ರಾಜ್ಯ

ಕೇರಳದಲ್ಲಿ ಭೀಕರ ಪ್ರವಾಹ: ಸಂತ್ರಸ್ಥರ ನೆರವಿಗೆ ಧಾವಿಸಿದ ಪುನೀತ್ ರಾಜ್ ಕುಮಾರ್

ಭೀಕರ ಪ್ರವಾಹಕ್ಕೆ ತುತ್ತಾಗಿರುವ ದೇವರ ನಾಡು ಕೇರಳದ ಸಂತ್ರಸ್ಥರ ನೆರವಿಗೆ ಸ್ಯಾಂಡಲ್ ವುಡ್ ಧಾವಿಸಿದ್ದು, ನಟ ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವು ನಟರು ಕೇರಳಕ್ಕೆ ಧನ ಸಹಾಯ ನೀಡಿದ್ದಾರೆ.

ಕೇರಳದಲ್ಲಿ ಭೀಕರ ಪ್ರವಾಹ: ಸಂತ್ರಸ್ಥರ ನೆರವಿಗೆ ಧಾವಿಸಿದ ಪುನೀತ್ ರಾಜ್ ಕುಮಾರ್
ಸಂಗ್ರಹ ಚಿತ್ರ
Published On :
ಬೆಂಗಳೂರು: ಭೀಕರ ಪ್ರವಾಹಕ್ಕೆ ತುತ್ತಾಗಿರುವ ದೇವರ ನಾಡು ಕೇರಳದ ಸಂತ್ರಸ್ಥರ ನೆರವಿಗೆ ಸ್ಯಾಂಡಲ್ ವುಡ್ ಧಾವಿಸಿದ್ದು, ನಟ ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವು ನಟರು ಕೇರಳಕ್ಕೆ ಧನ ಸಹಾಯ ನೀಡಿದ್ದಾರೆ.
ಟ್ವಿಟರ್ ನಲ್ಲಿ ಖ್ಯಾತ ಮಲಯಾಳಿ ನಟ ನವೀನ್ ಪೌಲಿ ಮಾಡಿದ್ದ ಟ್ವೀಟ್ ವೊಂದಕ್ಕೆ ಪ್ರತಿಕ್ರಿಯಿಸಿದ್ದ ಪುನೀತ್ ಮಲಯಾಳಿಗಳಷ್ಚೇ ಏಕೆ ನಾವು ಕನ್ನಡಿಗರೂ ಕೂಡ ನಿಮ್ಮೊಂದಿಗಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಕೇರಳ ಸಿಎಂ ಪರಿಹಾರ ನಿಧಿಗೆ 5 ಲಕ್ಷ ರೂ ಹಣ ರವಾನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರೇಮಂ ಖ್ಯಾತಿಯ ನಟ ನವೀನ್ ಪೌಲಿ ಟ್ವಿಟರ್ ನಲ್ಲಿ ಕರ್ನಾಟಕದಲ್ಲಿರುವ ಮಲಯಾಳಿಗಳು ಕೇರಳ ಪ್ರವಾಹ ಸಂತ್ರಸ್ತರಿಗೆ ನೆರವಾಗುವಂತೆ ಮನವಿ ಮಾಡಿದ್ದರು. ಇದ್ದಕ್ಕೆ ಪುನೀತ್ ರಾಜ್ ಕುಮಾರ್ ಪ್ರತಿಕ್ರಿಯೆ ನೀಡಿ, ಮಲಯಾಳಿಗಳಷ್ಚೇ ಏಕೆ ನಾವು ಕನ್ನಡಿಗರೂ ಕೂಡ ನಿಮ್ಮೊಂದಿಗಿದ್ದೇವೆ. ನಾವು ಕೂಡ ನಿಮಗೆ ನೆರವು ನೀಡುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ. 
ಪುನೀತ್ ರಂತೆಯೇ ಕಾಲಿವುಡ್, ಟಾಲಿವುಡ್ ನಿಂದಲೂ ಹಲವು ನಟ, ನಟಿಯರು ಧನ ಸಹಾಯ ಮಾಡಿದ್ದು, ಅರ್ಜು್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ 5 ಲಕ್ಷ ರೂ,ನಟ ಅಲ್ಲು ಅರ್ಜುನ್ 25 ಲಕ್ಷ ರೂ, ನಟ ಕಮಲ್ ಹಾಸನ್ 25 ಲಕ್ಷ ರೂ. ನಟ ಸೂರ್ಯ ಹಾಗೂ ಅವರ ಸಹೋದರ ಕಾರ್ತಿ ತಲಾ 25 ಲಕ್ಷ ರೂ ಹಣವನ್ನು ಪರಿಹಾರ ನಿಧಿಗೆ ವರ್ಗಾಯಿಸಿದ್ದಾರೆ.
ಇತ್ತ ಕರ್ನಾಟಕದಿಂದಲೂ ಕೇರಳಕ್ಕೆ ಅಪಾರ ಪ್ರಮಾಣದ ಪರಿಹಾರ ಸಾಮಗ್ರಿ ಮತ್ತು ಹಣ ವರ್ಗಾವಣೆಯಾಗುತ್ತಿದ್ದು, ಹಲವು ರಾಜಕಾರಣಿಗಳು ಪರಿಹಾರ ಧನವನ್ನು ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.