ನೀವು ಕೂಡ ನಟ ಸಿಂಬು ಮನವಿಗೆ ಬೆಂಬಲ ನೀಡುವಿರಾ?
ನೀರಿದ್ದರೆ ಯಾರೂ ಕೂಡ ಕೊಡುವುದಿಲ್ಲ ಎಂದು ಹೇಳುವುದಿಲ್ಲ.. ಕರ್ನಾಟಕ ಮಾತೆ ತಮಿಳನಿಗಾಗಿ ಒಂದು ಲೋಟ ನೀರು ಕೊಡುವೆಯಾ ಎಂಬ ತಮಿಳುನಟ ಸಿಂಬು ಅವರ ಮನವಿಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Published On :
ಬೆಂಗಳೂರು: ನೀರಿದ್ದರೆ ಯಾರೂ ಕೂಡ ಕೊಡುವುದಿಲ್ಲ ಎಂದು ಹೇಳುವುದಿಲ್ಲ.. ಕರ್ನಾಟಕ ಮಾತೆ ತಮಿಳನಿಗಾಗಿ ಒಂದು ಲೋಟ ನೀರು ಕೊಡುವೆಯಾ ಎಂಬ ತಮಿಳುನಟ ಸಿಂಬು ಅವರ ಮನವಿಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ರಾಜಕೀಯದ ಹೊರತಾಗಿ ಮಾನವೀಯತೆ ದೃಷ್ಟಿಯಿಂದ ಕಾವೇರಿ ಸಮಸ್ಯೆಯನ್ನು ಬಗೆಹರಿಸಬೇಕು ಎಂಬ ನಟ ಸಿಂಬು ವಾದ ಇದೀಗ ಎಲ್ಲಡೆ ಶ್ಲಾಘನೆಗೆ ಪಾತ್ರವಾಗಿದೆ. ಈಗಾಗಲೇ ಸಾವಿರಾರು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಸಿಂಬು ಮನವಿಗೆ ಬೆಂಬಲ ನೀಡುತ್ತಿದ್ದು, ಇನ್ನು ಸಾಕಷ್ಚು ಮಂದಿ ಟ್ವೀಟ್ ಮಾಡುವ ಮೂಲಕ ಸಿಂಬುಗೆ ಬೆಂಬಲ ಸೂಚಿಸುತ್ತಿದ್ದಾರೆ.
ನೀವು ಕೂಡ ಸಿಂಬುಗೆ ಬೆಂಬಲಿಸಬೇಕೇ?
ನೀವು ಬಳಿಸಿದ ಬಳಿಕ ಉಳಿದ ನೀರನ್ನು ತಮಿಳನಿಗೆ ಕೊಡಿ ಎಂಬ ನಟ ಸಿಂಬು ಮನವಿಗೆ ನೀವೂ ಕೂಡ ಬೆಂಬಲಿಸಬೇಕು ಎಂದರೆ, ನಿಮ್ಮ ಸಮೀಪದಲ್ಲಿರುವ ಅಥವಾ ನಿಮ್ಮ ತಮಿಳು ಸ್ನೇಹಿತನಿಗೆ ಒಂದು ಲೋಟ ನೀರು ನೀಡಿ.. ಅದನ್ನು ವಿಡಿಯೋ ಅಥವಾ ಫೋಟೋ ಮಾಡಿ ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿ ನಿಮ್ಮ ಅನಿಸಿಕೆ ಬರೆಯಿರಿ.. ಬಳಿಕ #UniteForHumanity ಎಂಬ ಹ್ಯಾಶ್ ಟ್ಯಾಗ್ ಹಾಕಿ ಪೋಸ್ಟ್ ಮಾಡಿ..
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
tamilnaduಬೆಂಗಳೂರುBengaluruಕನ್ನಡಿಗಸಿಂಬುKannadigasಕಾವೇರಿ ವಿವಾದSimbuCauvery rowUnite For Humanityಯೂನಿಟ್ ಫಾರ್ ಹ್ಯುಮಾನಿಟಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


