ರಾಜ್ಯ

ಗೌರಿ, ಎಂಎಂ ಕಲ್ಬರ್ಗಿ ಕೊಲೆಗಳಿಗೆ ನಂಟಿದೆ: ಸುಪ್ರೀಂಗೆ ಕರ್ನಾಟಕ ಪೊಲೀಸರ ಮಾಹಿತಿ

ಪತ್ರಕರ್ತೆ ಗೌರಿ ಲಂಕೇಶ್ ಮತ್ತು ವಿಚಾರವಾದಿ ಎಂ.ಎಂ ಕಲ್ಬುರ್ಗಿ ಅವರ ಕೊಲೆಗಳ ನಡುವೆ ನಂಟಿದೆ ಎಂದು ಕರ್ನಾಟಕ ಪೊಲೀಸರು ಸುಪ್ರೀಂಕೋರ್ಟ್ ಗೆ ಮಾಹಿತಿ

ಗೌರಿ, ಎಂಎಂ ಕಲ್ಬರ್ಗಿ ಕೊಲೆಗಳಿಗೆ ನಂಟಿದೆ: ಸುಪ್ರೀಂಗೆ ಕರ್ನಾಟಕ ಪೊಲೀಸರ ಮಾಹಿತಿ
ಗೌರಿ ಲಂಕೇಶ್
Published On :
ನವದೆಹಲಿ: ಪತ್ರಕರ್ತೆ ಗೌರಿ ಲಂಕೇಶ್ ಮತ್ತು ವಿಚಾರವಾದಿ ಎಂ.ಎಂ ಕಲ್ಬುರ್ಗಿ ಅವರ ಕೊಲೆಗಳ ನಡುವೆ ನಂಟಿದೆ ಎಂದು ಕರ್ನಾಟಕ ಪೊಲೀಸರು ಸುಪ್ರೀಂಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.
ಎರಡು ಹತ್ಯೆಗಳಲ್ಲಿ ಸಾಮ್ಯತೆ ಹಾಗೂ ನಂಟು ಇರುವ ಕಾರಣ ಮೂರು ತಿಂಗಳೊಳಗೆ ಕಲ್ಬುರ್ಗಿ ಅವರ ಹತ್ಯೆ ಸಂಬಂಧ ಚಾರ್ಜ್ ಶೀಟ್ ದಾಖಲಿಸುವುದಾಗಿ ಹೇಳಿದ್ದಾರೆ. 
2015 ರಲ್ಲಿ  ಧಾರವಾಡದಲ್ಲಿ ಹತ್ಯೆಯಾದ ಎಂಎಂ ಕಲ್ಬುರ್ಗಿ ಅವರ ಪ್ರಕರಣವನ್ನು ನ್ಯಾಯಮೂರ್ತಿ ಯುಯು ಲಲಿತ್ ಮತ್ತು ನವಿನ್ ಸಿನ್ಹಾ ಅವರನ್ನೊಳಗೊಂಡ ಪೀಠ  ವಿಚಾರಣೆ ನಡೆಸಿತು.
ನವೆಂಬರ್ 26 ರಂದು ಕರ್ನಾಟಕ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದ ಸುಪ್ರೀಂಕೋರ್ಟ್ ನೀವು ಏನನ್ನೂ ಮಾಡದೇ ಸುಮ್ಮನೆ ಎಳೆದಾಡುತ್ತಿದ್ದೀರಿ ಎಂದು ತನಿಖೆ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿತ್ತು, ಪ್ರಕರಣವನ್ನು ಬಾಂಬೆ ಹೈಕೋರ್ಟ್ ಗೆ ವರ್ಗಾವಯಿಸುವುದಾಗಿ ತಿಳಿಸಿತ್ತು,

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.