ಸತ್ತರೂ ಕೇಳುವವರಿಲ್ಲ, ದಯಮಾಡಿ ರಸ್ತೆ ಸಂಪರ್ಕ ಕಲ್ಪಿಸಿ: ಸಾಮಾಜಿಕ ಜಾಲತಾಣದಲ್ಲಿ ಗ್ರಾಮಸ್ಥರ ಅಳಲು
ಕುಗ್ರಾಮವೊಂದಕ್ಕೆ ರಸ್ತೆ ಸಂಪರ್ಕ ಕಲ್ಪಿಸಿಕೊಡಿ ಎಂಬ ಗ್ರಾಮಸ್ಥನೋರ್ವನ ಕೂಗು ಇದೀಗ ನಿಧಾನವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಲಗೊಳ್ಳುತ್ತಿದೆ.

Published On :
ಕಾರವಾರ: ಕುಗ್ರಾಮವೊಂದಕ್ಕೆ ರಸ್ತೆ ಸಂಪರ್ಕ ಕಲ್ಪಿಸಿಕೊಡಿ ಎಂಬ ಗ್ರಾಮಸ್ಥನೋರ್ವನ ಕೂಗು ಇದೀಗ ನಿಧಾನವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಲಗೊಳ್ಳುತ್ತಿದೆ.
ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ನಾನಿಗೌಡ ಎಂಬ ಖಾತೆದಾರ ಹೇಳಿಕೊಂಡಿರುವಂತೆ, ತಮ್ಮದು ಕಾರವಾರ ಜಿಲ್ಲೆಯ ಕುಮಟಾ ತಾಲ್ಲೂಕಿನ ಬಾವಿಕೊಡ್ಲ ಮತ್ತು ಬೆಲೆಗದ್ದೆ ನಡುವಿನ ಗ್ರಾಮವಾಗಿದ್ದು, ಊರಿಗೆ ಯಾವುದೇ ರೀತಿಯ ರಸ್ತೆ ಸಂಪರ್ಕವಿಲ್ಲ. ಊರಿನ ನಡುವೆ ಇರುವ ಭೂಮಾಲೀಕರು ರಸ್ತೆ ನಿರ್ಮಾಣಕ್ಕೆ ಅಡ್ಡಿ ಪಡಿಸುತ್ತಿದ್ದು, ರಸ್ತೆ ನಿರ್ಮಾಣಕ್ಕೆ ಭೂಮಿ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದರಿಂದ ತಮ್ಮ ಗ್ರಾಮಕ್ಕೆ ರಸ್ತೆ ಸಂಪರ್ಕವೇ ಇಲ್ಲದಂತಾಗಿದ್ದು, ದಯಮಾಡಿ ತಮಗೆ ನ್ಯಾಯ ಕೊಡಿಸಿ ಎಂದು ನಾನಿಗೌಡ ಫೇಸ್ ಬುಕ್ ನಲ್ಲಿ ಆಗ್ರಹಿಸಿದ್ದಾರೆ.
ಅಲ್ಲದೆ ತಮ್ಮ ಊರಿನಲ್ಲಿ ಸಂಭವಿಸುವ ಯಾವುದೇ ರೀತಿಯ ಸಾವು-ನೋವುಗಳಿಗೆ ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗುತ್ತಿರುವ ಭೂಮಾಲೀಕರೇ ಕಾರಣ ಎಂದು ಫೇಸ್ ಬುಕ್ ಖಾತೆದಾರ ನಾನಿಗೌಡ ತಮ್ಮ ಅಳಲು ತೋಡಿಕೊಂಡಿದ್ದಾರೆ. ಅಂತೆಯೇ ಈ ಬಗ್ಗೆ ಮಾಧ್ಯಮಗಳಲ್ಲಿ ಬೆಳಕು ಚೆಲ್ಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಸಾಮಾಜಿಕ ಜಾಲತಾಣKarnataka GovernmentUttara KannadaSocial MediaKarwarಕರ್ನಾಟಕ ಸರ್ಕಾರಕಾರವಾರಉತ್ತರ ಕನ್ನಡರಸ್ತೆ ಸಂಪರ್ಕRoad connectivityNani Goudaನಾನಿಗೌಡ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


