ರಾಜ್ಯ

ಬೆಂಗಳೂರಿನಲ್ಲಿ ಭಾರೀ ಶಬ್ಧ: ಭೂಕಂಪದ ಭೀತಿಯಲ್ಲಿ ಜನತೆ

ರಾಜ್ಯ ರಾಜಧಾನಿ ಬೆಂಗಳೂರಿನ ಹಲವೆಡೆ ಭಾರಿ ಶಬ್ಧ ಕೇಳಿ ಬಂದಿದ್ದು, ಭಾರೀ ಶಬ್ಧಕ್ಕೆ ಬೆದರಿದ ಜನತೆ ಭೂಕಂಪನವೆಂದು ಬೆಚ್ಚಿಬಿದ್ದಿದ್ದಾರೆ...ಜನತೆ ಭೀತಿಗೊಳಗಾಗಿರುವ ಘಟನೆ ಗುರುವಾರ ನಡೆದಿದೆ...

ಬೆಂಗಳೂರಿನಲ್ಲಿ ಭಾರೀ ಶಬ್ಧ: ಭೂಕಂಪದ ಭೀತಿಯಲ್ಲಿ ಜನತೆ
ಸಂಗ್ರಹ ಚಿತ್ರ
Published On :
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಹಲವೆಡೆ ಭಾರಿ ಶಬ್ಧ ಕೇಳಿ ಬಂದಿದ್ದು, ಭಾರೀ ಶಬ್ಧಕ್ಕೆ ಬೆದರಿದ ಜನತೆ ಭೂಕಂಪನವೆಂದು ಬೆಚ್ಚಿಬಿದ್ದಿದ್ದಾರೆ.
ನಗರದ ಡಾಲರ್ಸ್ ಕಾಲೋನಿ, ಜೆಪಿ. ನಗರ, ರಾಜರಾಜೇಶ್ವರಿ ನಗರ, ಕೆಂಗೇರಿ, ನಾಗರಭಾವಿ, ಕುಮಾರಸ್ವಾಮಿ ಲೇಔಟ್ ನಲ್ಲಿ ಸ್ಫೋಟದ ಶಬ್ಧ ಕೇಳಿ ಬಂದಿದೆ ಎಂದು ವರದಿಗಳು ತಿಳಿಸಿವೆ.
ಸ್ಫೋಟದ ಶಬ್ಧಕ್ಕೆ ಕೆಲ ಕಟ್ಟಡಗಳೂ ಕೂಡ ಅಲುಗಾಡಿದ ಘಟನೆಗಳು ನಡೆದಿದ್ದು, ಸ್ಫೋಟದ ಶಬ್ಧ ಕೇಳಿದ ಜನರು ಮನೆಗಳಿಂದ ಹೊರಗೆ ಓಡಿದ್ದಾರೆ. ಇನ್ನು ಕೆಲ ಮನೆಯಲ್ಲಿದ್ದ ವಸ್ತುಗಳು ಕೆಳಗೆ ಬಿದ್ದಿವೆ ಎಂದು ತಿಳಿದುಬಂದಿದೆ. 
ಸ್ಫೋಟದ ಶಬ್ಧ ಕುರಿತಂತೆ ಸುದ್ದಿವಾಹಿನಿಗಳಲ್ಲಿ ಹೇಳಿಕೆ ನೀಡಿರುವ ಭೂಗರ್ಭ ವಿಜ್ಞಾನಿಗಳು, ಇದು ಭೂಗರ್ಭದ ಒಳಗೆ ಆಗಿರುವ ಕಂಪನವಲ್ಲ. ಮೋಡಗಳ ಏರುಪೇರಿನಿಂದಾಗಿ ಗಾಳಿಯ ಸ್ಥಾನಪಲ್ಲಟದಿಂದ ಶಬ್ಧ ಕೇಳಿ ಬಂದಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.