ವಿರಳಾತಿ ವಿರಳ 'ಪಿಪಿ' ರಕ್ತದ ಗುಂಪು ಪತ್ತೆ: ವ್ಯಕ್ತಿಗೆ ರಕ್ತರಹಿತ ಶಸ್ತ್ರಚಿಕಿತ್ಸೆ
ವಿರಳಾತಿ ವಿರಳ ದೇಶದಲ್ಲಿಯೇ ಮೊದಲು ಎಂದು ಹೇಳಲಾಗುತ್ತಿರುವ 'ಪಿಪಿ' ಅಥವಾ ಪಿ ನಲ್ ರಕ್ತದ ಗುಂಪಿನ ಮಾದರಿಯನ್ನು ಮಣಿಪಾಲ ಆಸ್ಪತ್ರೆಯ ವೈದ್ಯರು ಪತ್ತೆ ಹಚ್ಚಿದ್ದು, ಮೂಳೆ ಮುರಿತದಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ವ್ಯಕ್ತಿಗೆ...

Published On :
ಬೆಂಗಳೂರು: ವಿರಳಾತಿ ವಿರಳ ದೇಶದಲ್ಲಿಯೇ ಮೊದಲು ಎಂದು ಹೇಳಲಾಗುತ್ತಿರುವ 'ಪಿಪಿ' ಅಥವಾ ಪಿ ನಲ್ ರಕ್ತದ ಗುಂಪಿನ ಮಾದರಿಯನ್ನು ಮಣಿಪಾಲ ಆಸ್ಪತ್ರೆಯ ವೈದ್ಯರು ಪತ್ತೆ ಹಚ್ಚಿದ್ದು, ಮೂಳೆ ಮುರಿತದಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ವ್ಯಕ್ತಿಗೆ ವೈದ್ಯರು ರಕ್ತರಹಿತ ಶಸ್ತ್ರಚಿಕಿತ್ಸೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಎಲುಬು ಮುರಿತವಾಗಿರುವ ಹಿನ್ನಲೆಯಲ್ಲಿ ಮೇ.11 ರಂದು ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದು, ವ್ಯಕ್ತಿಗೆ ಶಸ್ತ್ರಚಿಕಿತ್ಸೆ ನಡೆಸುವ ಅಗತ್ಯವಿದೆ. ಶಸ್ತ್ರಚಿಕಿತ್ಸೆ ನಡೆಸಲು ರಕ್ತದ ಅಗತ್ಯವಿದೆ. ವಿರಳವಾಗಿರುವ ಈ ಮಾದರಿಯ ರಕ್ತವು ನಿಧಿಯಲ್ಲಿ ಲಭ್ಯವಿರಲಿಲ್ಲ. ಹೀಗಾಗಿ ಇತರೆ 80 ಘಟಕಗಳಲ್ಲಿ ತಪಾಸಣೆ ನಡೆಸಿದರೂ ನಿರ್ದಿಷ್ಟ ರಕ್ತದ ಮಾದರಿ ಯಾವ ರಕ್ತದೊಂದಿಗೂ ಹೊಂದಾಣಿಯಾಗಿಲ್ಲ. ಹೀಗಾಗಿ ವೈದ್ಯರು ರಕ್ತರಹಿತ ಶಸ್ತ್ರಚಿಕಿತ್ಸೆ ನಡೆಸಲಾಯಿತು ಎಂದು ವೈದ್ಯರು ಹೇಳಿದ್ದಾರೆ.
ಎ, ಬಿ, ಒ ಹಾಗೂ ಹೆಚ್ಆರ್'ಡಿ ಈಗ ರಕ್ತದ ಗುಂಪುಗಳಲ್ಲಿ ಸಾಮಾನ್ಯವಾಗಿರುವ ವರ್ಗೀಕರಣಗಳು. ಆದರೆ, ಸುಮಾರು 200ಕ್ಕೂ ಅಧಿಕ ಸಣ್ಣ ಸಣ್ಣ ರಕ್ತ ಗುಂಪುಗಳ ಪ್ರತಿಜನಕಗಳನ್ನು ಈಗಾಗಲೇ ಗುರುತಿಸಲಾಗಿದೆ. 1 ಸಾವಿರಕ್ಕಿಂತಲೂ ಕಡಿಮೆ ಜನರಲ್ಲಿ ಗುರುತಿಸಲಾಗುವ ವಿಶೇಷ ರಕ್ತದ ಗುಂಪನ್ನು ಅಪರೂಪದ ರಕ್ತ ಎಂದು ಕರೆಯಲಾಗುತ್ತದೆ.
ಪಿಪಿ ರಕ್ತದ ಮಾದರಿ ಪತ್ತೆಯಾಗುತ್ತಿರುವುದು ಇದೇ ಮೊದಲು. ವಿರಳ ರಕ್ತದ ಮಾದರಿಗಳನ್ನು ಸಂಗ್ರಹಿಸಲು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ದಾನಿಗಳು ಸಿಗುವ ವಿಶ್ವಾಸವಿದೆ. ವ್ಯಕ್ತಿದ ರಕ್ತದ ಗುಂಪು ಜನಾಂಗೀಯತೆ ಹಾಗೂ ಅನುವಂಶಿಕ ಸ್ವಭಾವಗಳನ್ನು ಆಧರಿಸುತ್ತದೆ. ಸ್ಥಳದಿಂದ ಸ್ಥಳಕ್ಕೆ ಬದಲಾವಣೆಗಳೂ ಇರುತ್ತವೆ. ಯೂರೋಪ್ ನಲ್ಲಿ ಈ ಬಗ್ಗೆ ಅಧ್ಯಾಯನವೊಂದು ನಡೆದಿತ್ತು. 5.8 ಮಿಲಿಯನ್ ಜನರಲ್ಲಿ ಕೇವಲ ಒಬ್ಬ ವ್ಯಕ್ತಿಯಲ್ಲಿ ಮಾತ್ರ ಪಿಪಿ ರಕ್ತದ ಮಾದರಿ ಕಂಡು ಬಂದಿತ್ತು. ಸಮಯದ ಅಭಾವದಿಂದಾಗಿ ವಿದೇಶಗಳಿಂದ ರಕ್ತಗಳನ್ನು ಆಮದು ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ತುರ್ತು ಸಮಯದಲ್ಲಿ, ನಾವು ನಮ್ಮದೇ ಆದ ರಾಷ್ಟ್ರೀಯ ನೊಂದಾವಣಿ ಮಾಡಿಕೊಳ್ಳಬೇಕಾಗುತ್ತದೆ ಎಂದು ಡಾ.ಶಮೀ ಶಾಸ್ತಿಯವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengaluruManipal Hospitalಮಣಿಪಾಲ್ ಆಸ್ಪತ್ರೆPP blood groupBloodless surgeryಪಿಪಿ ರಕ್ತದ ಗುಂಪುರಕ್ತರಹಿತ ಶಸ್ತ್ರಚಿಕಿತ್ಸೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


