ರಾಜ್ಯ

ಕೊಡಗು ಪ್ರವಾಹ: ರಕ್ಷಣೆಯ ನಿರೀಕ್ಷೆಯಲ್ಲಿದ್ದಾರೆ 900 ಜನರು

ಭಾರೀ ಮಳೆ, ಮಳೆಯಿಂದಾಗಿ ಸಂಭವಿಸುತ್ತಿರುವ ಅವಾಂತರಗಳಿಂದಾಗಿ ಕೊಡಲು ಜಿಲ್ಲೆ ನಲುಗಿ ಹೋಗಿದ್ದು, 900ಕ್ಕೂ ಹೆಚ್ಚು ಮಂದಿ ರಕ್ಷಣೆಯ ನಿರೀಕ್ಷೆಯಲ್ಲಿದ್ದಾರೆಂದು ಶನಿವಾರ ತಿಳಿದುಬಂದಿದೆ...

ಕೊಡಗು ಪ್ರವಾಹ: ರಕ್ಷಣೆಯ ನಿರೀಕ್ಷೆಯಲ್ಲಿದ್ದಾರೆ 900 ಜನರು
ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಸೇನಾಪಡೆಗಳು
Published On :
ಮಡಿಕೇರಿ: ಭಾರೀ ಮಳೆ, ಮಳೆಯಿಂದಾಗಿ ಸಂಭವಿಸುತ್ತಿರುವ ಅವಾಂತರಗಳಿಂದಾಗಿ ಕೊಡಲು ಜಿಲ್ಲೆ ನಲುಗಿ ಹೋಗಿದ್ದು, 900ಕ್ಕೂ ಹೆಚ್ಚು ಮಂದಿ ರಕ್ಷಣೆಯ ನಿರೀಕ್ಷೆಯಲ್ಲಿದ್ದಾರೆಂದು ಶನಿವಾರ ತಿಳಿದುಬಂದಿದೆ. 
ಭೀಕರ ಮಳೆಯಿಂದಾಗಿ ಗುಡ್ಡಗಳು ಕುಸಿದು ಬೀಳುತ್ತಿದ್ದು ಜಿಲ್ಲೆ ಸಂಪರ್ಕವನ್ನು ಕಡಿದುಕೊಳ್ಳುತ್ತಿದೆ. ಶಿರಂಗಲ, ಮಂಡಲಪಟ್ಟಿ, ಮುಕ್ಕೊಡ್ಲು, ಹತ್ತಿಹೊಳೆ, ಕಲ್ಲೂರು, ಗಾಳಿಬೀಡು, 2ನೇ ಮೊನ್ನಂಗೆರಿ ಮತ್ತು ಮುವತೊಕ್ಲುವಿನಲ್ಲಿ ಜನರು ಸಿಲುಕಿಕೊಂಡಿದ್ದಾರೆ. 
ನಿನ್ನೆ ಬೆಳಿಗ್ಗೆ ಮೂವತೊಕ್ಲುವಿನಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ಮುಕ್ಕತಿರಾ ಸಬು ಉತ್ತಪ್ಪ (64) ಎಂಬುವವರು ಮೃತಪಟ್ಟಿದ್ದಾರೆ. ಇದಲ್ಲದೆ ಮತ್ತಿಬ್ಬರು ವ್ಯಕ್ತಿಗಳೂ ಕೂಡ ಸಾವನ್ನಪ್ಪಿದ್ದು, ವ್ಯಕ್ತಿಗಳ ಗುರುತು ಈವರೆಗೂ ಪತ್ತೆಯಾಗಿಲ್ಲ. ಕಟಕೆರಿಯಲ್ಲಿಯೂ ಮೂವರು ಸಾವನ್ನಪ್ಪಿದ್ದು, ಈ ಮೂಲಕ ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. 
ಜಿಲ್ಲೆಯಲ್ಲಿ ಫೋನ್ ಸಂಪರ್ಕಗಳೂ ಕೂಡ ಕಡಿತಗೊಂಡಿದ್ದು, ಎಷ್ಟು ಜನ ಸಂಕಷ್ಟದಲ್ಲಿದ್ದಾರೆ, ಎಷ್ಟು ಮಂದಿ ನಾಪತ್ತೆಯಾಗಿದ್ದಾರೆಂಬುದರ ಮಾಹಿತಿಗಳು ಜಿಲ್ಲಾಧಿಕಾರಿಗಳ ಬಳಿ ಕೂಡ ಇಲ್ಲದಂತಾಗಿದೆ. 
ಜೋಡುಪಾಲದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಬಸಪ್ಪ (51) ಎಂಬುವವರು ಮೃತಪಟ್ಟಿದ್ದಾರೆ. ಗಾಳಿಬೀಡುವಿನಲ್ಲಿ 20ಕ್ಕೂ ಹೆಚ್ಚು ಮಂದಿ ಸಂಕಷ್ಟದಲ್ಲಿ ಸಿಲುಕಿದ್ದಾರೆ. 
ಜನರನ್ನು ರಕ್ಷಣೆ ಮಾಡಲು ಸೇನೆ, ನಾಗರೀಕ ರಕ್ಷಣಾ ದಳ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ತ್ವರಿತ ಪ್ರತಿಕ್ರಿಯೆ ತಂಡ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಗಳು ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ. 
