ರಾಜ್ಯ

'ಮದುವೆಯಾಗುವವಳಿಗೆ ಇದೆಲ್ಲಾ ತಿಳಿದಿರಬೇಕು' ಎಂದು ಅಪ್ರಾಪ್ತ ಮಗಳ ಮೇಲೆ ಪಾಪಿ ತಂದೆ ರೇಪ್!

ಕಾಮುಕ ತಂದೆಯೊಬ್ಬ ಕಳೆದ ಎರಡು ವರ್ಷಗಳಿಂದ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಮಾಡಿರುವ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

'ಮದುವೆಯಾಗುವವಳಿಗೆ ಇದೆಲ್ಲಾ ತಿಳಿದಿರಬೇಕು' ಎಂದು ಅಪ್ರಾಪ್ತ ಮಗಳ ಮೇಲೆ ಪಾಪಿ ತಂದೆ ರೇಪ್!
ಸಂಗ್ರಹ ಚಿತ್ರ
Published On :
ಬೆಂಗಳೂರು: ಕಾಮುಕ ತಂದೆಯೊಬ್ಬ ಕಳೆದ ಎರಡು ವರ್ಷಗಳಿಂದ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಮಾಡಿರುವ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. 
ಕಳೆದ ಎರಡು ವರ್ಷಗಳ ಹಿಂದೆ ಮನೆಯಲ್ಲಿ ಹೆಂಡತಿ ಇಲ್ಲದ ಸಂದರ್ಭದಲ್ಲಿ 14 ವರ್ಷದ ಮಗಳನ್ನು ಕರೆದು ಪಾಪಿ ತಂದೆ ನೀನು ಮುಂದೆ ಮದುವೆಯಾಗುವ ಹುಡುಗಿ ನಿನಗೆ ಇದೆಲ್ಲಾ ಗೊತ್ತಿರಬೇಕು ಎಂದು ಮಗಳನ್ನೇ ತಮ್ಮ ಕಾಮತೃಷೆಗೆ ಬಳಸಿಕೊಂಡಿದ್ದಾನೆ. ಅಲ್ಲದೆ ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. 
ಪಾಪಿ ತಂದೆಯನ್ನು ಅಮೀರ್ ಎಂದು ಗುರುತಿಸಲಾಗಿದೆ. ತಂದೆಯ ವರ್ತನೆಯಿಂದ ಬೇಸತ್ತ ಮಗಳು ಕೊನೆಗೆ ತನ್ನ ತಾಯಿ ಬಳಿ ಈ ವಿಚಾರವನ್ನು ಹೇಳಿಕೊಂಡಿದ್ದಾಳೆ. ಕೂಡಲೇ ಸಂತ್ರಸ್ತ ಬಾಲಕಿಯ ತಾಯಿ ಬನಶಂಕರಿ ಪೊಲೀಸ್ ಠಾಣೆಗೆ ತೆರಳಿ ತನ್ನ ಗಂಡನ ವಿರುದ್ಧ ಅತ್ಯಾಚಾರ ದೂರನ್ನು ದಾಖಲಿಸಿದ್ದಾಳೆ. 
ಮಹಿಳೆಯ ದೂರಿನನ್ವಯ ಅಮೀರ್ ವಿರುದ್ಧ ಐಪಿಸಿ ಸೆಕ್ಷನ್ 506, 376, 511 ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸದ್ಯ ಅಮೀರ್ ತಲೆಮರೆಸಿಕೊಂಡಿದ್ದು ಆತನ ಪತ್ತೆಯಾಗಿ ಪೊಲೀಸರು ಬಲೆ ಬೀಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.