ರಾಜ್ಯ

'ನಮ್ಮ ಮೆಟ್ರೋ' ಪಿಲ್ಲರ್‌ನಲ್ಲಿ ಬಿರುಕು: ದುರಸ್ಥಿಗಾಗಿ ಡಿ.22, ಡಿ.23ರಂದು ಸಂಚಾರ ಸ್ಥಗಿತ

ನಗರದ ಟ್ರಿನಿಟಿ ಮೆಟ್ರೋ ನಿಲ್ದಾಣದ ಪಿಲ್ಲರ್ ವೊಂದರಲ್ಲಿ ಬಿರುಕು ಬಿಟ್ಟಿರುವ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ...

'ನಮ್ಮ ಮೆಟ್ರೋ' ಪಿಲ್ಲರ್‌ನಲ್ಲಿ ಬಿರುಕು: ದುರಸ್ಥಿಗಾಗಿ ಡಿ.22, ಡಿ.23ರಂದು ಸಂಚಾರ ಸ್ಥಗಿತ
ಪಿಲ್ಲರ್ ಗೆ ಸಪೋರ್ಟಿಂಗ್ ಸ್ಟ್ರಕ್ಚರ್ ಅಳವಡಿಸಿರುವುದು.
Published On :
ಬೆಂಗಳೂರು: ನಗರದ ಟ್ರಿನಿಟಿ ಮೆಟ್ರೋ ನಿಲ್ದಾಣದ ಪಿಲ್ಲರ್ ವೊಂದರಲ್ಲಿ ಬಿರುಕು ಬಿಟ್ಟಿರುವ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಬಿಎಂಆರ್ಸಿಎಲ್ ದುರಸ್ಥಿ ಕಾರ್ಯ ಆರಂಭಿಸಿದ್ದು, ಈ ಹಿನ್ನೆಲೆಯಲ್ಲಿ ಡಿಸೆಂಬರ್ 22 ಮತ್ತು 23ರಂದು ಎಂ.ಜಿ.ರಸ್ತೆಯಿಂದ ಇಂದಿರಾನಗರದವರೆಗೆ ರೈಲು ಸಂಚಾರ ಸ್ಥಗಿತಗೊಳಿಸುವುದಾಗಿ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಅವರು ಶುಕ್ರವಾರ ತಿಳಿಸಿದ್ದಾರೆ.
ಈಗಾಗಲೇ ಟ್ರಿನಿಟಿ ಮೆಟ್ರೋ ನಿಲ್ದಾಣ ಸಮೀಪದ 155ನೇ ಪಿಲ್ಲರ್ ನ ಎರಡು ಕಡೆ ಸಪೋರ್ಟಿಂಗ್ ಸ್ಟ್ರಕ್ಚರ್ ಅಳವಡಿಸಲಾಗಿದ್ದು,  ಇನ್ನು ಹೆಚ್ಚುವರಿ ರಿಪೇರಿಗಾಗಿ ಮುಂದಿನ ಶನಿವಾರ ಮತ್ತು ಭಾನುವಾರ ಎರಡು ದಿನ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಲಿದೆ.
ಎಂಜಿ ರಸ್ತೆಯಿಂದ ಇಂದಿರಾನಗರದವರೆಗೆ ತನಕದ ನೇರಳೆ ಬಣ್ಣದ ಲೈನ್ ನಲ್ಲಿ ಮೆಟ್ರೋ ಸಂಚಾರ ಸ್ಧಗಿತಗೊಳ್ಳಲಿದೆ. ಎಂ.ಜಿ.ರಸ್ತೆಯಿಂದ ಬಿಎಂಟಿಸಿ ಬಸ್ ನಲ್ಲಿ ತೆರಳಲು ಉಚಿತ ಪಾಸ್ ನೀಡುವುದಾಗಿ ಅಜಯ್ ಸೇಠ್ ಅವರು ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ಇಂತಹ ಸಮಸ್ಯೆ ಎದುರಾಗಿದೆ. ದುರಸ್ಥಿ ಕಾರ್ಯಕ್ಕಾಗಿ ದೆಹಲಿ ಮೆಟ್ರೋ ವಿಭಾಗದಿಂದ ಎಂಜಿನಿಯರ್ಗಳು, ತಜ್ಞರು ಆಗಮಿಸಿದ್ದು ವಾರಾಂತ್ಯ ದಿನದಲ್ಲಿ ಮೆಟ್ರೋ ಸಂಚಾರವನ್ನು ಸಂಪೂರ್ಣ ನಿಲ್ಲಿಸುವಂತೆ ಎಂಜಿನಿಯರ್ ಗಳು ಸಲಹೆ ನೀಡಿದ್ದಾರೆ ಎಂದು ಬಿಎಂಆರ್ ಸಿಎಲ್ ಸಾರ್ವಜನಿಕ ಸಂಪರ್ಕಧಿಕಾರಿ ಯಶ್ವಂತ್ ಚೌಹ್ವಾಣ್ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.