ಕೊಡಗು ಸಂತ್ರಸ್ತರಿಗೆ ನೆರವಾಗಲು ಮಾಂಸಾಹಾರ ತ್ಯಾಗ ಮಾಡಿದ ಕೈದಿಗಳು!
ಮಹಾ ಜಲಪ್ರಳಯಕ್ಕೆ ಕೊಡಗು ನಲುಗಿದ್ದು ಸಂತ್ರಸ್ತರ ನೆರವಿಗಾಗಿ ರಾಜ್ಯಾದ್ಯಂತ ನೆರವಿನ ಮಹಾಪೂರವೇ ಹರಿಸುತ್ತಿದ್ದಾರೆ...

Published On :
ಬೆಂಗಳೂರು: ಮಹಾ ಜಲಪ್ರಳಯಕ್ಕೆ ಕೊಡಗು ನಲುಗಿದ್ದು ಸಂತ್ರಸ್ತರ ನೆರವಿಗಾಗಿ ರಾಜ್ಯಾದ್ಯಂತ ನೆರವಿನ ಮಹಾಪೂರವೇ ಹರಿಸುತ್ತಿದ್ದಾರೆ.
ಇನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳು ಸಹ ತಮ್ಮ ಕೈಯಲ್ಲಿ ಆಗುವ ಸಣ್ಣ ಪ್ರಮಾಣದ ಸಹಾಯಕ್ಕೆ ಮುಂದಾಗಿದ್ದು ಈ ವಾರ ನೀಡಲಾಗುವ ಮಾಂಸಾಹಾರವನ್ನು ನಿಲ್ಲಿಸುವಂತೆ ಜೈಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ತಮ್ಮ ಈ ವಾರದ ಮಾಂಸಾಹಾರವನ್ನು ತ್ಯಾಗ ಮಾಡಿರುವ ಸುಮಾರು 4,500 ಕೈದಿಗಳು ಆ ಹಣವನ್ನು ಅಂದರೆ ಸುಮಾರು 2 ಲಕ್ಷ ರುಪಾಯಿಯನ್ನು ಕೊಡಗು ಸಂತ್ರಸ್ತರಿಗೆ ನೆರವಾಗಲು ಮುಖ್ಯಮಂತ್ರಿ ಪರಿಹಾರ ನಿಧಿಗೆ ಕಳುಹಿಸುವಂತೆ ಪತ್ರ ಬರೆದಿರುವುದಾಗಿ ಎಡಿಜಿಪಿ(ಕಾರಾಗೃಹ) ಎನ್ ಎಸ್ ಮೇಘರಿಕ್ ಅವರು ತಿಳಿಸಿದ್ದಾರೆ.
ಕೊಡಗಿನಲ್ಲಿ ಸಂಭವಿಸಿದ ಪ್ರವಾಹ, ಭೂಕುಸಿತದಲ್ಲಿ ಇಲ್ಲಿಯವರೆಗೂ 15 ಮಂದಿ ಮೃತಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengaluruInmatesಕೈದಿಗಳುParappana Agrahara Central Jailಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕೊಡಗು ಪ್ರವಾಹKodagu flood
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


