ಮಗನ ಮದುವೆಯ ಬೀಗರ ಊಟ ರದ್ಧು: ಕೊಡಗು ನೆರೆ ಸಂತ್ರಸ್ತರ ನಿಧಿಗೆ ಹಣ ನೀಡಿದ ಸಚಿವ ಸಿ.ಎಸ್ ಪುಟ್ಟರಾಜು!
ಮಗನ ಮದುವೆ ಮಾಡಿದ ಸಂಭ್ರಮದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಇದೀಗ ಬೀಗರ ಔತಣ ಕೂಟ ರದ್ದುಪಡಿಸಿ ಅದಕ್ಕೆ ಖರ್ಚಾಗುತ್ತಿದ್ದ 10 ...

Published On :
ಮಂಡ್ಯ: ಮಗನ ಮದುವೆ ಮಾಡಿದ ಸಂಭ್ರಮದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಇದೀಗ ಬೀಗರ ಔತಣ ಕೂಟ ರದ್ದುಪಡಿಸಿ ಅದಕ್ಕೆ ಖರ್ಚಾಗುತ್ತಿದ್ದ 10 ಲಕ್ಷ ರೂ. ಹಣವನ್ನು ಕೊಡಗು ನೆರೆ ಸಂತ್ರಸ್ತರ ನಿಧಿಗೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯ ಜನರ ಋಣ ನಮ್ಮ ಮೇಲಿದೆ. ಅವರು ಸಂಕಷ್ಟದಲ್ಲಿರುವಾಗ ನಾವಿಲ್ಲಿ ಔತಣಕೂಟ ಏರ್ಪಡಿಸಿಕೊಂಡು ಸಂಭ್ರಮಿಸುವುದು ಸರಿಯಲ್ಲ. ಅದಕ್ಕಾಗಿಯೇ ಆ.26ರಂದು ಏರ್ಪಡಿಸಿದ್ದ ಬೀಗರ ಔತಣಕೂಟ ಸಮಾರಂಭ ರದ್ದುಪಡಿಸಿ ಅದಕ್ಕೆ ಖರ್ಚಾಗುವ ಹಣವನ್ನು ಕೊಡಗು ಸಂತ್ರಸ್ತರ ಪರಿಹಾರ ನಿಧಿಗೆ ನೀಡುವುದೇ ಉತ್ತಮ ಎಂದು ನಿರ್ಧರಿಸಿ ತೀರ್ಮಾನ ಕೈಗೊಂಡಿದ್ದೇವೆ ಎಂದರು.
ಇನ್ನೂ ಸ್ಥಳೀಯ ಸಂಸ್ಥೆ ಚುನಾವಣೆ ಮುಗಿದ ಮೇಲೆ ಜಿಲ್ಲೆಯ ಜನರಿಂದ ಹಣ ಸಂಗ್ರಹಿಸಿ ಕೊಡಗಿನಲ್ಲಿ ಮಳೆಯಿಂದಾಗಿ ಮನೆ ಕಳೆದು ಕೊಂಡವರ ಸೂರು ನಿರ್ಮಾಣಕ್ಕಾಗಿ ಸಹಾಯ. ಮಾಡುವುದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


