ರಾಜ್ಯ

ಬೆಂಗಳೂರಿನ 11 ಕಡೆ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಪಾಯಿಂಟ್ ಶಿಘ್ರದಲ್ಲೇ ಪ್ರಾರಂಭ

ಇದೇ ಫೆಬ್ರವರಿ 15ರಿಂದ ಬೆಂಗಳೂರು ಕೆಆರ್ ವೃತ್ತದಲ್ಲಿರುವ ಬೆಸ್ಕಾಂ ಕಛೇರಿಯಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸೌಲಭ್ಯ ದೊರೆಯಲಿದೆ.

ಬೆಂಗಳೂರಿನ 11 ಕಡೆ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಪಾಯಿಂಟ್ ಶಿಘ್ರದಲ್ಲೇ  ಪ್ರಾರಂಭ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ಇದೇ ಫೆಬ್ರವರಿ 15ರಿಂದ ಬೆಂಗಳೂರು ಕೆಆರ್ ವೃತ್ತದಲ್ಲಿರುವ ಬೆಸ್ಕಾಂ ಕಛೇರಿಯಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸೌಲಭ್ಯ ದೊರೆಯಲಿದೆ. "ವಿಧಾನ ಸೌಧ ಸೇರಿದಂತೆ  ನಗರದ 11 ಪ್ರಮುಖ ಸ್ಥಳಗಳಲ್ಲಿ ಇಂತಹಾ ಚಾರ್ಜಿಂಗ್ ತಾಣಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದ್ದು ಅವುಗಳಲ್ಲಿ ಇದು ಮೊದಲ ತಾಣವಾಗಲಿದೆ" ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಹೊಸ ಸಂಪರ್ಕ, ಹೆಸರು ಹಾಗೂ ಸುಂಕದ ಬದಲಾವಣೆ ಸೇರಿ ವಿವಿಧ ಚಟುವಟಿಕೆಗಳನ್ನು 24 ಗಂಟೆಗಳಲ್ಲಿ ನಿರ್ವಹಿಸಿಉವ ಪಾಸ್ಟ್ ಟ್ರ್ಯಾಕ್ ಯೋಜನೆ ಸವಿ ಕಿರಣ ಗೆ ಚಾಲನೆ ನೀಡಿ ಸಚಿವರು ಮಾತನಾಡಿದರು.
ಈ ಫಾಸ್ಟ್ ಟ್ರ್ಯಾಕ್ ಚಾರ್ಜಿಂಗ್ ಕೇಂದ್ರಗಳ ಕಾರ್ಯಾಚರಣೆಯನ್ನು ಎಲೆಕ್ಟ್ರಿಕ್ ಕಾರ್ ಖರೀದಿದಾರರು ಕಾಯುತ್ತಿದ್ದು ಇದೊಂದು ಕ್ರಾಂತಿಕಾರಕ ಬದಲಾವಣೆ ತರುವ ಯೋಜನೆಯಾಗಿದೆ. ಇಷ್ಟಲ್ಲದೆ ಬೆಸ್ಕಾಂ ತನ್ನ ನೌಕರೈಗಾಗಿ 100 ಎಲೆಕ್ಟ್ರಿಕ್ ವಾಹನಗಳನ್ನು ಬಾಡಿಗೆಗೆ ಪಡೆಯುವ ಅಥವಾ ಖರೀದಿಸುವ ಗುರಿ ಹೊಂದಿದೆ ಎನ್ನಲಾಗಿದೆ. 
"ಚಾರ್ಜಿಂಗ್ ಸ್ಟೇಷನ್ ಗಾಗಿ ಸುಂಕವನ್ನು ವಿಧಿಸಲು ನಾವು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್ ಸಿ) ಒಂದು ಪ್ರಸ್ತಾಪವನ್ನು ಕಳುಹಿಸಿದ್ದೇವೆ. ಸಾರ್ವಜನಿಕರು  ಈ ಸೌಕರ್ಯಗಳನ್ನು ಬಳಸಿಕೊಳ್ಳಬಹುದು" ಬೆಸ್ಕಾಂ ನ ವ್ಯವಸ್ಥಾಪಕ ನಿರ್ದೇಶಕ ಪಿ.ರಾಜೇಂದ್ರ ಚೋಳನ್ ಹೇಳಿದ್ದಾರೆ. ಬೆಸ್ಕಾಂ ನ 49 ಉಪ ವಿಭಾಗಗಳಲ್ಲಿ ಸವಿ ಕಿರಣ ಯೋಜನೆ ಬುಧವಾರದಿಂದ ಪ್ರಾರಂಭಗೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.