ರಾಜ್ಯ

2019 ಜನವರಿ-ಮಾರ್ಚ್ ನಲ್ಲಿ ಚಂದ್ರಯಾನ 2: ಇಸ್ರೋ ಅಧ್ಯಕ್ಷ ಶಿವನ್

ಈ ವರ್ಷದಂತ್ಯಕ್ಕೆ ನೆರವೇರಬೇಕಾಗಿದ್ದ ಇಸ್ರೋ ಮಹತ್ವಾಕಾಂಕ್ಷೆಯ ಚಂದ್ರಯಾನ 2 ಯೋಜನೆಯನ್ನು 2019 ಜನವರಿ-ಮಾರ್ಚ್ ಗೆ ಮುಂದೂಡಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ....

2019 ಜನವರಿ-ಮಾರ್ಚ್ ನಲ್ಲಿ ಚಂದ್ರಯಾನ 2: ಇಸ್ರೋ ಅಧ್ಯಕ್ಷ ಶಿವನ್
ಇಸ್ರೋ ಚಂದ್ರಯಾನ - ಸಂಗ್ರಹ ಚಿತ್ರ
Published On :
ಬೆಂಗಳೂರು: ಈ ವರ್ಷದಂತ್ಯಕ್ಕೆ ನೆರವೇರಬೇಕಾಗಿದ್ದ ಇಸ್ರೋ ಮಹತ್ವಾಕಾಂಕ್ಷೆಯ ಚಂದ್ರಯಾನ 2 ಯೋಜನೆಯನ್ನು 2019 ಜನವರಿ-ಮಾರ್ಚ್ ಗೆ ಮುಂದೂಡಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಹೇಳಿದೆ. ಅಲ್ಲದೆ ಯೋಜನೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು ಚಂದಿರನ ಮೇಲೆ ಮೊದಲು ಲ್ಯಾಂಡರ್ ಪರಿಭ್ರಮಣೆ ನಡೆಸಿ ಬಳಿಕ ಅಧ್ಯಯನ ನಡೆಸಲು ತೀರ್ಮಾನಿಸಿದೆ.
"ನಾವು ಜನವರಿ 3 ರಂದು ಚಂದ್ರಯಾನ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಯೋಜಿಸಿದ್ದೇವೆ, ನಾವು  ಆ ದಿನದಂದು ಯೋಜನೆ ಕಾರ್ಯಾರಂಭವಾಗಬೇಕೆಂದು ಗುರಿ ಹೊಂದಿದ್ದೇವೆ. ಆದರೆ ಇದು ಮಾರ್ಚ್ ವರೆಗೆ ಸಹ ಮುಂದೂಡಲ್ಪಡಬಹುದು.ಯೋಜನೆ ಪ್ರಾರಂಭದ ದಿನಾಂಕ ಹತ್ತಿರವಾಗುತ್ತಿದ್ದಂತೆ ನಾವು ಗುರಿಯನ್ನು ತಪ್ಪಿಸಿಕೊಳ್ಳಬಹುದು" ಎಂದು ಇಸ್ರೋ ಅಧ್ಯಕ್ಷ  ಕೆ. ಶಿವನ್ ಹೇಳಿದರು.
ಮಿಷನ್ ಅನ್ನು ಮುಂದೂಡಲು ಕಾರಣವೆಂದರೆ ಯೋಜನೆಯ  ವಿನ್ಯಾಸದಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದ್ದು, ಅದು ಚಂದ್ರನ ಮೇಲ್ಮೈ ಮೇಲೆ ಸುಲಭವಾಗಿ ಪರಿಭ್ರಮಣೆ ನಡೆಸಲು ಸಹಕಾರಿಯಾಗಲಿದೆ.
ಭಾರತೀಯ ಬಾಹ್ಯಾಕಾಶ ಕ್ಷೇತ್ರದ ಮಹಾನ್ ಪುರುಷ  ಡಾ. ವಿಕ್ರಮ್ ಸಾರಾಭಾಯ್ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.
ಚಂದ್ರಯಾನ -2 ಉಪಗ್ರಹದ ತೂಕ  600 ಕೆಜಿ ಏಕೆ ಎನ್ನುವ ಪ್ರಶ್ನೆಗೆ ಲ್ಯಾಂಡರ್ ಒಮ್ಮೆ ಚಂದ್ರನ ಮೇಲ್ಮೈ ತಲುಪಿದ ಬಳಿಕ ಅದು ಪ್ರಮುಖ ಉಪಗ್ರದಿಂದ ಕಳಚಿಕೊಳ್ಳಲಿದೆ. ಆಗ ಉಪಗ್ರಹವು ಅಸ್ಥ್ರವಾಗುವ ಸಂಭವವಿದೆ, ಇದರಿಂದಾಗಿ ಲ್ಯಾಂಡಿಂಗ್ ವಿನ್ಯಾಸದ ಮಾರ್ಪಾಡು ಅಗತ್ಯವೆಂದು ಅರಿತಿದ್ದಾರೆ. ಅಲ್ಲದೆ ಆರ್ಬಿಟರ್ ಹೆಚ್ಚು ಹಂತಗಳನ್ನು ಹೊಂದಿರಲಿದೆ, ಇದಕ್ಕೆ ಹೆಚ್ಚಿನ ಪ್ರಮಾಣದ ಇಂಧನ ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.