ರಾಜ್ಯ

ಅನಂತಪುರದಲ್ಲಿ ಲಾರಿ- ಕಾರು ಅಪಘಾತ: ಬೆಂಗಳೂರಿನ ಮೂವರ ದುರ್ಮರಣ

ವೇಗವಾಗಿ ಚಲಿಸುತ್ತಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಗಳೂರಿನ ಒಂದೇ ಕುಟುಂಬದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಆಂಧ್ರ

ಅನಂತಪುರದಲ್ಲಿ ಲಾರಿ- ಕಾರು ಅಪಘಾತ:  ಬೆಂಗಳೂರಿನ ಮೂವರ ದುರ್ಮರಣ
ಅಪಘಾತವಾದ ಕಾರು
Published On :
ಬೆಂಗಳೂರು: ವೇಗವಾಗಿ ಚಲಿಸುತ್ತಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಗಳೂರಿನ ಒಂದೇ ಕುಟುಂಬದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಪೆನುಕೊಂಡದಲ್ಲಿ ನಡೆದಿದೆ.
ಜೆಪಿನಗರ 2ನೇ ಹಂತದ ಕಮಲ, ಅನಿಲ್ ಮತ್ತು ಅನಿಲ್ ಪುತ್ರ ಆದಿತ್ಯ ಮೃತರು, ಮನೆಯ ಪಕ್ಕದಲ್ಲೇ ಅನಿಲ್ ಎಲೆಕ್ಕ್ರಿಕಲ್ ಅಂಗಡಿ ನಡೆಸುತ್ತಿದ್ದರು, ಆದಿತ್ಯ ಕುಮಾರ ಸ್ವಾಮಿ ಲೇಔಟ್ ನ ಕಾಲೇಜೊಂದಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ.
ಬೆಳಗ್ಗೆ 8.30ರ ಸುಮಾರಿಗೆ ಅಪಘಾತ ನಡೆದಿದ್ದು,  ಆಂಧ್ರ ಪ್ರದೇಶದಿಂದ ಅವರು ವಾಪಾಸಗುತ್ತಿದ್ದರು, ತಮಿಳುನಾಡು ನೋಂದಣಿಯ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ,.ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಲಾರಿ ಚಾಲಕನ ವಿರುದ್ಧ ಕೇಸ್ ದಾಖಲಿಸದ ಪೊಲೀಸರು ಮೃತ ಅನಿಲ್ ವಿರುದ್ಧ ಆಜಾಗರೂಕತೆ ಚಾಲನೆ ಎಂದು ಕೇಸ್ ದಾಖಲಿಸಿದ್ದಾರೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.  
ಅನಿಲ್ ತಮ್ಮ ತಾಯಿಯ ಅಸ್ತಮಾ ಕಾಯಿಲೆಗಾಗಿ ಆಯುರ್ವೇದ  ಚಿಕಿತ್ಸೆಗಾಗಿ ಆಂಧ್ರಪ್ರದೇಶಕ್ಕಾಗಿ ಕರೆದೊಯ್ದಿದ್ದರು, ಬೆಳಗ್ಗೆ ಆರು ಗಂಟೆಗೆ ಅವರು ಜೆಪಿನಗರದ ಮನೆಯಿಂದ ಹೊರಟಿದ್ದರು ಎಂದು ಮೃತಪರ ಸಂಬಂಧಿ ಮಂಜುನಾಥ್ ಹೇಳಿದ್ದಾರೆ.
ಅಪಘಾತವಾದ ನಂತರ ನನಗೆ ಮಾಹಿತಿ ಬಂದಿತ್ತು,. ಹೀಗಾಗಿ ಸ್ಥಳಕ್ಕೆ ಧಾವಿಸಿಬಂದೆ, ಲಾರಿ ಚಾಲನಕ ವಿರುದ್ಧ ಕೇಸ್ ದಾಖಲಿಸುವ ಬದಲು ಮೃತ ಅನಿಲ್ ವಿರುದ್ದ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.