ಹಿಮಾಚಲ ಪ್ರದೇಶದಲ್ಲಿ ನಾಪತ್ತೆಯಾಗಿರುವ ಬೆಂಗಳೂರು ಚಾರಣಿಗನಿಗಾಗಿ ತೀವ್ರ ಹುಡುಕಾಟ
ಬೆಂಗಳೂರು ಮೂಲದ ಚಾರಣಿಗನೋರ್ವ ಹಿಮಾಚಲ ಪ್ರದೇಶದ ಕಿನ್ನೌರ್ ಎಂಬ ಬುಡಕಟ್ಟು ಜಿಲ್ಲೆಯಲ್ಲಿ ಕಾಣೆಯಾಗಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ...

Published On :
ಶಿಮ್ಲಾ: ಬೆಂಗಳೂರು ಮೂಲದ ಚಾರಣಿಗನೋರ್ವ ಹಿಮಾಚಲ ಪ್ರದೇಶದ ಕಿನ್ನೌರ್ ಎಂಬ ಬುಡಕಟ್ಟು ಜಿಲ್ಲೆಯಲ್ಲಿ ಕಾಣೆಯಾಗಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಸತ್ಯ ನಾರಾಯಣ ಎಂಬುವವರೇ ಜು.25ರಂದೇ ಕಾಣೆಯಾಗಿದ್ದ ಚಾರಣಿಗ ಎಂದು ಹೇಳಲಾಗುತ್ತಿದೆ.
ಇತ್ತೀಚೆಗಷ್ಟೇ ಇಲ್ಲಿನ ನಿಚಾರ್ ಎಂಬಲ್ಲಿ ಮೃತ ದೇಹವೊಂದು ಮತ್ತೆಯಾಗಿದ್ದು, ಇದನ್ನು ಚಾರಣಿಗ ಸತ್ಯನಾರಾಯಣ ಅವರದ್ದೇ ಎಂದು ಭಾವಿಸಲಾಗಿತ್ತು. ಆದರೆ, ವಿಚಾರಣೆ ಬಳಿಕ, ಚಾರಣಿಗನ ಮೃತದೇಹ ಅಲ್ಲ ಎಂಬುದು ಖಚಿತವಾಗಿದೆ.
ಚಾರಣಿಗನ ಪತ್ತೆಗಾಗಿ ತೀವ್ರ ಶೋಧ ನಡೆದಿದ್ದು, ಶೀಘ್ರದಲ್ಲಿಯೇ ಪತ್ತೆ ಮಾಡಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಸುರ್ಚೋ ಮತ್ತು ಕೆಲ ಗ್ರಾಮಸ್ಥರು ಸತ್ಯ ಅವರನ್ನು ನೋಡಿರುವುದಾಗಿ ಹೇಳಿದ್ದಾರೆ ಎಂದು ಜಿಲ್ಲಾ ಎಸ್'ಪಿ ಸಾಕ್ಷಿ ವರ್ಮಾ ಅವರು ತಿಳಿಸಿದ್ದಾರೆ.
ಚಾರಣಕ್ಕೆ ಹೋಗಿದ್ದ ಸತ್ಯ ಅವರು ಆ.2 ರಂದು ನನ್ನನ್ನು ಮನಾಲಿಯಲ್ಲಿ ಭೇಟಿ ಮಾಡಬೇಕಿತ್ತು. ಪಂಗಿಯ ಛಮಬದಲ್ಲಿ ನಾವು ಟ್ರೆಕ್ಕಿಂಗ್ ಹೋಗಬೇಕಿತ್ತು. ಸತ್ಯ ಅವರನ್ನು ಭೇಟಿ ಮಾಡಲು ನಾವು ಸ್ಥಳಕ್ಕೆ ಹೋಗಿದ್ದೆವು. ಆದರೆ, ಅವರು ನಮ್ಮ ಸಂಪರ್ಕಕ್ಕೆ ಸಿಗಲಿಲ್ಲ. ಅಲ್ಲದೆ, ಜುಲೈ. 25ರಂದಷ್ಟೇ ಸತ್ಯ ಕುಟುಂಬಸ್ಥರೊಂದಿಗೆ ಮಾತನಾಡಿದ್ದರು ಎಂಬ ಮಾಹಿತಿ ತಿಳಿದುಬಂದಿತ್ತು. ಇದೇ ದಿನ ಸತ್ಯ ಅವರು ನನಗೂ ಕರೆ ಮಾಡಿದ್ದರು. ಎಂದು ಸತ್ಯ ಅವರ ಗೆಳೆಯ ವಿಕ್ರಮಮ್ ಮಲ್ಲಿಕ್ ಅವರು ಹೇಳಿದ್ದಾರೆ.
