ಬೆಂಗಳೂರು: 50 ಲಕ್ಷ ಕದ್ದ ದರೋಡೆಕೋರನ ಕಾಲಿಗೆ ಪೊಲೀಸರ ಗುಂಡೇಟು
ಬೆಂಗಳೂರಿನಲ್ಲಿ ಮತ್ತೆ ಪೋಲೀಸ್ ಗುಂಡಿನ ಸದ್ದು ಪ್ರತಿಧ್ವನಿಸಿದೆ. ಭಾನುವಾರ ಬೆಳಿಗ್ಗೆ 7 ಗಂಟೆ ವೇಳೆಗೆ ನಗರದ ವಿಶ್ವೇಶ್ವರಯ್ಯ ಲೇಔಟ್ ನಲ್ಲಿ ರೌಡಿ ಶೀಟರ್ ಓರ್ವನ ಕಾಲಿಗೆ......

Published On :
ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಪೋಲೀಸ್ ಗುಂಡಿನ ಸದ್ದು ಪ್ರತಿಧ್ವನಿಸಿದೆ. ಭಾನುವಾರ ಬೆಳಿಗ್ಗೆ 7 ಗಂಟೆ ವೇಳೆಗೆ ನಗರದ ವಿಶ್ವೇಶ್ವರಯ್ಯ ಲೇಔಟ್ ನಲ್ಲಿ ರೌಡಿ ಶೀಟರ್ ಓರ್ವನ ಕಾಲಿಗೆ ಗುಂಡು ಹಾರಿಸಿದ ಪೋಲೀಸರು ಅವನನ್ನು ವಶಕ್ಕೆ ಪಡೆದಿದ್ದಾರೆ.
ರೌಡಿ ಶೀಟರ್ ರಾಜೇಶ್ ಮುಕುಂದೇಗೌಡ ಕಾಲಿಗೆ ಪೋಲೀಸರು ಗುಂಡು ಹಾರಿಸಿದ್ದಾರೆ.ರಾಮುಗೌಡ ಎನ್ನುವವರ ಬಳಿಯಿಂದ 50 ಲಕ್ಷ ಹಣವನ್ನು ದರೋಡೆ ಮಾಡಿದ ಆರೋಪಿಗಳಾಗಿದ್ದ ರಾಜೇಶ್, ನಂದಕುಮಾರ್ ಮತ್ತು ಬಸವರಾಜ್‍ರನ್ನು ಬಂಧಿಸಲು ಪೋಲೀಸರು ಪ್ರಯತ್ನಿಸಿಸ್ದ್ದ ವೇಳೆ ಈ ಘಟನೆ ನಡೆದಿದೆ.
ಘಟನೆ ವಿವರ
ರಾಮುಗೌಡ ಎನ್ನುವವರ ಭೂಮಿ ಖರೀದಿಗಾಗಿ ಕಾಮಾಕ್ಷಿಪಾಳ್ಯ ಬ್ರಾಂಚ್‍ನ ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್‍ಗೆ ತೆರಳಿ ಅವರ ಸಂಬಂಧಿಕರ ಅಕೌಂಟ್ ನಿಂದ 50 ಲಕ್ಷ ರು. ಜುಲೈ 16ರಂದು ಡ್ರಾ ಮಾಡಿದ್ದರು.ಈ ಹಣವನ್ನು ಶ್ರೀಗಂಧ ಕಾವಲು, ಹೆಲ್ತ್ ಲೇಔಟ್‍ನಲ್ಲಿರುವ ಭಾಗ್ಯಮ್ಮ ಎನ್ನುವವರ ಮನೆಯಲ್ಲಿರಿಸಿದ್ದರು.ಜುಲೈ 17ರಂದು ಬೆಳಗ್ಗೆಕಾರಿನಲ್ಲಿ ಬಂದ ಆರೇಳು ಜನ ದರೋಡೆಕೋರರ ತಂಡ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು ಬೆದರಿಕೆ ಹಾಕಿ ಬೀರುವಿನಲ್ಲಿದ್ದ 50 ಲಕ್ಷ ಹಣವನ್ನು ಹೊತ್ತು ಪರಾರಿಯಾಗಿದೆ.
