ರಾಜ್ಯ

ಬೆಂಗಳೂರು; ಸಜೀವ ದಹನಕ್ಕೆ ಕಾರಿನ ಎಸಿಯಲ್ಲುಂಟಾದ ಶಾರ್ಟ್ ಸರ್ಕ್ಯೂಟ್ ಕಾರಣ

ತಾಂತ್ರಿಕ ದೋಷದಿಂದಾಗಿ ಕಾರಿನ ಎಸಿಯಲ್ಲಿ ಶಾರ್ಟ್ ಸರ್ಕ್ಯೂಟ್ ಉಟಾಗಿ ಬೆಂಕಿ ಕಾಣಿಸಿಕೊಕಂಡು ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡ ಪರಿಣಾಮ ತಾಯಿ ಮತ್ತು ಮಗು ಸಜೀವ ದಹನಗೊಂಡಿದ್ದರು ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಶನಿವಾರ ಹೇಳಿದ್ದಾರೆ...

ಬೆಂಗಳೂರು; ಸಜೀವ ದಹನಕ್ಕೆ ಕಾರಿನ ಎಸಿಯಲ್ಲುಂಟಾದ ಶಾರ್ಟ್ ಸರ್ಕ್ಯೂಟ್ ಕಾರಣ
ಸಜೀವ ದಹನಗೊಂಡ ಮಹಿಳೆ ಹಾಗೂ ನಾಲ್ಕು ವರ್ಷದ ಬಾಲಕ ಪರಮ್
Published On :
ಬೆಂಗಳೂರು; ತಾಂತ್ರಿಕ ದೋಷದಿಂದಾಗಿ ಕಾರಿನ ಎಸಿಯಲ್ಲಿ ಶಾರ್ಟ್ ಸರ್ಕ್ಯೂಟ್ ಉಟಾಗಿ ಬೆಂಕಿ ಕಾಣಿಸಿಕೊಕಂಡು ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡ ಪರಿಣಾಮ ತಾಯಿ ಮತ್ತು ಮಗು ಸಜೀವ ದಹನಗೊಂಡಿದ್ದರು ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಶನಿವಾರ ಹೇಳಿದ್ದಾರೆ. 
ನೆಲ್ಲೂರಹಳ್ಳಿಯ ಸುಮಧುರಂ ಆನಂದಂ ಅಪಾರ್ಟ್'ಮೆಂಟ್'ನ ಪಾರ್ಕಿಂಗ್ ನಲ್ಲಿ ಶುಕ್ರವಾರವಷ್ಟೇ ಮಾರುತಿ ರಿಡ್ಜ್ ವರ್ಮಾ ಹಾಗೂ ಅವರ 4 ವರ್ಷದ ಮಗು ಪರಮ್ ಸಜೀವವಾಗಿ ದಹನಗೊಂಡಿದ್ದರು. 
ಘಟನೆ ಬಳಿಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ತಾಂತ್ರಿಕ ದೋಷದಿಂದಾಗಿ ಕಾರಿನಲ್ಲಿದ್ದ ಎಸಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದೆ. ಬಳಿಕ ವೈರ್ ಗಳು ಸುಟ್ಟು ಹೊಗೆ ಬಂದಿದೆ. ಕೆಲವೇ ಕ್ಷಣಗಳಲ್ಲಿ ಕಾರಿನಲ್ಲಿ ಒಳಗೆ ಹೊಗೆ ಆವರಿಸಿದೆ. ಇದರಿಂದ ಡೋರ್ ಗಳೂ ಕೂಡ ಜಾಮ್ ಆಗಿವೆ. 
ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಭಯಭೀತರಾದ ನೇಹಾ ಅವರು ಮಗುವಿಗೆ ಹಾಕಿದ್ದ ಸೀಟ್ ಬೆಲ್ಟ್ ತೆಗೆಯಲು ಯತ್ನಿಸಿದ್ದಾರೆ. ಆದರೆ, ಸಾಧ್ಯವಾಗಿಲ್ಲ. ಹೊಗೆ ಆವರಿಸಿದ್ದ ಕಾರಣ ಇಬ್ಬರಿಗೂ ಉಸಿರಾಡಲು ಸಾಧ್ಯವಾಗಿಲ್ಲ. ಕೆಲವೇ ಕ್ಷಣಗಳಲ್ಲಿ ಕಾರಿನ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡಿದೆ. ಪರಿಣಾಮ ಕಾರಿನಲ್ಲಿ ಮಗು ಹಾಗೂ ತಾಯಿ ಇಬ್ಬರೂ ಸಜೀವ ಸುಟ್ಟು ಹೋಗಿದ್ದಾರೆಂದು ಮೂಲಗಳು ತಿಳಿಸಿವೆ. 
ವಿಧಿ ವಿಜ್ಞಾನ ಪ್ರಯೋಗಾಲಯದ ಸಂಪೂರ್ಣ ವರದಿಗಾಗಿ ಕಾಯುತ್ತಿದ್ದೇವೆ. ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.