ಬೆಂಗಳೂರು: ಅಪಾರ್ಟ್ ಮೆಂಟ್ ನಿಂದ ಬಿದ್ದ ಅಮೆರಿಕಾ ಮೂಲದ ಮಹಿಳೆ ಸಾವು
ಮದ್ಯದ ಅಮಲಿನಲ್ಲಿದ್ದ ಅಮೆರಿಕಾ ಮೂಲದ ಮಹಿಳೆಯೊಬ್ಬಳು ಅಪಾರ್ಟ್ ಮೆಂಟ್ ಮೇಲಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಜೀವನ್ ಭೀಮಾನಗರದಲ್ಲಿ ನಡೆದಿದೆ.

Published On :
ಬೆಂಗಳೂರು: ಮದ್ಯದ ಅಮಲಿನಲ್ಲಿದ್ದ ಅಮೆರಿಕಾ ಮೂಲದ ಮಹಿಳೆಯೊಬ್ಬಳು ಅಪಾರ್ಟ್ ಮೆಂಟ್ ಮೇಲಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಜೀವನ್ ಭೀಮಾನಗರದಲ್ಲಿ ನಡೆದಿದೆ.
ಸಾವಿಗೀಡಾದ ಮಹಿಳೆಯನ್ನು ಕೊಲಂಬಿಯಾ ಮೂಲದ ಕರೀನಾ ಡೇನಿಯಲ್ (25) ಎಂದು ಗುರುತಿಸಲಾಗಿದೆ.ನಾಲ್ಕು ವರ್ಷಗಳ ಹಿಂದೆ ಭಾರತಕ್ಕೆ ಆಗಮಿಸಿದ್ದ ಈಕೆ ದೆಹಲಿಯ ಕಂಪನಿಯೊಂದರಲ್ಲಿ ಅನುವಾದಕಿಯಾಗಿ ಮೂರು ವರ್ಷ ಕಾಲ ಸೇವೆ ಸಲ್ಲಿಸಿದ್ದರು. ಕಳೆದ ವರ್ಷ ಬೆಂಗಳೂರಿಗೆ ಆಗಮಿಸಿದ್ದ ಇವರು ಇಂದಿರಾನಗರದ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ತನ್ನ ಸಹೋದ್ಯೋಗಿ ಮರಿಯಾ ಎನ್ನುವವರ ಜತೆ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದ ಕರೀನಾ ಶನಿವಾರ ರಾತ್ರಿ ವೈಟ್ ಫೀಲ್ಡ್ ನಲ್ಲಿ ಆಯೋಜಿಸಿದ್ದ ಕ್ರಿಸ್ ಮಸ್ ಔತಣಕೂಟದಲ್ಲಿ ಭಾಗವಹಿಸಿ ಮನೆಗೆ ಹಿಂದಿರುಗಿದ್ದರು. ಆವೇಳೆ ಬೆಳಗಿನ ಜಾವ ೩ರ ಸುಮಾರಿಗೆ ಹೊರಗಿದ್ದ ಕರೀನಾ ಸಿಗರೇಟ್ ಸೇದಲು ಬಾಲ್ಕನಿಗೆ ಹೋದಾಗ ಮದ್ಯದ ಅಮಲಿನಲ್ಲಿ ಬಾಲ್ಕನಿಯಿಂದ ಕೆಳಕ್ಕೆ ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.
ಈ ವೇಳೆ ಒಳಗಿದ್ದ ಮರಿಯಾಗೆ ದೊಡ್ಡ ಶಬ್ದ ಕೇಳಿದೆ. ಆಕೆ ಹೊರಬಂದಾಗ ಕರೀನಾ ರಕ್ತದ ಮಡುವಿನಲ್ಲಿ ಬಿದ್ದಿದ್ದರು.
ಪೂರ್ವ ವಿಭಾಗದ ಡಿಜಿಪಿರಾಹುಲ್ ಕುಮಾರ್ ಮಾತನಾಡಿ "ಕರೀನಾ ಹೇಗೆ ಬಿದ್ದರೆನ್ನುವುದು ತಿಳಿದಿಲ್ಲ.ಮರಿಯಾ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ಕರೀನಾ ಸಾವಿನ ಸುದ್ದಿಯನ್ನು ರಾಯಭಾರ ಕಚೇರಿಗೆ ನೀಡಲಾಗಿದ್ದು, ರಾಯಭಾರ ಕಚೇರಿಯ ಅಧಿಕಾರಿಗಳ ಮೂಲಕ ಕರೀನಾ ಕುಟುಂಬಸ್ಥರಿಗೆ ಸಾವಿನ ಸುದ್ದಿಯನ್ನು ತಲುಪಿಸಲಾಗಿದೆ. ಅವರ ಅನುಮತಿ ಬಂದ ಬಳಿಕ ಮರಣೋತ್ತರ ಪರೀಕ್ಷೆ ನಡೆಯಬೇಕಿದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengaluruApartmentUS based womanJeevan Bheemanagarಯುಎಸ್ ಮೂಲದ ಮಹಿಳೆಅಪಾರ್ಟ್ ಮೆಂತ್ಜೀವನ್ ಭೀಮಾ ನಗರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


