ. ಬೆಳ್ಳಂದೂರು, , ಇಬ್ಬಲೂರು, ಅಗರ ಕೆರೆ, ಎಚ್. ಎಸ್, ಆರ್ ಲೇಔಟ್, ಮತ್ತು ಸಿಲ್ಕ್ ಬೋರ್ಡ್  ನಿಲ್ದಾಣ ಸೇರಿದಂತೆ ಒಟ್ಟು 13 ನಿಲ್ದಾಣಗಳು ಬರಲಿವೆ.

 2020ರೊಳಗೆ ಈ ಮಾರ್ಗ ಪೂರ್ಣಗೊಳ್ಳಲಿದ್ದು, ಮೂರರಿಂದ 5 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.