ಮಣ್ಣು ಕುಸಿತಗೊಳ್ಳುತ್ತಿರುವ ಪರಿಣಾಮ ಭೂಮಿ ಜರುಗುತ್ತಿದೆ. ಹೀಗಾಗಿ ಭೂಕುಸಿತ ಸಂಭವಿಸುತ್ತಿದ್ದು, ಕಾರ್ಯಾಚರಣೆಗೆ ತೊಡಕುಂಟಾಗುತ್ತಿದೆ. ಜನರು ಸಿಲುಕಿರುವ ಸ್ಥಳ ತಲುಪಲು ಕಷ್ಟವಾಗುತ್ತಿದೆ. ಯಾವುದೇ ವಾಹನಗಳೂ ಕೂಡ ಸಂಚಾರ ನಡೆಸಲು ಸಾಧ್ಯವಾಗುತ್ತಿಲ್ಲ. ರಕ್ಷಣಾ ದಳದ ಸಿಬ್ಬಂದಿಗಳು ಮಾರ್ಗ ಸರಿಪಡಿಸುವಲ್ಲಿ ಕಾರ್ಯನಿರ್ವಹಿಸುತ್ತಿವೆ. ಮಾರ್ಗ ಸರಿಪಡಿಸಿದ ಬಳಿಕ ಗ್ರಾಮಗಳತ್ತ ತೆರಳಿ ಜನರನ್ನು ರಕ್ಷಣೆ ಮಾಡಲಾಗುತ್ತದೆ. ಜನರನ್ನು ರಕ್ಷಣೆ ಮಾಡಿದ ಬಲಿಕ ತ್ವರಿತಗತಿಯಲ್ಲಿ ವೈದ್ಯಕೀಯ ಚಿಕಿತ್ಸೆಗಳನ್ನು ನೀಡಲಾಗುತ್ತದೆ ಎಂದು ಉಪ ಆಯುಕ್ತ ಶ್ರೀವಿದ್ಯಾ ಅವರು ಹೇಳಿದ್ದಾರೆ. 
ಸಂತ್ರಸ್ತರ ಜನರಿಗಾಗಿ ಈಗಾಗಲೇ 37 ನಿರಾಶ್ರಿತ ಶಿಬಿರಗಳನ್ನು ಸ್ಥಾಪನೆ ಮಾಡಲಾಗಿದೆ. ಜೋಡುಪಾಲ ಸಂಪೂರ್ಣವಾಗಿ ಪ್ರವಾಹಕ್ಕೆ ಸಿಲುಕಿದ್ದು, ಕೂಡಲೇ ಜನರನ್ನು ರಕ್ಷಣೆ ಮಾಡುವ ಅಗತ್ಯವಿದೆ. 
ಕಪಿಲ ನದಿಯಿಂದ ದೂರ ಉಳಿಸುವಂತೆ ಸ್ಥಳೀಯರಿಗೆ ಎಚ್ಚರಿಕೆ
ಕಬಿನಿ ಹಾಗೂ ಕಪಿಲ ನಂದಿಗಳಲ್ಲಿ ಹೊರ ಹರಿಸುವ ಹೆಚ್ಚಾಗಿದ್ದು, ಗುರುವಾರ ರಾತ್ರಿ 80,000ಕ್ಯೂಸೆಕ್ಸ್ ನೀರು ಹೆಚ್ಚಾಗಿದೆ. ನದಿ ತುಂಬಿ ಹರಿಯುತ್ತಿರುವ ಹಿನ್ನಲೆಯಲ್ಲಿ ಮೈಸೂರಿನ ಬಳಿಯಿರುವ ಮಲ್ಲನಮುಳ್ಳೆ ರಾಷ್ಟ್ರೀಯ ಹೆದ್ದಾರಿ ಊಟಿ ಮತ್ತು ಕ್ಯಾಲಿಕಟ್ ರಸ್ತೆಗಳನ್ನು ಬಂದ್ ಮಾಡಿದ್ದಾರೆ. 
ನಂಜನಗೂಡಿಗೆ ಹೋಗುವ ವಾಹನಗಳ ಮಾರ್ಗಗಳನ್ನು ಕೆಂಪೆಸಿದ್ದನ ಹುಂಡಿ ಮತ್ತು ಹೆಜ್ಜಿಗೆ ಗ್ರಾಮಗಳತ್ತ ತಿರುಗಿಸಲಾಗಿದೆ. ಶ್ರೀಕಂಠೇಶ್ವರ ದೇಗುಲದ ಸುತ್ತಲೂ ನೀರು ತುಂಬಿಕೊಂಡಿದ್ದು, ದೇವಾಲಯ ಇದೀಗ ದ್ವೀಪದಂತೆ ನಿರ್ಮಾಣಗೊಂಡಿದೆ. ಈ ನಡುವೆ ಉಪ ಆಯುಕ್ತ ಅಭಿರಾಮ್ ಜಿ ಶಂಕರ್ ಅವರು ನಂಜನಗೂಡಿಗೆ ಭೇಟಿ ನೀಡಿದ್ದು, ನದಿಯಲ್ಲಿ 90 ರಿಂದ 1 ಲಕ್ಷ ಕ್ಯೂಸೆಕ್ಸ್ ನೀರು ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ನದಿ ತೀರದಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಿಕೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.