ರಾಜ್ಯ

ಎಟಿಎಂ ಕಾರ್ಡುಗಳು ತಾಯಿಗೆ ಬದಲಿ ಅಲ್ಲ: ಕರ್ನಾಟಕ ಹೈಕೋರ್ಟ್

ಹೆತ್ತ ತಾಯಿಗೆ ಬ್ಯಾಂಕು ಎಟಿಎಂ ಕಾರ್ಡು ಬದಲಿ ಅಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ..

ಎಟಿಎಂ ಕಾರ್ಡುಗಳು ತಾಯಿಗೆ ಬದಲಿ ಅಲ್ಲ: ಕರ್ನಾಟಕ ಹೈಕೋರ್ಟ್
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ತಾಯಿಗೆ ಬ್ಯಾಂಕು ಎಟಿಎಂ ಕಾರ್ಡು ಬದಲಿ ಅಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ಹೇಳಿದೆ. ಏಳು ವರ್ಷದ ಹೆಣ್ಣು ಮಗುವಿನ ಸುಪರ್ದಿಯನ್ನು ತಾಯಿಗೆ ಒಪ್ಪಿಸುವಾಗ ನ್ಯಾಯಮೂರ್ತಿಗಳು ಹೀಗೆ ಹೇಳಿದ್ದಾರೆ.

ನ್ಯಾಯಮೂರ್ತಿಗಳಾದ ಆರ್ ಬಿ ಬೂದಿಹಾಳ ಮತ್ತು ಕೆ.ಎಸ್.ಮುದಗಲ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಮಂಜು ಮಾಲಿನಿ ಶೇಷಾಚಲಂ ಅವರು ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಕೊನೆಗೂ ಮಗುವಿನ ಸುಪರ್ದಿಯನ್ನು ತಾಯಿಗೆ ನೀಡಿದ್ದಾರೆ. 37 ವರ್ಷದ ಭಾರತೀಯ ಮೂಲದ ಕೆನಡಾ ಮಹಿಳೆ ಪ್ರಸ್ತುತ ತನ್ನ ಅಕ್ಕ ಮತ್ತು ಭಾವನ ಜೊತೆ ವಾಸಿಸುತ್ತಿದ್ದಾರೆ.

ವಿಜಯ್ ತಿರುಗ್ನಾನಮ್ ಮತ್ತು ಅವರ ಪತ್ನಿ ಎಸ್.ಶಾಲಿನಿಯ 7 ವರ್ಷದ ಮಗು ತನಿಷ್ಕಾಳನ್ನು ಮಾಲಿನಿಯ ಸುಪರ್ದಿಗೆ ಒಪ್ಪಿಸಿದ್ದಾರೆ.

ಬೆಳ್ಳಂದೂರು ಪೊಲೀಸ್ ಇನ್ಸ್ ಪೆಕ್ಟರ್, ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಪೊಲೀಸ್ ಆಯುಕ್ತರು ಮಗುವಿನ ಜವಾಬ್ದಾರಿಯನ್ನು ಮಾಲಿನಿಗೆ ನೀಡಬೇಕು. ಅಲ್ಲದೆ ಆಕೆಯ ವೈದ್ಯಕೀಯ ದಾಖಲೆಗಳು ಮತ್ತು ವಸ್ತುಗಳನ್ನು ನೀಡಬೇಕು ಎಂದು ನ್ಯಾಯಾಲಯ ಇತ್ತೀಚೆಗೆ ಆದೇಶ ನೀಡಿದೆ.

ಕೇಸಿನ ಹಿನ್ನೆಲೆ: ತನಿಶ್ಕಾ ಜೂನ್ 4, 2010ರಲ್ಲಿ ಮಂಜು ಮಾಲಿನಿ ಶೇಷಾಚಲಂ ಮತ್ತು ಕಮಲ್ ಕುಮಾರ್ ವೇಣುಗೋಪಾಲ್ ಚೆಂಗುಟ್ಟೈ ದಂಪತಿಗೆ ಜನಿಸಿದಳು. 2011ರಲ್ಲಿ ಮಗುವಿನ ಜೊತೆ ಭಾರತಕ್ಕೆ ಬಂದು ಮಗುವನ್ನು ತನ್ನ ತಾಯಿ ಲತಾ ಮಾಲಿನಿ  ಶೇಷಾಚಲಂ ಸುಪರ್ದಿಗೆ ಒಪ್ಪಿಸಿ ಹೋದಳು. ದಾಂಪತ್ಯದಲ್ಲಿ ಸಮಸ್ಯೆಯಿದ್ದರಿಂದ ಮಗಳನ್ನು ತಾಯಿಯ ಬಳಿ ಬಿಟ್ಟುಹೋಗಿದ್ದಳು.

ಜುಲೈ 2012ರಲ್ಲಿ ವೈವಾಹಿಕ ಸಮಸ್ಯೆ ಬಗೆಹರಿದ ಮೇಲೆ ಮಾಲಿನಿ ಬಂದು ತನ್ನ ಮಗುವನ್ನು ಕರೆದುಕೊಂಡು ಹೋಗಲು ನಿರ್ಧರಿಸಿದರು. ಆದರೆ ಮಗುವನ್ನು ಬಿಟ್ಟುಕೊಡಲು ಮಾಲಿನಿ ತಯಾರಿರಲಿಲ್ಲ. ಮಗುವಿನ ಮೇಲೆ ಪ್ರೀತಿಯುಂಟಾಗಿರುವುದರಿಂದ ಸ್ವಲ್ಪ ಸಮಯ ಬಿಡುವಂತೆ ಕೋರಿಕೊಂಡರು. ಆದರೆ ಶಾಲಿನಿ ಒಪ್ಪಲಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದಳು.

2015ರಲ್ಲಿ ಮತ್ತೆ ಭಾರತಕ್ಕೆ ಬಂದ ಮಾಲಿನಿ ಎಷ್ಟೇ ಬೇಡಿಕೊಂಡರೂ ದಂಪತಿ ಮಗುವನ್ನು ನೋಡಲು ಕೂಡ ಅವಕಾಶ ನೀಡಿರಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.