ರಾಜ್ಯ

ಆನೆಗಳ ತಡೆಯಲು ಕರ್ನಾಟಕ ಸರ್ಕಾರದ ಕ್ರಮ: ವಿವರವಾದ ಅಫಿಡವಿಟ್ ಸಲ್ಲಿಸಿ ಎಂದ ಸುಪ್ರೀಂ

ಆನೆಗಳನ್ನು ಬೆದರಿಸಿ ಓಡಿಸುವ ಸಲುವಾಗಿ ಪಂಜು, ಭರ್ಜಿಗಳ ಬಳಕೆ ಸಂಬಂಧ ಪ್ರಶ್ನಿಸಿರುವ ಸರ್ವೋಚ್ಚ ನ್ಯಾಯಾಲಯ ಕರ್ನಾಟಕ ಸರ್ಕಾರ ಆನೆಗಳ ಹಾವಳಿ.....

ಆನೆಗಳ ತಡೆಯಲು ಕರ್ನಾಟಕ ಸರ್ಕಾರದ ಕ್ರಮ: ವಿವರವಾದ ಅಫಿಡವಿಟ್ ಸಲ್ಲಿಸಿ ಎಂದ ಸುಪ್ರೀಂ
ಸಂಗ್ರಹ ಚಿತ್ರ
Published On :
ನವದೆಹಲಿ: ಆನೆಗಳನ್ನು ಬೆದರಿಸಿ ಓಡಿಸುವ ಸಲುವಾಗಿ ಪಂಜು, ಭರ್ಜಿಗಳ ಬಳಕೆ ಸಂಬಂಧ ಪ್ರಶ್ನಿಸಿರುವ ಸರ್ವೋಚ್ಚ ನ್ಯಾಯಾಲಯ ಕರ್ನಾಟಕ ಸರ್ಕಾರ ಆನೆಗಳ ಹಾವಳಿ ತಡೆಗೆ ತೆಗೆದುಕೊಂಡ ಕ್ರಮದ ಕುರಿತು ವಿವರವಾದ ಅಫಿಡವಿಟ್ ಸಲ್ಲಿಸುವಂತೆ.ಸೂಚಿಸಿದೆ.
ಕೆಲವು ವಾರಗಳ ಹಿಂದೆ ನ್ಯಾಯಾಲಯವು ಆನೆ ಹಾವಳಿ ತಡೆಗಾಗಿ ಭರ್ಜಿ, ಪಂಜುಗಳನ್ನು ಬಳಸುವುದು "ಅಮಾನವೀಯ" ಎಂದು ಹೇಳಿತ್ತು. ಕರ್ನಾಟಕ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಒಡಿಶಾ ಮುಂತಾದ ರಾಜ್ಯಗಳಲ್ಲಿ ಆನೆಗಳನ್ನು ಓಡಿದಲು ಇಂತಹಾ ಅಮಾನವೀಯ ಕ್ರಮ ಜರುಗಿಸಲಾಗುತ್ತಿದ್ದು ಇದನ್ನು ತಕ್ಷಣದಿಂದ ನಿಲ್ಲಿಸಬೇಕೆಂದು ಸೂಚಿಸಿತ್ತು.
ಈ ರಾಜ್ಯಗಳಲ್ಲಿ ಪಂಜು, ಭರ್ಜಿಗಳ ಖರೀದಿಗೆ ಅಕ್ರಮ ಟೆಂಡರ್ ಕರೆದಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆದಿಎ.
ನ್ಯಾಯಮೂರ್ತಿಗಳಾದ ಮದನ್ ಬಿ ಲೋಕೂರ್, ಎಸ್ ಅಬ್ದುಲ್ ನಝೀರ್ ಮತ್ತು ದೀಪಕ್ ಗುಪ್ತಾ ಅವರನ್ನೊಳಗೊಂಡ ಪೀಠದ ಮುಂದೆ ಕರ್ನಾಟಕ ಸರ್ಕಾರ ತನ್ನ ಅಹವಾಲು ಮಂಡಿಸಿದ್ದು, ರಾಜ್ಯ ಸರ್ಕಾರವು  ಜುಲೈನಲ್ಲಿ ತಾನು ಈ ರೀತಿಯ ಪಂಜು, ಭರ್ಜಿ ಉಪಯೋಗಿಸಿ ಆನೆಗಳನ್ನು ತಡೆಯುವುದು ಸಲ್ಲದೆಂದು ಎಲ್ಲಾ ಅಧಿಕಾರಿಗಳಿಗೆ ಪತ್ರಗಳನ್ನು ಬರೆದಿದ್ದಾಗಿಯೂ ಈ ಸಂಬಂಧದ ಪ್ರಕ್ರಿಯೆಯು ಮುಂದುವರೆದಿದೆ  ಎಂದೂ ತಿಳಿಸಿದೆ. ಇಷ್ಟಾಗಿಯೂ ಈ ಕ್ರಮ ಸಂಪೂರ್ಣಗೊಳ್ಳಲು ಇನ್ನೂ ಆರು ತಿಂಗಳ ಕಾಲಾವಕಾಶ ಬೇಕೆಂದು ಅಫಿಡವಿಟ್ ನಲ್ಲಿ ಉಲ್ಲೇಖಿಸಲಾಗಿದೆ.
ಆದರೆ ನ್ಯಾಯಪೀಠ  "ಆರು ತಿಂಗಳುಗಳು" ಬಹಳ ದೀರ್ಘವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಕರ್ನಾಟಕ ಪರ ವಕೀಲರು ಅಫಿಡವಿಟ್ ಅನಲ್ಲಿನ ಅಂಶವನ್ನು ಒತ್ತಿ ಹೇಳಿದ್ದು ಇನ್ನು ಈ ವಿಚಾರವಾಗಿ ಯಾವುದೇ ಹೊಸ ಟೆಂಡರ್ ನಿಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಅದಾಗ್ಯೂ ನ್ಯಾಯಪೀಠವು ಪ್ರಕರಣದ ಮುಂದಿನ ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಿದ್ದು ಇಷ್ಟರಲ್ಲಿ  ಮತ್ತಷ್ಟು ವಿಚಾರಣೆಗೆ ಸಂಬಂಧಿಸಿದಂತೆ ಎಲ್ಲಾ ರಾಜ್ಯಗಳೂ ಅಗತ್ಯವಾದ ಅಫಿಡವಿಟ್ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ.
ರಾಜ್ಯದಲ್ಲಿ ಭರ್ಜಿ, ಪಂಜುಗಳನ್ನು ತೆಗೆದು ಹಾಕುವ ಕ್ರಮದ ಕುರಿತು ತೆಗೆದುಕೊಂಡ ಕಾರ್ಯಸೂಚಿಯ ವಿವರವಾದ ಅಫಿಡವಿಟ್ ಸಲ್ಲಿಸಬೇಕು ಎಂದು ಕರ್ನಾಟಕಕ್ಕೆ ನ್ಯಾಯಾಲಯ ಸೂಚಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.