ಬೆಂಗಳೂರಿನ ಸಂಸ್ಕರಿತಾ ತ್ಯಾಜ್ಯ ನೀರಿನ ಬಗ್ಗೆ ಕೋಲಾರ ರೈತರಲ್ಲಿ ಆತಂಕ!
ಬರ ಪೀಡಿತ ಕೋಲಾರ ಜಿಲ್ಲೆಗೆ ಬೆಂಗಳೂರಿನಿಂದ ಸಂಸ್ಕರಣೆಗೊಂಡ ತ್ಯಾಜ್ಯ ನೀರು ಹರಿಸುವ ಮಹತ್ವಕಾಂಕ್ಷಿಯ ಕೋರಮಂಗಲ- ಚಲ್ಲಘಟ್ಟ ಯೋಜನೆ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಜನರ ಆತಂಕಕ್ಕೂ ಕಾರಣವಾಗಿದೆ.

ಕೋಲಾರ: ಬರ ಪೀಡಿತ ಕೋಲಾರ ಜಿಲ್ಲೆಗೆ ಬೆಂಗಳೂರಿನಿಂದ ಸಂಸ್ಕರಣೆಗೊಂಡ ತ್ಯಾಜ್ಯ ನೀರು ಹರಿಸುವ ಮಹತ್ವಕಾಂಕ್ಷಿಯ ಕೋರಮಂಗಲ- ಚಲ್ಲಘಟ್ಟ ಯೋಜನೆ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಜನರ ಆತಂಕಕ್ಕೂ ಕಾರಣವಾಗಿದೆ.
ಬೆಂಗಳೂರಿನ ಕೆಸಿ ವ್ಯಾಲಿಯಿಂದ ಕೋಲಾರ ಜಿಲ್ಲೆಯ 126 ನೀರಾವರಿ ಕೆರೆಗಳಿಗೆ 8 ಟಿಎಂಸಿ ಸಂಸ್ಕರಿತಾ ತ್ಯಾಜ್ಯ ನೀರು ಹರಿಸುವ ಈ ಯೋಜನೆ ಸುಮಾರು 1, 280 ಕೋಟಿ ರೂಪಾಯಿ ವೆಚ್ಚದ್ದಾಗಿದ್ದು, ನೀರಿನ ಗುಣಮಟ್ಟ ಮಾತ್ರವಲ್ಲದೇ ಕಾರ್ಯಸಾಧ್ಯತೆ ಕುರಿತಂತೆ ಹಲವು ಪ್ರಶ್ನೆಗಳನ್ನು ಉಂಟುಮಾಡಿದೆ .
ನೀರಿಗಾಗಿ ತೀವ್ರ ತೊಂದರೆ ಎದುರಿಸುತ್ತಿರುವ ಕೋಲಾರ ಜಿಲ್ಲೆಯ ರೈತರು, ತಮ್ಮ ದಾಹ ಹಾಗೂ ಕೃಷಿಯ ಅಗತ್ಯಕ್ಕಾಗಿ ಯಾವುದೇ ಮೂಲದ ಅಗತ್ಯವಾಗಿದ್ದು, ಯೋಜನೆಯ ಪರಿಣಾಮವನ್ನು ವಿವರಿಸಲಾಗಿದೆ.
ಯಾವುದೇ ಮೂಲದ ಮೂಲಕ ನೀರಿನ ಅಗತ್ಯವಿದೆ. ಆದರೆ, ಅದು ನಮ್ಮ ಜೀವವನ್ನು ಕಾಪಾಡುವಂತಿರಬೇಕು, ನಾಶಪಡಿಸುವಂತಿರಬಾರದು. ಆದರೆ. ಬೆಂಗಳೂರಿನಿಂದ ಬರುವ ಸಂಸ್ಕರಣಾ ತ್ಯಾಜ್ಯ ನೀರಿನಲ್ಲಿ ವಿಷಯುಕ್ತ ರಾಸಾಯನಿಕ ಪ್ರಮಾಣ ಹೆಚ್ಚಿರುವುದು ಕಂಡುಬಂದಿದೆ.
