ರಾಜ್ಯ

ರಮ್ಯಾ ವಿರುದ್ಧ ಬಿಜೆಪಿ ದೂರು: ಬಿಜೆಪಿ ಕಿಡಿಗೇಡಿಗಳಿಂದ ತಿರುಚಿದ ವಿಡಿಯೋ ಎಂದ ಕಾಂಗ್ರೆಸ್

ಕಾಂಗ್ರೆಸ್ ಎಐಸಿಸಿ ಸಾಮಾಜಿಕ ಜಾಲತಾಣ ಮತ್ತು ಡಿಜಿಟಲ್ ಸಂಪರ್ಕ ವಿಭಾಗದ ಮುಖ್ಯಸ್ಥೆ ರಮ್ಯಾ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಜ್ಯ ಬಿಜೆಪಿ ಘಟಕ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದೆ.

ರಮ್ಯಾ ವಿರುದ್ಧ ಬಿಜೆಪಿ ದೂರು: ಬಿಜೆಪಿ ಕಿಡಿಗೇಡಿಗಳಿಂದ ತಿರುಚಿದ ವಿಡಿಯೋ ಎಂದ ಕಾಂಗ್ರೆಸ್
ರಮ್ಯಾವಿರುದ್ಧ ದೂರು ದಾಖಲಿಸಿದ ಬಿಜೆಪಿ ವಕ್ತಾರೆ ಮಾಳವಿಕಾ ಅವಿನಾಶ್ ನೇತೃತ್ವದ ನಿಯೋಗದ ಚಿತ್ರ
Published On :

ಬೆಂಗಳೂರು: ಕಾಂಗ್ರೆಸ್ ಎಐಸಿಸಿ ಸಾಮಾಜಿಕ ಜಾಲತಾಣ  ಮತ್ತು ಡಿಜಿಟಲ್ ಸಂಪರ್ಕ ವಿಭಾಗದ ಮುಖ್ಯಸ್ಥೆ ರಮ್ಯಾ  ಅವರು ನಕಲಿ ಫೇಸ್ಬುಕ್ ಖಾತೆ ತೆರೆಯುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಜ್ಯ ಬಿಜೆಪಿ ಘಟಕ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದೆ.

 ಬಿಜೆಪಿ ವಕ್ತಾರೆ ಮಾಳವಿಕಾ ಅವಿನಾಶ್ ನೇತೃತ್ವದ ನಿಯೋಗ ನಗರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ದೂರು ದಾಖಲಿಸಿದೆ.

ನಕಲಿ ಖಾತೆ ತೆರೆಯುವಂತೆ ಪಕ್ಷದ ಕಾರ್ಯಕರ್ತರಿಗೆ ಪ್ರೋತ್ಸಾಹಿಸುವ ಮೂಲಕ ವಂಚಿಸಲಾಗುತ್ತಿದೆ. ಇಂತಹ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದ್ದು, ರಾಜಕೀಯ ಪಕ್ಷಗಳ ಮುಖಂಡರು ಇದಕ್ಕೆ ಪೋತ್ಸಾಹಿಸುತ್ತಿರುವುದು ಖಂಡನಾರ್ಹವಾದದ್ದು ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ಇಂತಹ ಆರೋಪವನ್ನು ರಮ್ಯಾ ಹಾಗೂ ಕಾಂಗ್ರೆಸ್  ಸಾಮಾಜಿಕ ಘಟಕ ನಿರಾಕರಿಸಿದೆ. ಬಿಜೆಪಿಯ ಕಿಡಿಗೇಡಿಗಳು ತಿರುಚಿದ ವಿಡಿಯೋ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಸಾಮಾಜಿಕ ಜಾಲ ಘಟಕ ಆರೋಪಿಸಿದೆ.

ಬಿಜೆಪಿಯ ಕಿಡಿಗೇಡಿಗಳು ತಿರುಚಿದ ವಿಡಿಯೋ ಸೃಷ್ಟಿಸುತ್ತಿದ್ದು, ಇದರ ಬಗ್ಗೆ ಬಿಜೆಪಿ ಮಾಹಿತಿ ನೀಡಬೇಕೆಂದು ಕೆಪಿಸಿಸಿ ಸಾಮಾಜಿಕ ಘಟಕದ ಅಧ್ಯಕ್ಷ ಶ್ರೀವಾಸ್ತವ ಒತ್ತಾಯಿಸಿದ್ದಾರೆ.



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.