ಉಡುಪಿಯ ಕುಂದಾಪುರ ತಾಲೂಕು: ನೀರು, ರಸ್ತೆ ಎಲ್ಲವೂ ಇದ್ದರೂ ಇಂಟರ್ನೆಟ್ ಡೌನ್
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾಮ ನಕ್ಸಲ್ ಪೀಡಿತ ಪ್ರದೇಶ ಎಂದು ಘೋಷಿಸಿದ ನಂತರ ಕಳೆದ 10 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ದಿಯಾಗಿದೆ.ಮೊಬೈಲ್ ನೇಟ್ ವರ್ಕಿಂಗ್ ಸಮಸ್ಯೆಯೇ ಈ ಗ್ರಾಮದ ಬಹುದೊಡ್ಡ ಸಮಸ್ಯೆಯಾಗಿದೆ.

ಕುಂದಾಪುರ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾಮ ನಕ್ಸಲ್ ಪೀಡಿತ ಪ್ರದೇಶ ಎಂದು ಘೋಷಿಸಿದ ನಂತರ ಕಳೆದ 10 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ದಿಯಾಗಿದೆ.
ಸಂಪೂರ್ಣ ಸೌರ ವಿದ್ಯುತ್ ಗ್ರಾಮ ಎನ್ನಿಸಿಕೊಂಡಿರುವುದು ಮಾತ್ರವಲ್ಲದೇ, ಪಟ್ಟಣ ಮಾದರಿಯ ರಸ್ತೆ. ಬಸ್ ಸಂಪರ್ಕ, ವಿದ್ಯುತ್ ಸಂಪರ್ಕ, ಹಾಗೂ ಎಲ್ಲ ದಿನವೂ ಜನಸಂದಣಿಯಿಂದ ಕೂಡಿರುವ ಮಾರ್ಕೆಟ್ ಸ್ಥಳವನ್ನು ಹೊಂದಿದೆ.
ಅಮಾಸೆಬೈಲಿನ 3. 034 ಒಟ್ಟಾರೇ ಜನಸಂಖ್ಯೆಯಲ್ಲಿ 801 ಮಂದಿ ಪರಿಶಿಷ್ಟ ಜಾತಿ. ಪಂಗಡಕ್ಕೆ ಸೇರಿದವರಾಗಿದ್ದಾರೆ. ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿ ನಿಧಿಯಿಂದ ಈ ಗ್ರಾಮದ ಪ್ರಗತಿ ಸಾಧಿಸಿದೆ.
ಆದರೆ, ಈ ಗ್ರಾಮದ ಜನರ ಮುಖ್ಯ ಸಮಸ್ಯೆ ಎಂದರೆ ಮೊಬೈಲ್ ಸಂಪರ್ಕ, ನೆರೆ ಹೊರೆಯ ಗ್ರಾಮಗಳು ನೀರಿನ ಸಮಸ್ಯೆ ಎದುರಿಸುತ್ತಿದ್ದರೆ, ಮೊಬೈಲ್ ನೇಟ್ ವರ್ಕಿಂಗ್ ಸಮಸ್ಯೆಯೇ ಈ ಗ್ರಾಮದ ಬಹುದೊಡ್ಡ ಸಮಸ್ಯೆಯಾಗಿದೆ.
10 ವರ್ಷಗಳ ಹಿಂದೆ ಮಣ್ಣಿನ ರಸ್ತೆಯಿಂದ ನಿತ್ಯ ಎರಡು ಬಸ್ಸುಗಳು ಮಾತ್ರ ಸಂಚರಿಸುತ್ತಿದ್ದವು. ಈಗ ನಗರದ ರೀತಿಯಲ್ಲಿ ಎಲ್ಲಾ ಸೌಕರ್ಯಗಳನ್ನು ಹೊಂದಿರುವುದಾಗಿ ಅಮಾಸೆಬೈಲ್ ಪೋಸ್ಟ್ ಮಾಸ್ಟರ್ ಹರಿಕೃಷ್ಣ ಉಳ್ಳೂರು ಹೇಳುತ್ತಾರೆ.
