ರಾಜ್ಯ

ಮೂಡಿಗೆರೆ: ಪ್ರೀತಿ ವಿರೋಧಿಸಿದ್ದಕ್ಕೆ ವಿಷ ಸೇವಿಸಿದ ಪ್ರೇಮಿಗಳು, ಪ್ರೇಮಿ ಸಾವು, ಪ್ರೇಯಸಿ ಗಂಭೀರ

ಮನೆಯರು ಪ್ರೀತಿಯನ್ನು ವಿರೋಧಿಸಿದ ಕಾರಣ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆಯಲ್ಲಿ ಯುವಕ ಸಾವನ್ನಪ್ಪಿದ್ದು ಯುವತಿ ಸ್ಥಿತಿ ಗಂಬೀರವಾಗಿರುವ....

ಮೂಡಿಗೆರೆ: ಪ್ರೀತಿ ವಿರೋಧಿಸಿದ್ದಕ್ಕೆ ವಿಷ ಸೇವಿಸಿದ ಪ್ರೇಮಿಗಳು, ಪ್ರೇಮಿ ಸಾವು, ಪ್ರೇಯಸಿ ಗಂಭೀರ
ಸಂಗ್ರಹ ಚಿತ್ರ
Published On :
ಮೂಡಿಗೆರೆ: ಮನೆಯರು ಪ್ರೀತಿಯನ್ನು ವಿರೋಧಿಸಿದ ಕಾರಣ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆಯಲ್ಲಿ ಯುವಕ ಸಾವನ್ನಪ್ಪಿದ್ದು ಯುವತಿ ಸ್ಥಿತಿ ಗಂಬೀರವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ನಡೆದಿದೆ.
ಮೂಡಿಗೆರೆಯ ತಾಲೂಕಿನ ಎಸಗಲ್ ಗ್ರಾಮದ ತೋಟವೊಂದರಲ್ಲಿ ನಡೆದ ಘಟನೆಯಲ್ಲಿ ಕೀರ್ತಿ (22)  ಎಂಬ ಯುವಕ ವಿಷ ಸೇವಿಸಿ ಸಾವನ್ನಪ್ಪಿದ್ದಾನೆ. 21 ವರ್ಷದ ಯುವತಿ ಸ್ಥಿತಿ ಚಿಂತಾಜನಕವಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾಸನ ಸಮೀಪ ಕೊರಹಳ್ಳಿ ಗ್ರಾಮದ ಮೋಹನ್ ಕುಮಾರ ಅವರ ಪುತ್ರನಾದ ಕೀರ್ತಿ ಅದೇ ಪ್ರದೇಶದ ಯುವತಿಯನ್ನು ಪ್ರೀತಿಸುತ್ತಿದ್ದ. ಈ ವಿಚಾರ ಮನೆಯಲ್ಲಿ ತಿಳಿದ ನಂತರ ಮನೆಯವರು ವಿರೋಧಿಸಿದ್ದಾರೆ. ಈ ಸಂಬಂಧ ಹಾಸನ ನಗರ ಕೆ.ಆರ್.ಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೋಲೀಸರು ಇಬ್ಬರಿಂದ ಮುಚ್ಚಳಿಕೆ ಬರೆಸಿಕೊಂಡು ಕಳಿಸಿದ್ದಾರೆ.
ಇದಾಗಿ ಡಿಸೆಂಬರ್26ರಂದು ಪ್ರೇಮಿಗಳಿಬ್ಬರೂ ಮನೆ ಬಿಟ್ಟು ಪರಾರಿಯಾಗಿದ್ದು ಮತ್ತೆ ಹಿಂತಿರುಗಿರಲಿಲ್ಲ. ಗುರುವಾರ ರಾತ್ರಿ ಕೀರ್ತಿ ಹಾಗೂ ಯುವತಿ ಹೊಂಡಾ ಬೈಕ್ ನಲ್ಲಿ ಮೂಡಿಗೆರೆಯತತ್ಯೋಳ ರಸ್ತೆಯ ಹೆಸಗಲ್ ಚಂದ್ರೇಗೌಡ ಎಂಬುವವರ ತೋಟಕ್ಕೆ ತೆರಳಿದ್ದು ಅಲ್ಲಿ ವಿಷ ಸೇವಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ ತೋಟದ ಕೆಲಸಕ್ಕೆ ಆಗಮಿಸಿದ್ದ ಸ್ಥಳೀಯರು ಆಗಮಿಸಿದ ಬಳಿಕ ಘಟನೆ ಬೆಳಕು ಕಂಡಿದೆ. ಅಷ್ಟರಲ್ಲಿ ಯುವಕ ಸಾವನ್ನಪ್ಪಿದ್ದು ಯುವತಿ ಪ್ರಜ್ಞಾಹೀನ  ಸ್ಥಿತಿಯಲ್ಲಿದ್ದಳು.
ಸ್ಥಳೀಯರಿಂದ ಮಾಹಿತಿ ಪಡೆದೊಡನೆ ಸ್ಥಳಕ್ಕೆ ಆಗಮಿಸಿದ ಪೋಲೀಸರು ಯುವತಿಯನ್ನು ಎಂಜಿಎಂ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣದ ವಿವರ ಕುರಿತಂತೆ ಪೋಲೀಸರು ಇಬ್ಬರ ಕುಟುಂಬಗಳಿಗೆ ತಿಳಿಸಿದ್ದಾರೆ.ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.