ಕರ್ನಾಟಕ: ಭಿಕ್ಷುಕರಿಗೆ ಮತದಾನ ಭಾಗ್ಯ ನೀಡಲು ಚುನಾವಣಾ ಆಯೋಗಕ್ಕೆ ಡಿಎಎಆರ್ ಐ ಮನವಿ
ಕರ್ನಾಟಕದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವವರನ್ನು ಮತದಾರರೆಂದು ನೋಂದಣಿ ಮಾಡಬೇಕೆಂದು ಡೆಮಾಕ್ರೆಟಿಕ್ ಅಂಬಾಸಡರ್ ಫಾರ್ ಆಲ್ ಇಂಡಿಯಾ ರೂರಲ್ ಇಂಟಿಗ್ರಿಟಿ(ಡಿಎಎಆರ್ ಐ) ಚುನಾವಣಾ

Published On :
ಮಂಗಳೂರು: ಕರ್ನಾಟಕದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವವರನ್ನು ಮತದಾರರೆಂದು ನೋಂದಣಿ ಮಾಡಬೇಕೆಂದು ಡೆಮಾಕ್ರೆಟಿಕ್ ಅಂಬಾಸಡರ್ ಫಾರ್ ಆಲ್ ಇಂಡಿಯಾ ರೂರಲ್ ಇಂಟಿಗ್ರಿಟಿ(ಡಿಎಎಆರ್ ಐ) ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.
ಭಿಕ್ಷುಕರನ್ನೂ ಮತದಾರರನ್ನಾಗಿ ನೋಂದಣಿ ಮಾಡುವವರೆಗೆ ಯಾವುದೇ ಚುನಾವಣಾ ಪ್ರಕ್ರಿಯೆಗಳನ್ನು ನಡೆಸಬಾರದು ಎಂದು ಡಿಎಎಆರ್ ಐ ಆಯೋಗಕ್ಕೆ ಒತ್ತಡ ಹೇರಿದೆ. ಡಿಎಎಆರ್ ಐ ಸಂಚಾಲಕ ರವಿ ಬಂಗೇರ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ಗೆ ಪತ್ರ ಬರೆದಿದ್ದು, ರಾಜ್ಯದ ಶೇ.5 ರಷ್ಟು ಜನಸಂಖ್ಯೆ ಭಿಕ್ಷಾಟನೆಯಲ್ಲಿ ತೊಡಗಿದ್ದು, ಈ ಪೈಕಿ ಬಹುತೇಕರು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿಲ್ಲ. ಅಷ್ಟೇ ಅಲ್ಲದೇ ಅವರಿಗೆ ವಸತಿಯೂ ಇಲ್ಲದಂತಾಗಿದೆ ಎಂದು ಹೇಳಿದ್ದಾರೆ.
ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳಿಂದ ನಿರ್ವಹಣೆಯಾಗುತ್ತಿರುವ ಪುನರ್ವಸತಿ ಕೇಂದ್ರಗಳಲ್ಲಿರುವ ಭಿಕ್ಷುಕರೂ ಸಹ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿಕೊಂಡಿಲ್ಲ, ಅವರಿಗೆ ಸರಿಯಾದ ವಿಳಾಸವೂ ಇಲ್ಲ ಎಂದು ಪತ್ರದಲ್ಲಿ ರವಿ ಬಂಗೇರ ತಿಳಿಸಿದ್ದು ಅವರು ಭಾರತದ ನಾಗರಿಕರಲ್ಲವೇ? ಅವರಿಗೆ ಮತದಾನ ಮಾಡುವ ಹಕ್ಕಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಈ ವಿಷಯವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಭಿಕ್ಷುಕರಿಗೆ ಸರಿಯಾದ ವಿಳಾಸವಿಲ್ಲವಾದ ಕಾರಣ ಗುರುತಿನ ಚೀಟಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ, ಭಿಕ್ಷಾಟನೆಯಲ್ಲಿ ತೊಡಗುವವರಿಗೆ ಮನೆ ಇದ್ದಿದ್ದರೆ ಅವರೇಕೆ ಆ ಕೆಲಸ ಮಾಡುತ್ತಿದ್ದರು ಎಂದು ಪತ್ರದಲ್ಲಿ ರವಿ ಬಂಗೇರ ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