ಅಮಾಸೆಬೈಲ್, ಮಾಚಾಟ್ಟು ಮತ್ತು ರಾಟ್ಟಡಿಯಲ್ಲಿ 12 ಶಾಲೆಗಳಿದ್ದು, 8 ಕಿ. ಮೀ. ಹತ್ತಿರದಲ್ಲಿಯೇ ಕಾಲೇಜುಗಳಿವೆ. ಹಾಲಾಡಿ ಶ್ರೀನಿವಾಸ ಶೆಟ್ಟಿ ಪ್ರಸ್ತುತ ಇಲ್ಲಿನ ಶಾಸಕರಾಗಿದ್ದಾರೆ . ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದು, ಇವರ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ.
2007ರಿಂದಲೂ ಇಲ್ಲಿ ಯಾವುದೇ ರೀತಿಯ ನಕ್ಸಲ್ ಚಟುವಟಿಕೆಗಳು ಕಂಡುಬಂದಿಲ್ಲ. ಆದರೂ ಮೀಸಲು ಪೊಲೀಸ್ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ 30 ಸಿಬ್ಬಂದಿಯನ್ನು ಅಮಾಸೆಬೈಲ್ ಹತ್ತಿರದ ಜೆಡ್ಡಿನಗದ್ದೆಯಲ್ಲಿ ನಿಯೋಜಿಸಲಾಗಿದೆ.
ಈ ಸಿಬ್ಬಂದಿಗಳು ಪೋಸ್ಟಲ್ ಬ್ಯಾಲೆಟ್ ಮೂಲಕ ಮತ ಚಲಾಯಿಸುತ್ತಾರೆ. ಕುಟುಂಬದವರೊಂದಿಗೆ ಸಂಪರ್ಕದಲ್ಲಿದ್ದು, ಕ್ಷೇತ್ರದ ಬಗ್ಗೆ ಮಾಹಿತಿ ಪಡೆದು ಮತ ಚಲಾಯಿಸುವುದಾಗಿ ನಕ್ಸಲ್ ನಿಗ್ರಹ ದಳದ ಪೇದೆಯೊಬ್ಬರು ಹೇಳುತ್ತಾರೆ.
ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 7593 ಜನರು ಶಾಂತಿಯಿಂದ ವಾಸಿಸುತ್ತಿದ್ದಾರೆ. ಗುಡ್ಡಗಾಡು ಪ್ರದೇಶವಾದರೂ ಬಹಳಷ್ಟು ಪ್ರಗತಿ ಸಾಧಿಸಲಾಗಿದೆ. ಬಹುತೇಕ ಮಂದಿ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಾರೆ. ಬಿಜೆಪಿ ಅಭ್ಯರ್ಥಿಗೆ ಮತ ನೀಡುವುದಾಗಿ 48 ವರ್ಷದ ಜಯಲಕ್ಷ್ಮಿ ಹೇಳುತ್ತಾರೆ.
ಮೊಬೈಲ್ ನೆಟ್ ವರ್ಕ್ ಇಲ್ಲ. ತುರ್ತು ಸಂದರ್ಭಗಳಲ್ಲಿ ತೀವ್ರ ತೊಂದರೆಯಾಗುತ್ತದೆಯ ಮೊಬೈಲ್ ಟವರ್ ನಿರ್ಮಾಣ ಮಾಡಬೇಕೆಂದು ಸಂಬಂಧಿತ ಎಲ್ಲಾ ಅಧಿಕಾರಿಗಳು ಕೇಳುತ್ತಿರುವುದಾಗಿ 22 ವರ್ಷದ ರೇಖಾ ಆಚಾರ್ಯ ಹೇಳುತ್ತಾರೆ.
ನಕ್ಸಲ್ ಸಮಸ್ಯೆಯಿಂದ ಅಧಿಕಾರಿಗಳ ಗಮನ ಸೆಳೆದು ಅಭಿವೃದ್ದಿ ಸಾಧಿಸಲಾಗಿದೆ. ಇಲ್ಲಿನ ಜನರು ಸಿದ್ದರಾಮಯ್ಯ ಸರ್ಕಾರದ ಹಲವು ಯೋಜನೆಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಉತ್ತಮ ಸಂಪರ್ಕಕ್ಕಾಗಿ ಮೊಬೈಲ್ ಟವರ್ ನಿರ್ಮಿಸಬೇಕೆಂದು ಎಲ್ಲರೂ ಒತ್ತಾಯಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