ವಿಷಯುಕ್ತ ನೀರು ನೀರಾವರಿಯ ಟ್ಯಾಂಕುಗಳಿಗೆ ಹರಿದರೆ ಆ ನೆಲದ ನೀರು ಸಹ ವಿಷವಾಗಿ ರೂಪುಗೊಳ್ಳಲಿದೆ. ಆ ನೀರಿನಿಂದ ಬೆಳೆದ ಬೆಳೆ ತಿಂದ ರೈತರು ಅನಾರೋಗ್ಯಕ್ಕೆ ತುತ್ತಾಗಬೇಕಿದ್ದು ಜಾನುವಾರುಗಳು ಸಾಯಬೇಕಾಗಿದೆ ಎಂದು ಮಾಂಗಸಂದ್ರದ ರೈತ ನಾರಾಯಣಸ್ವಾಮಿ ಆತಂಕ ವ್ಯಕ್ತಪಡಿಸುತ್ತಾರೆ.
ಎರಡನೇ ಹಂತದ ಸಂಸ್ಕರಣೆ ನಂತರ ಪೈಪ್ ಲೈನ್ ಮೂಲಕ ನೀರು ಹರಿಸಲಾಗುತ್ತದೆ ಆದರೆ, ಅದು ಸಾಕಾಗುವುದಿಲ್ಲ. ಸ್ಥಾಪಿಸಲಾಗಿರುವ ಸಂಸ್ಕರಣಾ ಘಟಕಗಳಿಂದ ಭಾರಿ ಲೋಹಗಳನ್ನು ತಡೆಗಟ್ಟಲು ಸಾಧ್ಯವಿಲ್ಲ. ಬೆಳ್ಳಂದರೂ ಹಾಗೂ ವರ್ತೂರು ಕೆರೆಗಳ ನೀರನ್ನು ಸಂಸ್ಕರಿಸುವಲ್ಲಿ ಸಂಬಂಧಿತ ಪ್ರಾಧಿಕಾರಕ್ಕೆ ಸಾಧ್ಯವಿಲ್ಲ. ಇಂತಹ ನೀರನ್ನು ಕೋಲಾರದ ಟ್ಯಾಂಕುಗಳಿಗೆ ಹರಿಸಬಾರದೆಂದು ಅವರು ಒತ್ತಾಯಿಸಿದ್ದಾರೆ.
ಸಂಸ್ಕರಣೆಗೊಂಡ ನೀರಿನಲ್ಲಿ ಸೀಸ ಮತ್ತಿತರ ವಿಷಕಾರಿ ಅಂಶಗಳಿದ್ದು, ಜನ ಜಾನುವಾರು ಕುಡಿಯಲು ಯೋಗ್ಯವಲ್ಲಾ, ಈ ನೀರು ಕುಡಿದರೆ ಜಾನುವಾರುಗಳು ಸಾಯಬೇಕಾಗುತ್ತದೆ. ಅವುಗಳ ಹಾಲು ವಿಷವಾಗುತ್ತದೆ, ತರಕಾರಿಗಳು ಸೇವಿಸಿದರೆ ನಾನಾ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಕೋಲಾರ, ಚಿಕ್ಕಬಳ್ಳಾಪುರ ಶಾಶ್ವತ ನೀರಾವರಿ ಯೋಜನೆ ಕ್ರಿಯಾ ಸಮಿತಿ ಮುಖಂಡ ಅಂಜನೇಯ ರೆಡ್ಡಿ ಆರೋಪಿಸಿದ್ದಾರೆ.
ಆದರೆ. ಈ ಆರೋಪ ತಳ್ಳಿಹಾಕಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ರಮೇಶ್ ಕುಮಾರ್, ಸಮರೋಪಾದಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಜನರ ಆತಂಕವನ್ನು ನಿವಾರಿಸಲು ಪ್ರಯತ್ನಿಸಿದ್ದಾರೆ. ಕೆರೆಗಳಿಗೆ ನೀರು ಹರಿಸುವ ಮುನ್ನ ಸಂಪೂರ್ಣವಾಗಿ ಸಂಸ್ಕರಣೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