ಈ ಸಂಬಂಧ ರಾಮುಗೌಡ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ದೂರು ನೀಡಿದ್ದರು. ದರೋಡೆಕೋರರ ಪತ್ತೆಗಾಗಿ ತನಿಖೆ ಕೈಗೊಂಡಿದ್ದ ಪೋಲೀಸ್ ಪಡೆ ಮೋಹನ್ (27), ಶ್ರೀಶಾ ಕಾರಂತ್ (44), ಲಕ್ಷ್ಮಿ (35), ವಿನೋದ (21), ಗಂಗಾಧರ (21), ಯೋಗೇಶ (22), ಸಂದೀಪ್ (38), ದಿಲೀಪ್ (27), ಬಾಲಕೃಷ್ಣ (54), ಸವಿ (27), ಮಂಜುನಾಥ (35), ಅಬ್ದುಲ್ ರೆಹಮಾನ್ (29) ಮತ್ತು ಶಿವಕುಮಾರ್ ಎಂಬಾತನನ್ನು ಬಂಧಿಸಿತ್ತು. ಅಲ್ಲದೆ 12.30 ಲಕ್ಷ ರೂ. ಹಣ ಹಾಗೂ ಕೃತ್ಯಕ್ಕೆ ಬಳಸಲಾದ ವಾಹನವನ್ನು ವಶಕ್ಕೆ ಪಡೆಯಲಾಗಿತ್ತು. ಆದರೆ ಕೃತ್ಯದಲ್ಲಿ ಭಾಗವಹಿಸಿದ್ದ ಇನ್ನಷ್ಟು ಆರೋಪಿಗಳು ತಲೆ ಪ್ತಪ್ಪಿಸಿಕೊಂಡಿದ್ದಾರೆನ್ನುವುದು ವಿಚಾರಣೆ ವೇಳೆ ಪತ್ತೆಯಾಗಿದೆ. ಈ ಸಂಬಂಧ ಕ್ರಮಕ್ಕೆ ಮುಂದಾದ ಪೋಲೀಸರು ಆರೋಪಿಗಳು ಶನಿವಾರ ರಾತ್ರಿ ವಿಶ್ವೇಶ್ವರಯ್ಯ ಲೇಔಟ್‍ನ 8ನೆ ಬ್ಲಾಕ್‍ನಲ್ಲಿರುವುದನ್ನು ಪತ್ತೆ ಮಾಡಿದ್ದಾರೆ.ಪಿಎಸ್‍ಐ ರಾಜಶೇಖಯ್ಯ ಮತ್ತು ಅಪರಾಧ ವಿಭಾಗದ ಸಿಬ್ಬಂದಿ ಮಹೇಶ್‍ಕುಮಾರ್, ದೊರೆಸ್ವಾಮಿ ಆರೋಪಿಯನ್ನು ಬಂಧಿಸಲು ಹೋಗಿದ್ದಾರೆ.
ಈ ವೇಳೆ ಆರೋಪ್ಪಿಗಳು ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದಾರೆ.ಮಹೇಶ್ ಎಂಬ ಪೇದೆಯ ಮೇಲೆ ಹಲ್ಲೆ ನಡೆದ ಬೆನ್ನಿಗೇ ಇನ್ಸ್‌ಪೆಕ್ಟರ್ ಬಿ.ಸಿ.ರಾಜಶೇಖರಯ್ಯ ಗುಂಡು ಹಾರಿಸಿದ್ದು ಇದು ಆರೋಪಿ ರಾಜೇಶ್ ಕಾಲಿಗೆ ಹೊಕ್ಕಿದೆ.ಅವನನ್ನು ತಕ್ಷಣ ವಶಕ್ಕೆ ಅಪ್ಡೆದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾಗಿದೆ ಅಲ್ಲದೆ ನಂದಕುಮಾರ್ ಮತ್ತು ಬಸವರಾಜ್‍ರನ್ನು ಸಹ ಬಂಧಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


