ರಾಜ್ಯ

ಬಂಗಾಳ ಸಿಎಂ ಪ್ರಧಾನಿ ಅಭ್ಯರ್ಥಿ ಹೇಳಿಕೆ: ಅನಗತ್ಯ ಗೊಂದಲಗಳ ಸೃಷ್ಟಿ ಬೇಡ- ದೇವೇಗೌಡ

2019ರ ಲೋಕಸಭಾ ಚುನಾವಣೆ ವೇಳೆ ವಿರೋಧ ಪಕ್ಷಗಳ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಮಮತಾ ಬ್ಯಾನರ್ಜಿಯವರನ್ನು ನಿಲ್ಲಿಸುವ ಕುರಿತಂತೆ ನೀಡಿದ್ದ ಹೇಳಿಕೆಗೆ ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ ಅವರು ಸೋಮವಾರ ಸ್ಪಷ್ಟನೆ ನೀಡಿದ್ದಾರೆ...

ಬಂಗಾಳ ಸಿಎಂ ಪ್ರಧಾನಿ ಅಭ್ಯರ್ಥಿ ಹೇಳಿಕೆ: ಅನಗತ್ಯ ಗೊಂದಲಗಳ ಸೃಷ್ಟಿ ಬೇಡ- ದೇವೇಗೌಡ
Deve Gowda
Published On :
ಬೆಂಗಳೂರು: 2019ರ ಲೋಕಸಭಾ ಚುನಾವಣೆ ವೇಳೆ ವಿರೋಧ ಪಕ್ಷಗಳ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಮಮತಾ ಬ್ಯಾನರ್ಜಿಯವರನ್ನು ನಿಲ್ಲಿಸುವ ಕುರಿತಂತೆ ನೀಡಿದ್ದ ಹೇಳಿಕೆಗೆ ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ ಅವರು ಸೋಮವಾರ ಸ್ಪಷ್ಟನೆ ನೀಡಿದ್ದಾರೆ. 
ತಮ್ಮ ಹೇಳಿಕೆ ಕುರಿತಂತೆ ಆರಂಭಗೊಂಡಿರುವ ಚರ್ಚೆಗಳಿಗೆ ತೆರೆ ಎಳೆದಿರುವ ದೇವೇಗೌಡ ಅವರು, ಹೇಳಿಕೆ ಕುರಿತಂತೆ ಅನಗತ್ಯ ಗೊಂದಲಗಳು ಬೇಡ. ಕರ್ನಾಟಕ ರಾಜ್ಯದಲ್ಲಿ ನಾವು ಕಾಂಗ್ರೆಸ್ ಜೊತೆಗೆ ಮೈತ್ರಿ ಸರ್ಕಾರವನ್ನು ನಡೆಸುತ್ತಿದ್ದೇವೆಂದು ಈ ಮೊದಲೇ ಹೇಳಿದ್ದೇನೆ. ರಾಹುಲ್ ಗಾಂಧಿಯವರು ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಕಾಂಗ್ರೆಸ್ ಈಗಾಗಲೇ ಹೇಳಿದೆ. ಸಂದರ್ಶಕಾರರು ಕೇಳಿದ ಪ್ರಶ್ನೆಗಷ್ಟೇ ನಾನು ಉತ್ತರಿಸಿದ್ದೆ. ಸಂದರ್ಶನಕಾರರು ಒಂದು ವೇಳೆ ಕಾಂಗ್ರೆಸ್ ಮಹಿಳಾ ಪ್ರಧಾನಮಂತ್ರಿ ಅಭ್ಯರ್ಥಿ ಬೇಕೆಂದು ಮಮತಾ ಬ್ಯಾನರ್ಜಿ ಅಥವಾ ಮಯಾವತಿ ಹೆಸರುಗಳನ್ನು ಪ್ರಸ್ತಾಪಿಸಿದರೆ? ಎಂದು ಪ್ರಶ್ನಿಸಿದ್ದರು. ಈ ವೇಳೆ ಇದಕ್ಕೆ ನನ್ನ ಆಕ್ಷೇಪವಿರುವುದಿಲ್ಲ ಎಂದು ಹೇಳಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ. 
ಇದೇ ವೇಳೆ ಅಸ್ಸಾಂ ಎನ್ಆರ್'ಸಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ನೇರವಾಗಿ ಹೇಳುವುದಾದರೆ ಇದು ಇಂದು ಸೃಷ್ಟಿಯಾಗಿರುವ ಸಮಸ್ಯೆಯಲ್ಲ. ನಾನು ಪ್ರಧಾನಮಂತ್ರಿಯಾಗಿದ್ದಾಗಿನಿಂದಲೂ ಈ ಸಮಸ್ಯೆಯಿಂದೆ. ಆದರೆ, 40 ಲಕ್ಷ ಜನರ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿವೆ. ಬಿಜೆಪಿ ಅಧಿಕಾರಕ್ಕೆ ಬಂದು 4 ವರ್ಷಗಳಾಗಿವೆ. ಆದರೆ ಅವರು ಏನು ಮಾಡುತ್ತಿದ್ದಾರೆ? ಚುನಾವಣೆ ಕೂಡ ಹತ್ತಿರ ಬರುತ್ತಿದೆ. ಇತರರನ್ನು ನಿಂದಿಸುವುದೇಕೆ? ಸಮಸ್ಯೆ 1971ರಿಂದಲೂ ಇದೆ ಎಂದು ಹೇಳಿದ್ದಾರೆ. 
ವಾಜಪೇಯಿ ಮತ್ತು ಅಡ್ವಾಣಿಯವರು ಅಧಿಕಾರದಲ್ಲಿದ್ದಾಗಲೂ ಸಾಕಷ್ಟು ಸಮಸ್ಯೆಗಳಿದ್ದವು. ಸಮಸ್ಯೆ ಅಂದಿನಿಂದಲೂ ಇದೆ. ಪ್ರಧಾನಮಂತ್ರಿಯಾಗಿ ನಾನು 10 ತಿಂಗಳ ಕಾಲ ಅಡಳಿತ ನಡೆಸಿದ್ದೆ. ಯಾವುದೇ ರೀತಿಯ ರಕ್ತಪಾತಗಳು ನಡೆಯದಂತೆ ಈ ಸಮಸ್ಯೆಯನ್ನು ಶೀಘ್ರಗತಿಯಲ್ಲಿ ಶಾಂತಿಯುತವಾಗಿ ಪರಿಹರಿಸಬೇಕಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.