ರಾಜ್ಯ

ಬೆಂಗಳೂರು: ಹೈಕೋರ್ಟ್ ನಲ್ಲಿ ಕೆಲಸಕ್ಕೆ ಸೇರೋಕೆ ಮೋದಿ ಸಹಿಯನ್ನೇ ನಕಲು ಮಾಡಿದ ಭೂಪ!

ರಾಜ್ಯ ಹೈಕೋರ್ಟ್ ನಲ್ಲಿ ಕೆಲಸಕ್ಕೆ ಸೇರಬೇಕೆಂಬ ಹಂಬಲದಿಂದ ಯುವಕನೊಬ್ಬ ಪ್ರಧಾನಿ ನರೇಂದ್ರ ಮೋದಿಯವರ ಸಹಿಯನ್ನೇ ನಕಲು ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು: ಹೈಕೋರ್ಟ್ ನಲ್ಲಿ ಕೆಲಸಕ್ಕೆ ಸೇರೋಕೆ ಮೋದಿ ಸಹಿಯನ್ನೇ ನಕಲು ಮಾಡಿದ ಭೂಪ!
ಸಂಗ್ರಹ ಚಿತ್ರ
Published On :
ಬೆಂಗಳೂರು: ರಾಜ್ಯ ಹೈಕೋರ್ಟ್ ನಲ್ಲಿ ಕೆಲಸಕ್ಕೆ ಸೇರಬೇಕೆಂಬ ಹಂಬಲದಿಂದ ಯುವಕನೊಬ್ಬ ಪ್ರಧಾನಿ ನರೇಂದ್ರ ಮೋದಿಯವರ ಸಹಿಯನ್ನೇ ನಕಲು ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಳಗಾವಿ ಮೂಲದ ಸಂಜಯ್ ಕುಮಾರ್ (30) ಎಂಬಾತನೇ ನರೇಂದ್ರ ಮೋದಿ ಅವರ ಸಹಿಯನ್ನು ನಕಲು ಮಾಡಿ ನ್ಯಾಯಾಲಯದಲ್ಲಿ ಕೆಲಸಕ್ಕೆ ಸ್ರಲು ನೋಡಿದ್ದ ಆರೋಪಿ. ಸಧ್ಯ ವಿಧಾನಸೌಧ ಪೋಲೀಸರು ಯುವಕ ಸಂಜಯ್ ನನ್ನು ಬಂಧಿಸಿದ್ದು ತನಿಖೆ ನಡೆಸಿದ್ದಾರೆ.
ಇತ್ತೀಚೆಹೆ ಹೈಕೋರ್ಟ್ ನಲ್ಲಿ ಬ್ಬೆರಳಚ್ಚುಗಾರರ ಹುದ್ದೆಗೆ (ಟೈಪಿಸ್ಟ್)ಅರ್ಜಿ ಆಹ್ವಾನಿಸಲಾಗಿತ್ತು. ಇದಕ್ಕೆ ಆರೋಪಿ ಸಾಂಜಯ್ ಕುಮಾರ್ ಸಹ ಅರ್ಜಿ ಹಾಕಿದ್ದ. ಆದರೆ ಅರ್ಜಿಯ ಜತೆಗೆ ಸಂಜಯ್ ಗೆ ಹೈಕೋರ್ಟ್ ನಲ್ಲಿ ಟೈಪಿಸ್ಟ್ ಹುದ್ದೆ ನೀಡಬೇಕೆಂದು  ಪ್ರಧಾನಿ ನರೇಂದ್ರ ಮೋದಿ ಆದೇಶ ನಿಡಿರುವಂತೆ ಪತ್ರವೊಂದನ್ನು ಸೃಷ್ಟಿಸಿದ್ದ ಈತ ಮೋದಿ ಅವರ ಸಹಿಯನ್ನು ನಕಲಿ ಮಾಡಿದ್ದನು.ಈ ಪತ್ರ ಹೈಕೋರ್ಟ್ ಡೆಪ್ಟಿ ಟೈಪಿಸ್ಟ್ ಅವರ ಕೈಸೇರಿದ್ದು ಇದರ ಸಂಬಂಧ ಅನುಮಾನ ವ್ಯಕ್ತಪಡಿಸಿದ ಅವರು ಸಂಜಯ್ ವಿರುದ್ಧ ವಿಧಾನಸೌಧ ಪೋಲೀಸರಿಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಪೋಲೀಸರು ಆರೋಪಿ ಸಂಜಯ್ ಕುಮಾರ್ ಅನ್ನು ವಶಕ್ಕೆ ಪಡೆದು ವಿಚಾರಿಸಿದಾಗ ನಕಲಿ ಸಹಿ ಮಾಡಿರುವುದು ಪತ್ತೆಯಾಗಿದೆ..

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.