ಮೈಸೂರು ದಸರಾ :ಆರು ತಿಂಗಳು ಆದರೂ ಬಿಲ್ ಪಾವತಿಸದ ಸರ್ಕಾರ!
ಮೈಸೂರು ದಸರಾ ಮಹೋತ್ಸದ ಯಶಸ್ಸಿಗೆ ಕಾರಣರಾಗಿದ್ದ ಕಲಾವಿದರು, ಸಂಘಟಕರು, ಹಾಗೂ ಗುತ್ತಿಗೆದಾರರ ಬಿಲ್ ಮರು ಪಾವತಿಯಾಗಿಲ್ಲ.

ಮೈಸೂರು: ಮೈಸೂರು ದಸರಾ ಮಹೋತ್ಸದ ಯಶಸ್ಸಿಗೆ ಕಾರಣರಾಗಿದ್ದ ಕಲಾವಿದರು, ಸಂಘಟಕರು, ಹಾಗೂ ಗುತ್ತಿಗೆದಾರರ ಬಿಲ್ ಮರು ಪಾವತಿಯಾಗಿಲ್ಲ. ದಸರಾ ಮುಗಿದು ಆರು ತಿಂಗಳು ಕಳೆಯುತ್ತಾ ಬರುತ್ತಿದ್ದರೂ ಸರ್ಕಾರ ಬಿಲ್ ಪಾವತಿಸದೆ ಸಾಕಷ್ಟು ತೊಂದರೆ ಎದುರಿಸುವಂತಾಗಿದೆ.
ಯುವದರ್ಶನ, ಕನ್ನಡ ಸಮ್ಮೇಳನ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಧನ ಸಮಾವೇಶಕ್ಕಾಗಿ ಅತ್ಯುತ್ತಮ ವೇದಿಕೆ ನಿರ್ಮಾಣ ಮಾಡಿದ್ದವರಿಗೂ ಜಿಲ್ಲಾಡಳಿತ ಬಿಲ್ ಪಾವತಿಸಿಲ್ಲ.
ಸಾಮಾಜಿಕ ನ್ಯಾಯ ಸ್ತಬ್ದ ಚಿತ್ರಕ್ಕಾಗಿ ಬಹುಮಾನ ಪಡೆದಿದ್ದ ಕಲಾವಿದ ಗೋಪಾಲ್, ಆರು ಲಕ್ಷ ರೂ. ಬಾಕಿ ಬಿಲ್ ಪಾವತಿಗಾಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಕೈಗೊಂಡಿದ್ದಾರೆ.
ಸ್ತಬ್ದ ಚಿತ್ರ ನಿರ್ಮಾಣಕ್ಕಾಗಿ ಆರು ತಿಂಗಳ ಕಾಲ ಶ್ರಮಪಟ್ಟಿದೆ. ಬಡ್ಡಿಗೆ ಸಾಲ ತಂದು ಸ್ತಬ್ದ ಚಿತ್ರ ನಿರ್ಮಾಣ ಮಾಡಿದ್ದೆ. ಆದರೆ, ಸರ್ಕಾರದಿಂದ ಹಣ ಬಂದಿಲ್ಲದ ಕಾರಣ ಆರ್ಥಿಕ ಸಮಸ್ಯೆ ಎದುರಿಸುತ್ತಿರುವುದಾಗಿ ಅಳಲು ತೋಡಿಕೊಂಡಿದ್ದಾರೆ.
ಆಹಾರ ಮೇಳ, ಸಂಗೀತ ಉತ್ಸವ, ಅಂತಾರಾಷ್ಟ್ರೀಯ ಸಮ್ಮೇಳನಕ್ಕಾಗಿ ಪ್ರಕಾಶ್ 55 ಲಕ್ಷ ರೂ. ವೆಚ್ಚ ಮಾಡಿದ್ದಾರೆ. ಆದರೆ, ಈ ಹಣವನ್ನು ಸರ್ಕಾರ ಇನ್ನೂ ಕೂಟ್ಟಿಲ್ಲ. ಅಧಿಕ ಬಡ್ಡಿಗೆ ಸಾಲ ತಂದು ಕಾರ್ಯಕ್ರಮ ಯಶಸ್ವಿಗೊಳಿಸಲಾಗಿತ್ತು. ಆದರೆ, ಇದೀಗ ಸರ್ಕಾರದಿಂದ ಹಣಬಾರದೆ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಅವರು ಹೇಳುತ್ತಾರೆ.
ಶೀಘ್ರದಲ್ಲಿಯೇ ಎಲ್ಲಾ ಬಿಲ್ ಪಾವತಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಿ. ರಂದೀಪ್ ಹೇಳಿದ್ದಾರೆ. 10.75 ಕೋಟಿ ಬಿಡುಗಡೆ ಮಾಡುವುದಾಗಿ ಸರ್ಕಾರ ಹೇಳಿತ್ತು. ಆದರೆ. 5 ಕೋಟಿ ಬಿಡುಗಡೆಯಾಗಿದ್ದು, ಉಳಿದ ಹಣದ ಬಿಡುಗಡೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಾಲಯದೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


