ರಾಜ್ಯ

ಡೋನಾಲ್ಡ್ ಟ್ರಂಪ್ ಜೊತೆ ಉಪಹಾರಕ್ಕೆ ಡಾ. ರಾಬರ್ಟ್ ಕ್ರಿಸ್ಟೊಫರ್ ಗೆ ಆಹ್ವಾನ

ವಾಷಿಂಗ್ಟನ್ ನಲ್ಲಿ ನಡೆಯಲಿರುವ 66ನೇ ವಾರ್ಷಿಕ ರಾಷ್ಟ್ರೀಯ ಪ್ರಾರ್ಥನಾ ಉಪಹಾರಕೂಟದಲ್ಲಿ ಇದೇ 8ರಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಉಪಹಾರದಲ್ಲಿ ಪಾಲ್ಗೊಳ್ಳಲು...

ಡೋನಾಲ್ಡ್ ಟ್ರಂಪ್ ಜೊತೆ ಉಪಹಾರಕ್ಕೆ ಡಾ. ರಾಬರ್ಟ್ ಕ್ರಿಸ್ಟೊಫರ್ ಗೆ ಆಹ್ವಾನ
ಡೊನಾಲ್ಡ್ ಟ್ರಂಪ್, ಡಾ. ರಾಬರ್ಟ್ ಕ್ರಿಸ್ಟೊಫರ್
Published On :

ಬೆಂಗಳೂರು: ವಾಷಿಂಗ್ಟನ್ ನಲ್ಲಿ ನಡೆಯಲಿರುವ 66ನೇ ವಾರ್ಷಿಕ ರಾಷ್ಟ್ರೀಯ ಪ್ರಾರ್ಥನಾ ಉಪಹಾರಕೂಟದಲ್ಲಿ ಇದೇ 8ರಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಉಪಹಾರದಲ್ಲಿ ಪಾಲ್ಗೊಳ್ಳಲು ತಮಗೆ ಆಹ್ವಾನ ಬಂದಿದೆ ಎಂದು ಕ್ರೈಸ್ ಗ್ರೂಪ್ ಆಪ್ ಕಂಪನೀಸ್ ಮುಖ್ಯಸ್ಥ ಡಾ. ರಾಬರ್ಟ್ ಕ್ರಿಸ್ಟೊಫರ್ ತಿಳಿಸಿದ್ದಾರೆ.

ಅಮೆರಿಕಾ ಅಧ್ಯಕ್ಷರ ಜೊತೆ ಉಪಪಾರ ಕೂಟದಲ್ಲಿ ಭಾಗವಹಿಸುವಂತೆ ಅಮೆರಿಕಾ ಕಾಂಗ್ರೆಸ್ ಆತಿಥ್ಯ ಸಮಿತಿಯಿಂದ ಆಹ್ವಾನ ಬಂದಿರುವುದು ವಿಶೇಷ. ''ಇದೊಂದು ವಿಶೇಷ ಆಹ್ವಾನ, ಭಾರತದಿಂದ ಮಹಾರಾಷ್ಟ್ರದ ಮುಖ್ಯಮಂತ್ರಿ, ರಾಜ್ಯದ ಸಂಸದ ಶ್ರೀರಾಮುಲು ಮತ್ತು ನನಗೆ ಮಾತ್ರ ಈ ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ಬಂದಿದೆ ಎಂದು ಕ್ರಿಸ್ಟೊಫರ್ ತಿಳಿಸಿದರು.

ಅಮೆರಿಕಾದ ಶ್ವೇತಭವನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಿಶ್ವದ ಅನೇಕ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ. ವಿಶ್ವ ಶಾಂತಿ ಬಗ್ಗೆ ಅಲ್ಲಿ ಮಾತುಕತೆ ನಡೆಯಲಿದೆ. ಅಮೆರಿಕಾ ಅಧ್ಯಕ್ಷರು ನಡೆಸಿಕೊಂಡು ಬಂದಿರುವ ಸಂಪ್ರದಾಯವಿದು ಎನ್ನುತ್ತಾರೆ ಕ್ರಿಸ್ಟೊಫರ್.

ಅಮೆರಿಕಾದ ರಾಷ್ಟ್ರೀಯ ಪ್ರಾರ್ಥನಾ ಉಪಹಾರದ ಸಹಾಧ್ಯಕ್ಷರಾದ ಚಾರ್ಲಿ ಕ್ರಿಸ್ಟ್ ಮತ್ತು ರ್ಯಾಂಡಿ ಹುಲ್ಟ್ ಗ್ರೆನ್ ಅವರು ಆಹ್ವಾನ ಕುರಿತು ಪತ್ರ ಬರೆದಿದ್ದಾರೆ. ಇದೊಂದು ನಮ್ಮ ನಡುವಿನ ಭಿನ್ನಾಭಿಪ್ರಾಯ ಮರೆತು ವೈಯಕ್ತಿಕ ಸಂಬಂಧವನ್ನು ಬೆಳೆಸಲು ಮತ್ತು ಅಂತಾರಾಷ್ಟ್ರೀಯ ಬಾಂಧವ್ಯವನ್ನು ಇನ್ನಷ್ಟು ಆಳದವರೆಗೆ ವಿಸ್ತರಿಸಲು ಸಹಾಯವಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಫೆಬ್ರವರಿ 5ರಂದು ಅಮೆರಿಕಾಗೆ ತೆರಳುತ್ತಿರುವುದಾಗಿ ಕ್ರಿಸ್ಟೊಫರ್ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.