ಹೊಸ ವರ್ಷಾಚರಣೆಗೆ ಕೆಲವೇ ಗಂಟೆಗಳು ಬಾಕಿ: ಪೊಲೀಸರಿಂದ ತೀವ್ರ ಕಟ್ಟೆಚ್ಚರ
2018ರ ವರ್ಷ ಮುಗಿದು ಹೊಸ ವರ್ಷ 2019 ಕಾಲಿಡಲು ಇನ್ನು ಕೆಲವೇ ಗಂಟೆಗಳು ಬಾಕಿ.

ಬೆಂಗಳೂರು: 2018ರ ವರ್ಷ ಮುಗಿದು ಹೊಸ ವರ್ಷ 2019 ಕಾಲಿಡಲು ಇನ್ನು ಕೆಲವೇ ಗಂಟೆಗಳು ಬಾಕಿ. ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳು ಮತ್ತು ಪಟ್ಟಣಗಳಲ್ಲಿ ಯುವಕ-ಯುವತಿಯರು ಸೇರಿದಂತೆ ವಿವಿಧ ವಯೋಮಾನಗಳ ನಾಗರಿಕರು ಹೊಸ ವರ್ಷಾಚರಣೆಗೆ ಸಜ್ಜಾಗಿದ್ದಾರೆ.
ಎರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ನಡೆದ ಅಹಿತಕರ ಘಟನೆ ಮರುಕಳಿಸದಂತೆ ಪೊಲೀಸರು ಈ ಬಾರಿ ಬಿಗಿ ಭದ್ರತಾ ವ್ಯವಸ್ಥೆ, ಕಣ್ಗಾವಲು ಇರಿಸಿದ್ದಾರೆ. ಸಂಭ್ರಮದ ಹೆಸರಿನಲ್ಲಿ ಕಿಡಿಗೇಡಿತನ ನಡೆಸುವವರಿಗೆ ಪೊಲೀಸರು ಎಚ್ಚರಿಕೆಯನ್ನೂ ನೀಡಿದ್ದಾರೆ.
ಹೊಸ ವರ್ಷಾಚರಣೆ ಅದ್ಧೂರಿಯಾಗಿ ನಡೆಯುವ ಬೆಂಗಳೂರಿನ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಮಾತ್ರವಲ್ಲದೆ ಚರ್ಚ್‌ಸ್ಟ್ರೀಟ್, ಇಂದಿರಾನಗರ, ಮಾರತ್ತಳ್ಳಿ, ಜಯನಗರ ಮತ್ತಿತರ ಕಡೆ ಪೊಲೀಸರು ಭಾರಿ ಕಟ್ಟೆಚ್ಚರ ವಹಿಸಲಿದ್ದಾರೆ. ಮಫ್ತಿಯಲ್ಲಿ ಸಾವಿರಾರು ಪೊಲೀಸರು ನಿಗಾ ವಹಿಸಲಿದ್ದು, ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ತೀವ್ರ ಎಚ್ಚರಿಕೆ ವಹಿಸಲಾಗಿದೆ.
2,500 ಪೊಲೀಸ್ ವಾಹನಗಳು: ನಗರ ಕಮಿಷನರೇಟ್‌ನ ಸುಮಾರು 2,500ಕ್ಕೂ ಹೆಚ್ಚು ವಾಹನಗಳು ಇಂದು ಸಂಜೆ 7 ಗಂಟೆಯಿಂದ ನಾಳೆ ಬೆಳಗಿನವರೆಗೂ ಕರ್ತವ್ಯದಲ್ಲಿರುತ್ತವೆ. 270 ಹೊಯ್ಸಳ, 1700 ಚೀತಾ ಮತ್ತು ಎಲ್ಲ ಪೊಲೀಸ್ ಜೀಪ್‌ಗಳು ರಾತ್ರಿ ಪಾಳಿ ಗಸ್ತು ನಡೆಸಲಿವೆ. ಸೂಕ್ಷ್ಮ ಪ್ರದೇಶಗಳಲ್ಲಿ ಅಧಿಕಾರಿಗಳು ಸವೀರ್ಸ್ ರಿವಾಲ್ವರ್ ಮತ್ತು ಬಂದೂಕುಗಳ ಜತೆಗೆ ಕರ್ತವ್ಯ ನಿರ್ವಹಿಸಲಿದ್ದಾರೆ.
ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಇಂದು ನಗರದಾದ್ಯಂತ ಹೊಟೇಲ್, ಬಾರ್ ಅಂಡ್ ರೆಸ್ಟೋರೆಂಟ್ ಗಳು ಮಧ್ಯರಾತ್ರಿಯವರೆಗೂ ತೆರೆದಿರುತ್ತದೆ. ಪಾರ್ಟಿಯಲ್ಲಿ ಭಾಗಿಯಾಗುವ ಯುವಕ-ಯುವತಿಯರಿಗೆ ಖಾಸಗಿ ಭದ್ರತೆ ಒದಗಿಸಲು ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆದರೆ ಆಯೋಜಕರೇ ಹೊಣೆಯಾಗುತ್ತಾರೆ ಎಂದು ನಗರ ಪೊಲೀಸ್ ಆಯುಕ್ತ ಟಿ ಸುನಿಲ್ ಕುಮಾರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