ಇನ್ನು ಸತ್ಯ ಅವರ ಪತ್ನಿ ಅನುರಾಧ ಹಾಗೂ ಕುಟುಂಬದ ಸ್ನೇಹಿತರಾದ ಕಿಶೋರ್ ರೆಡ್ಡಿಯವರು ಕಿನ್ನೌರ್ ಜಿಲ್ಲಾ ಮುಖ್ಯ ಕಚೇರಿಗೆ ತೆರಳಿದ್ದು, ಸಹಾಯ ಮಾಡುವಂತೆ ಸ್ಥಳೀಯ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.
ಜು.25ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಸತ್ಯ ಅವರು ಕೊನೆಯದಾಗಿ ಮಾತನಾಡಿದ್ದರು. ಇದಾದ ಬಳಿಕ ಅವರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅವರ ಬಗ್ಗೆ ಯಾವುದೇ ಮಾಹಿತಗಳು ದೊರೆಯುತ್ತಿಲ್ಲ ಎಂದು ಪತ್ನಿ ಅನುರಾಧಾ ಅವರು ಹೇಳಿದ್ದಾರೆ.
ಸತ್ಯ ಅವರು ಬೆಂಗಳೂರಿನಲ್ಲಿರುವ ಅಮೆರಿಕಾ ಮೂಲದ ಬಹುರಾಷ್ಟ್ರೀಯ ಕಂಪನನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಚಾರಣಕ್ಕೆ ತೆರಳಿದ್ದ ಸತ್ಯ ಅವರೂ ಆಗಸ್ಟ್ 22 ರಂದು ಬೆಂಗಳೂರಿಗೆ ಆಗಮಿಸಬೇಕಿತ್ತು. ಒಬ್ಬಂಟಿಯಾಗಿ ಚಾರಣಕ್ಕೆ ತೆರಳಿದ್ದ ಸತ್ಯ ಅವರಿಗಾಗಿ ಕುಟುಂಬಸ್ಥರು ಕಾದು ಕುಳಿತಿದ್ದರು.
ಪ್ರತೀ ವರ್ಷ 5-6 ಬಾರಿಯಾಗದರೂ ಸತ್ಯ ಅವರು ಒಬ್ಬಂಟಿಯಾಗಿ ಟ್ರೆಕ್ಕಿಂಗ್ ಹೋಗುತ್ತಿದ್ದರು. ನಗರದ ಹಲವು ಟ್ರೆಕ್ಕಿಂಗ್ ಕ್ಲಬ್ ಗಳು ಹಾಗೂ ಹಿಮಾಲಯ ಟ್ರೆಕ್ಕಿಂಗ್, ಮೌಂಟೇನೀರಿಂಗ್ ಗುಂಪುಗಳು ಸತ್ಯ ಅವರ ಫೋಟೋಗಳನ್ನು ಹಾಕಿಕೊಳ್ಳುತ್ತಿದ್ದವು ಎಂದು ಸತ್ಯ ಅವರ ಗೆಳೆಯ ವಿಕ್ರಮ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


