ರಾಜ್ಯ

ಅಮಿತ್ ಶಾ ಕಾಪ್ಟರ್ ಇಳಿಯಲು ಹೊಲ ನಾಶ: ಇಳಕಲ್ ರೈತನಿಂದ ದೂರು ದಾಖಲು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿದ್ದ ಹೆಲಿಕಾಪ್ಟರ್ ಇಳಿಸುವುದಕ್ಕಾಗಿ ತನ್ನ ಹೊಲವನ್ನು ನಾಶ ಮಾಡಲಾಗಿದೆ ಎಂದು ರೈತನೊಬ್ಬ ಪೋಲೀಸರಿಗೆ ದೂರಿತ್ತ ಘಟನೆ....

ಅಮಿತ್ ಶಾ ಕಾಪ್ಟರ್ ಇಳಿಯಲು ಹೊಲ ನಾಶ: ಇಳಕಲ್ ರೈತನಿಂದ ದೂರು ದಾಖಲು
ಅಮಿತ್ ಶಾ
Published On :
ಬಾಗಲಕೋಟೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿದ್ದ ಹೆಲಿಕಾಪ್ಟರ್ ಇಳಿಸುವುದಕ್ಕಾಗಿ ತನ್ನ ಹೊಲವನ್ನು ನಾಶ ಮಾಡಲಾಗಿದೆ ಎಂದು ರೈತನೊಬ್ಬ ಪೋಲೀಸರಿಗೆ ದೂರಿತ್ತ ಘಟನೆ ಬಾಗಲಕೋಟೆ ಜಿಲ್ಲೆ ಇಳಕಲ್ ನಲ್ಲಿ ನಡೆದಿದೆ.
ಅಮಿತ್ ಶಾ ಹೆಲಿಕಾಪ್ಟರ್ ಇಳಿಸಲು ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಾಣ ಮಾಡುವ ಸಮಯದಲ್ಲಿ ಹೊಲದ ಬದುವನ್ನು ಹಾಳು ಮಾಡಿದ್ದಾರೆ ಎಂದು ಇಳಕಲ್ ರೈತ ಜಗದೀಶ್ ಕರಡಿ ಪೋಲೀಸರಿಗೆ ದೂರಿತ್ತಿದ್ದಾರೆ.
ಇಳಕಲ್‌ನ ನಾಗೂರು ರಸ್ತೆ ಬಳಿ ಇರುವ ಹೊಲದ ಬದುಗಳನ್ನು ನಾಶಪಡಿಸಿ ಹೆಲಿಪ್ಯಾಡ್‌ ನಿರ್ಮಾಣ ಮಾಡಲಾಗಿದೆ. ಇದನ್ನು ಪ್ರಶ್ನಿಸಿದ್ದ ರೈತ ಜಗದೀಶ್ ಅವರಿಗೆ ಹುನಗುಂದ ಶಾಸಕ ದೊಡ್ಡಗೌಡ ಪಾಟೀಲ್‌, ಮಂಜು ಶೆಟ್ಟರ್‌, ಸುಗೂರೇಶ್‌ ನಾಗಲೋಟಿ,ಶ್ಯಾಮಸುಂದರ್‌ ಮೊದಲಾದವರು ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಬಿಜೆಪಿ ನಾಯಕರೆಲ್ಲರ ಮೇಲೆ ರೈತ  ಜಗದೀಶ್ ಇಳಕಲ್‌ ನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಕೂಡಲ ಸಂಗಮದ ಬಸವಣ್ಣನ ಐಕ್ಯ ಸ್ಥಳಕ್ಕೆ ಶನಿವಾರ  ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿ ನೀಡುವವರಿದ್ದು  ಇಳಕಲ್ ನಗರದಲ್ಲಿ ಶಾ ಅವರ ಸಾರ್ವಜನಿಕ ಸಭೆ ಆಯೋಜಿಸಲಾಗಿತ್ತು ಈ ಕಾರ್ಯಕ್ರಮಕ್ಕೆ ಆಗಮಿಸುವ ಅಮಿತ್ ಶಾ ಅವರ ಹೆಲಿಕಾಪ್ಟರ್ ಇಳಿಯಲು ತ್ಕಾಲಿಕ ಹೆಲಿಪ್ಯಾಡ್‌ ನಿರ್ಮಿಸಲಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.