ನನ್ನ ಜನ್ಮದಿನದಂದು ದಯವಿಟ್ಟು ಯಾವುದೇ ಫ್ಲೆಕ್ಸ್'ಗಳೂ ಬೇಡ: ಉಪ ಮುಖ್ಯಮಂತ್ರಿ
ನನ್ನ ಜನ್ಮದಿನದಂದು ದಯವಿಟ್ಟು ಯಾವುದೇ ಫ್ಲೆಕ್ಸ್'ಗಳನ್ನು ಹಾಕಬೇಡಿ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಪಕ್ಷದ ಕಾರ್ಯಕರ್ತರು...

Published On :
ಬೆಂಗಳೂರು: ನನ್ನ ಜನ್ಮದಿನದಂದು ದಯವಿಟ್ಟು ಯಾವುದೇ ಫ್ಲೆಕ್ಸ್'ಗಳನ್ನು ಹಾಕಬೇಡಿ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರ ಬಳಿ ಭಾನುವಾರ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ನಾನು ಮತ್ತು ನನ್ನ ಕುಟುಂಬ ಸಹೋದರ ಜಿ.ಶಿವಪ್ರಸಾದ್ ಅವರ ನಿಧನ ದುಃಖದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ನಾಳೆಯ ನನ್ನ ಜನ್ಮದಿನದ ಸಂಭ್ರಮವನ್ನು ಆಚರಣೆ ಮಾಡುತ್ತಿಲ್ಲ. ನನ್ನ ಪ್ರೀತಿಯೆ ಬೆಂಬಲಿಗರ ಶುಭಾಶಯಗಳು ಸದಾಕಾಲ ನನ್ನೊಂದಿಗಿರುತ್ತದೆ. ನನ್ನ ಭಾವನೆಗಳು ನಿಮಗೆ ಅರ್ಥವಾಗುತ್ತದೆ ಹಾಗೂ ಅದನ್ನು ಗೌರವಿಸುತ್ತೀರಿ ಎಂದು ಭಾವಿಸುತ್ತೇನೆಂದು ಹೇಳಿಕೊಂಡಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಪರಮೇಶ್ವರ್ ಅವರು ಹಿರಿಯ ಸಹೋದರ ಶಿವಪ್ರಸಾದ್ ಅವರು ಸ್ಪರ್ಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜು.26 ರಂದು ನಿಧನ ಹೊಂದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
BBMPಬಿಬಿಎಂಪಿಪರಮೇಶ್ವರ್ಉಪ ಮುಖ್ಯಮಂತ್ರಿDr G Parameshwaraillegal flexesKarnataka deputy CMಅಕ್ರಮ ಫ್ಲೆಕ್ಸ್\'ಗಳು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


