ರಾಜ್ಯ

ದೇಶದಲ್ಲಿ ರಾಯಚೂರು, ಯಾದಗಿರಿ ಸೇರಿ 100 ಹಿಂದುಳಿದ ಜಿಲ್ಲೆಗಳು

ಪ್ರಧಾನಿ ನರೇಂದ್ರಮೋದಿ ಈ ವರ್ಷದ ಜನವರಿಯಲ್ಲಿ ಚಾಲನೆ ನೀಡಿದ್ದ ಮಹತ್ವಾಕಾಂಕ್ಷೆಯತ್ತ ಸಾಗುತ್ತಿರುವ ಜಿಲ್ಲೆಗಳ ಪಟ್ಟಿಯಲ್ಲಿ ಕರ್ನಾಟಕದ ರಾಯಚೂರು ( 12 ) ಯಾದಗಿರಿ (40) ನೇ ಕ್ರಮಾಂಕದಲ್ಲಿ ಸ್ಥಾನ ಪಡೆದಿದ್ದು, ಅತಿ ಹಿಂದುಳಿದ ಜಿಲ್ಲೆಗಳು ಎಂದು ಘೋಷಣೆಯಾಗಿವೆ.

ದೇಶದಲ್ಲಿ ರಾಯಚೂರು, ಯಾದಗಿರಿ  ಸೇರಿ 100 ಹಿಂದುಳಿದ ಜಿಲ್ಲೆಗಳು
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ದೇಶದಲ್ಲಿನ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿ  ಕರ್ನಾಟಕದ ರಾಯಚೂರು ( 12 ) ಯಾದಗಿರಿ (40) ನೇ ಕ್ರಮಾಂಕದಲ್ಲಿ ಸ್ಥಾನ ಪಡೆದಿದ್ದು, ಅತಿ ಹಿಂದುಳಿದ ಜಿಲ್ಲೆಗಳು ಎಂದು ಘೋಷಿಸಲ್ಪಟ್ಟಿವೆ.

ಅಭಿವೃದ್ದಿ ಕಾರ್ಯಸೂಚಿಗಳಲ್ಲಿ ರಾಯಚೂರು ಶೇ. 43. 53 ರಷ್ಟು ಅಂಕ ಪಡೆದಿದ್ದರೆ, ಯಾದಗಿರಿ ಶೇ. 37. 1 ರಷ್ಟು ಅಂಕ ಪಡೆದಿದೆ . ಆರೋಗ್ಯ, ಪೌಷ್ಠಿಕಾಂಶ, ಶಿಕ್ಷಣ, ಕೃಷಿ, ಜಲ ಸಂಪನ್ಮೂಲ, ಮೂಲ ಸೌಕರ್ಯ, ಆರ್ಥಿಕ ಒಳ್ಳಗೊಳ್ಳುವಿಕೆ, ಮತ್ತು ಕೌಶಲ್ಯಾಭಿವೃದ್ಧಿ  ಕ್ಷೇತ್ರಗಳಲ್ಲಿನ 49  ಅಂಶಗಳ ಆಧಾರದ ಮೇಲೆ ನೀತಿ ಆಯೋಗ  ಜಿಲ್ಲೆಗಳ ಪ್ರಗತಿಯನ್ನು ನಿರ್ವಹಣೆ ಮಾಡುತ್ತದೆ.

ಏ. 1 ರಿಂದ ಜಿಲ್ಲೆಗಳು ಮಾಹಿತಿಯನ್ನು ಸಂಗ್ರಹಿಸಲು ಆರಂಭಿಸುತ್ತವೆ. ಕಾಲಕ್ಕೆ ತಕ್ಕಂತೆ ಪ್ರಗತಿಯಲ್ಲಿನ ಆಧಾರದ ಮೇಲೆ ಕ್ರಮಾಂಕವನ್ನು ನೀಡಲಾಗುತ್ತದೆ. ಮಕ್ಕಳ ಬೆಳವಣಿಗೆ, ಸಾಂಕ್ರಾಮಿಕ ರೋಗಗಳು, ಮತ್ತು ಆರೋಗ್ಯ ಮೂಲಸೌಕರ್ಯ ಮತ್ತಿತರ  ಆರೋಗ್ಯ ಮತ್ತು ಪೌಷ್ಠಿಕಾಂಶಕ್ಕೆ ಸಂಬಂಧಿಸಿದ ವಿಷಯಗಳೇ ಶೇ. 30 ರಷ್ಟು ಅಂಕಗಳನ್ನು ಹೊಂದಿರುತ್ತವೆ.

ನಾಲ್ಕು ವರ್ಷಗಳ ನಂತರ ಪ್ರಗತಿಯಾಗಿದೆ. ರಾಜ್ಯದಲ್ಲಿ ಶೇ. 72 ರಷ್ಟು ಶಿಕ್ಷಣಮಟ್ಟವಿದ್ದರೆ ಯಾದಗಿರಿಯಲ್ಲಿ ಶೇ. 51 ರಷ್ಟು ಶಿಕ್ಷಣಮಟ್ಟ ಹೆಚ್ಚಾಗಿದೆ.  ಪಂಜಾಬಿಗಿಂತಲೂ ಇಲ್ಲಿ ಹೆಚ್ಚು ಗುಣಮಟ್ಟದ ಅಕ್ಕಿಯನ್ನು ಉತ್ಪಾದಿಸಲಾಗುತ್ತಿದೆ ಎಂದು ಯಾದಗಿರಿಯ ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.