ರಾಜ್ಯ

ಕರ್ನಾಟಕದ ಮಹದಾಯಿ ಯೋಜನೆ ಸ್ಥಗಿತಗೊಳಿಸಲು ಗೋವಾ ಸರ್ಕಾರ ಚಿಂತನೆ ?

ಮಹದಾಯಿ ನೀರು ವಿವಾದ ನ್ಯಾಯಾಧೀಕರಣ ಕರ್ನಾಟಕಕ್ಕೆ 13. 5 ಟಿಎಂಸಿ ಮಹದಾಯಿ ನದಿ ನೀರು ಹಂಚಿಕೆ ಮಾಡಿದ ಬೆನ್ನಲ್ಲೇ, ಕರ್ನಾಟಕದ ಮಹದಾಯಿ ಯೋಜನೆ ಅನುಷ್ಠಾನ ತಡೆಯಲು ಪರಿಣಾಮಕಾರಿ ಪರ್ಯಾಯ ಮಾರ್ಗಗಳನ್ನು ಗೋವಾ ಸರ್ಕಾರ ಹುಡುಕುತ್ತಿದೆ.

ಕರ್ನಾಟಕದ ಮಹದಾಯಿ ಯೋಜನೆ ಸ್ಥಗಿತಗೊಳಿಸಲು ಗೋವಾ ಸರ್ಕಾರ ಚಿಂತನೆ ?
ಸಾಂದರ್ಭಿಕ ಚಿತ್ರ
Published On :

ಬೆಳಗಾವಿ:ಮಹದಾಯಿ ನೀರು ವಿವಾದ ನ್ಯಾಯಾಧೀಕರಣ ಕರ್ನಾಟಕಕ್ಕೆ 13. 5 ಟಿಎಂಸಿ ಮಹದಾಯಿ ನದಿ ನೀರು ಹಂಚಿಕೆ ಮಾಡಿದ ಬೆನ್ನಲ್ಲೇ,  ಕರ್ನಾಟಕದ ಮಹದಾಯಿ ಯೋಜನೆ ಅನುಷ್ಠಾನ ತಡೆಯಲು ಪರಿಣಾಮಕಾರಿ ಪರ್ಯಾಯ ಮಾರ್ಗಗಳನ್ನು ಗೋವಾ ಸರ್ಕಾರ ಹುಡುಕುತ್ತಿದೆ.

ಇತ್ತೀಚಿನ ಹೊಸ ಬೆಳವಣಿಗೆಯೊಂದರಲ್ಲಿ ಕಸ್ತೂರಿ ರಂಗನ್ ವರದಿ ಅಧ್ಯಯನ ನಡೆಸಿದ್ದು, ಕರ್ನಾಟಕ ಸರ್ಕಾರದ  ಮಹದಾಯಿ ನದಿಯ ಜಲವಿದ್ಯುತ್ ಯೋಜನೆಗೆ ಮುಂದುವರಿಯದಂತೆ ಆಕ್ಷೇಪ ವ್ಯಕ್ತಪಡಿಸಿದೆ.
ಪ್ರಸ್ತುತ ಕರಾವಳಿ ರಾಜ್ಯದಲ್ಲಿ ಯಾವುದೇ ಪರ್ಯಾಯ ಮಾರ್ಗಗಳಿಲ್ಲ. ಕರ್ನಾಟಕ ಸರ್ಕಾರದ  ಜಲವಿದ್ಯುತ್ ಯೋಜನೆಯಿಂದ ಪಶ್ಚಿಮ ಘಟ್ಟದಲ್ಲಿನ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ  ಉಂಟಾಗಲಿದ್ದು, ಗೋವಾ ಮೇಲೂ ಪ್ರಭಾವ ಬೀರಲಿದೆ ಎಂದು ಗೋವಾ ಹೆಚ್ಚುವರಿ ಸಾಲಿಸಿಟರ್ ಜನರಲ್ ಆತ್ಮರಾಮ್ ನಾಡಕರ್ಣೀ ನೇತೃತ್ವದ ಕಾನೂನು ತಜ್ಞರ ಸಮಿತಿ ಆಕ್ಷೇಪಿಸಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.