ವಿಶೇಷ ಸೌಲಭ್ಯಗಳಿಲ್ಲದಿದ್ದರೂ, ವಿಜಯ ಪತಾಕೆ ಹಾರಿಸಿದ ಕರ್ನಾಟಕ ಎನ್ ಸಿಸಿ ಕ್ಯಾಡೆಟ್ ಗಳು
ರಾಷ್ಟ್ರೀಯ ಕ್ಯಾಡೆಟ್ ಕಾರ್ಪ್ಸ್(ಎನ್ ಸಿಸಿ) ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯ ...

Published On :
ಬೆಂಗಳೂರು: ರಾಷ್ಟ್ರೀಯ ಕ್ಯಾಡೆಟ್ ಕಾರ್ಪ್ಸ್(ಎನ್ ಸಿಸಿ) ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯ ಈ ವರ್ಷ ಗಣರಾಜ್ಯೋತ್ಸವದ ಪ್ರಧಾನ ಮಂತ್ರಿಯವರ ರ್ಯಾಲಿಯ ಬ್ಯಾನರ್ ನಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಕ್ಯಾಡೆಟ್ ಗಳನ್ನು ನಿನ್ನೆ ಸನ್ಮಾನಿಸಲಾಯಿತು.
1979ರ ನಂತರ ಕರ್ನಾಟಕ ಮತ್ತು ಗೋವಾ ಕ್ಯಾಡೆಟ್ 11 ಬಾರಿ ಮೊದಲ ಸ್ಥಾನ ಮತ್ತು 12 ಬಾರಿ ರನ್ನರ್ ಅಪ್ ಪ್ರಶಸ್ತಿ ಗಳಿಸಿಕೊಂಡಿದೆ.ಈ ವರ್ಷ ದೆಹಲಿಯಲ್ಲಿ ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕದ 97 ಕ್ಯಾಡೆಟ್ ಗಳನ್ನು ಹೊಂದಿರುವ 106 ಕ್ಯಾಡೆಟ್ ಕಾಂಟಿಂಜೆಂಟ್ ಮತ್ತು ಗೋವಾದ 9 ಕ್ಯಾಡೆಟ್ ಗಳು ಮೂರನೇ ಸ್ಥಾನ ಪಡೆದುಕೊಂಡಿವೆ.
ಆದರೆ ಕರ್ನಾಟಕದಲ್ಲಿ ಕ್ಯಾಡೆಟ್ ಗಳ ತರಬೇತಿ ಕೇಂದ್ರದಲ್ಲಿ ಸೌಲಭ್ಯಗಳ ಕೊರತೆ ಅಪಾರವಾಗಿದೆ.ಫೈರಿಂಗ್ ರೇಂಜ್, ಒಬ್ಸ್ಟೆಕಲ್ ಕೋರ್ಸ್, ಡ್ರಿಲ್ ಸ್ಕ್ವೇರ್, ಫ್ಲೈಯಿಂಗ್ ಅಂಡ್ ಫೈರಿಂಗ್, ಆಡಿಟೊರಿಯಂ, ಕಚೇರಿ ಮತ್ತು ಕ್ಯಾಡೆಟ್ ಗಳು ಹಾಗೂ ಸಿಬ್ಬಂದಿ ಸೌಕರ್ಯವಿರುವ ರಾಷ್ಟ್ರೀಯ ಕ್ಯಾಡೆಟ್ ಕೋರ್ ಅಕಾಡೆಮಿಯನ್ನು ರಾಯಚೂರಿನಲ್ಲಿ ಸ್ಥಾಪಿಸುವಂತೆ ನಾವು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದೇವೆ ಎನ್ನುತ್ತಾರೆ ಕರ್ನಾಟಕ ಮತ್ತು ಗೋವಾ ಎನ್ ಸಿಸಿ ನಿರ್ದೇಶನಾಲಯದ ನಿರ್ದೇಶಕ ಕೆಬಿ ಜೈರಾಜ್.
ಕರ್ನಾಟಕ ಮತ್ತು ಗೋವಾ ಎನ್ ಸಿಸಿ ಕ್ಯಾಡೆಟ್ ಗಳು ದೆಹಲಿಯಲ್ಲಿ ಕಳೆದ ತಿಂಗಳು 28ರಂದು ನಡೆದ ಪ್ರಧಾನ ಮಂತ್ರಿಯವರ ಎನ್ ಸಿಸಿ ಗಣರಾಜ್ಯೋತ್ಸವ ದಿನ ಶಿಬಿರದಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ದೆಹಲಿPrime MinisterDelhiRepublic Dayಗಣರಾಜ್ಯೋತ್ಸವಪ್ರಧಾನ ಮಂತ್ರಿKarnataka NCC cadetಕರ್ನಾಟಕ ಕ್ಯಾಡೆಟ್ ಗಳು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


