ಮೆಜೆಸ್ಟಿಕ್ ನಮ್ಮದಲ್ಲ, ನಿಮ್ಮದು; ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ್ ಮಾತಿಗೆ ಮನಸೋತ ಬೀದಿ ವ್ಯಾಪಾರಿಗಳು!
ಕರ್ನಾಟಕದ ದಿಟ್ಟ ಹಾಗೂ ನಿಷ್ಟಾವಂತ ಐಪಿಎಸ್ ಅಧಿಕಾರಿ ಎಂದೇ ಖ್ಯಾತಿ ಪಡೆಯುತ್ತಿರುವ ರವಿ ಚನ್ನಣ್ಣನವರ್ ಅವರು ಈಗಾಗಲೇ ಮೈಸೂರು ಹಾಗೂ ಶಿವಮೊಗ್ಗದ ಲಕ್ಷಾಂತರ ಜನರ ಅಭಿಮಾನವನ್ನು ಗಳಿಸಿದ್ದು, ಇದೀಗ ತಮ್ಮ ಶಕ್ತಿಯುತ ಮಾತನಿಂದಾಗಿ ಬೆಂಗಳೂರಿಗರ ಮನವನ್ನೂ ಗೆದ್ದಿದ್ದಾರೆ...

Published On :
ಬೆಂಗಳೂರು; ಕರ್ನಾಟಕದ ದಿಟ್ಟ ಹಾಗೂ ನಿಷ್ಟಾವಂತ ಐಪಿಎಸ್ ಅಧಿಕಾರಿ ಎಂದೇ ಖ್ಯಾತಿ ಪಡೆಯುತ್ತಿರುವ ರವಿ ಚನ್ನಣ್ಣನವರ್ ಅವರು ಈಗಾಗಲೇ ಮೈಸೂರು ಹಾಗೂ ಶಿವಮೊಗ್ಗದ ಲಕ್ಷಾಂತರ ಜನರ ಅಭಿಮಾನವನ್ನು ಗಳಿಸಿದ್ದು, ಇದೀಗ ತಮ್ಮ ಶಕ್ತಿಯುತ ಮಾತನಿಂದಾಗಿ ಬೆಂಗಳೂರಿಗರ ಮನವನ್ನೂ ಗೆದ್ದಿದ್ದಾರೆ.
ಬೆಂಗಳೂರಿನ ಪಶ್ಚಿಮ ವಿಭಾಗದ ಡಿಸಿಪಿಯಾಗಿ ಕಾರ್ಯನಿರ್ವಹಿಸುತ್ತಿರುವ ರವಿಚೆನ್ನಣ್ಣನವರ್ ಅವರು, ಬೀದಿ ವ್ಯಾಪಾರಿಗಳನ್ನು ತಮ್ಮ ಕಚೇರಿಗೆ ಕರೆಸಿಕೊಂಡು ನಡೆಸಿದ ಸಭೆಯ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ರವಿ ಅವರ ಮಾತುಗಳಿಗೆ ಬೆಂಗಳೂರು ಜನತೆ ಮನಸೋತಿದ್ದಾರೆ.
ಬೀದಿ ಬದಿಯಲ್ಲಿರುವ ವ್ಯಾಪಾರಿಗಳನ್ನು ಕಡೆಗಣನೆಯಿಂದ ನೋಡುತ್ತಿರುವ ಈ ದಿನಗಳಲ್ಲಿ, ರವಿ ಚನ್ನಣ್ಣನವರ್ ಅವರು ಬೀದಿ ವ್ಯಾಪಾರಿಗಳೊಂದಿಗೆ ಪ್ರೀತಿಯಿಂದ ಮಾತನಾಡಿರುವುದಕ್ಕೆ ಹಲವು ಮೆಚ್ಚುಗೆಗಳು ವ್ಯಕ್ತವಾಗತೊಡಗಿವೆ.
ವಿಡಿಯೋದಲ್ಲಿರುವ ಪ್ರಕಾರ ಬೀದಿ ವ್ಯಾಪಾರಿಗಳೊಂದಿಗೆ ಸಭೆ ನಡೆಸಿರುವ ರವಿ ಚನ್ನಣ್ಣನವರ್ ಅವರು, ಬೆಂಗಳೂರಿನಲ್ಲಿ ಯಾರೂ ಭಯದಿಂದ ಬದುಕುವ ವಾತಾರವಣ ಇರಬಾರದು. ಈ ಮೆಜೆಸ್ಟಿಕ್ ನಮ್ಮದಲ್ಲ. ಮೆಜೆಸ್ಟಿಕ್ ಇರುವುದು ನಿಮ್ಮಿಂದಲೇ ಹೊರತು, ನಮ್ಮಿಂದಲ್ಲ. ಮೆಜೆಸ್ಟಿಕ್ ನಿಮ್ಮದು ಎಂದು ಬೀದಿ ವ್ಯಾಪಾರಿಗಳಿಗೆ ಹೇಳಿದ್ದಾರೆ.
ಮೆಜೆಸ್ಟಿಕ್ ಎಂದಾಕ್ಷಣ ಜನರದಲ್ಲಿ ಭಯದ ವಾತಾವರಣ ಇದೆ. ಮೆಜೆಸ್ಟಿಕ್ ನಲ್ಲಿ ಮೋಸವಾಗುತ್ತದೆ, ಪಿಕ್ ಪಾಕೆಟ್ ಆಗುತ್ತದೆ ಎಂದು ಹೇಳಲಾಗುತ್ತಿದೆ. ಇಂತಹ ಘಟನೆಗಳ ಬಗ್ಗೆ ಶೀಘ್ರಗತಿಯಲ್ಲಿ ಮಾಹಿತಿ ನೀಗುವುದು ಇಲ್ಲಿನ ವ್ಯಾಪಾರಿಗಳಿಗೆ. ಕೂಡಲೇ ನಮಗೆ ಮಾಹಿತಿ ಕೊಡಿ, ನಾವು ಕ್ರಮ ಕೈಗೊಳ್ಳುತ್ತೇವೆ. ಮೆಜೆಸ್ಟಿಕ್'ನ್ನು ಉತ್ತಮ ವಾತಾವರಣದ ಪ್ರದೇಶವನ್ನಾಗಿ ನಿರ್ಮಿಸೋಣ, ಇದಕ್ಕೆ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಬಳಿಕ ಬೀದಿ ವ್ಯಾಪಾರಿಗಳೊಂದಿಗೆ ಪ್ರೀತಿಯಿಂದ ಮಾತನಾಡಿರುವ ಅವರು, ಮಕ್ಕಳ ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ಬೀದಿ ವ್ಯಾಪಾರಗಳೇನಿದ್ದರೂ ನಿಮಗೆ ಕೊನೆಯದಾಗಲಿ.ನಿಮ್ಮ ಮಕ್ಕಳಿಗೂ ಅದು ಮುಂದುವರೆಯಬಾರದು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಬೆಂಗಳೂರಿನಲ್ಲಿ ಶಿಕ್ಷಣ ಕೊಡಿಸುವುದು ಕಷ್ಟ. ಮೈಸೂರಿನಲ್ಲಿ ಓದಿಸುವುದಾದರೆ, ಕರೆದುಕೊಂಡು ಬನ್ನಿ, ನಾನು ಶಿಕ್ಷಣ ಕೊಡಿಸುತ್ತೇನೆ. ಹಾಸ್ಟೆಲ್ ನಲ್ಲಿ ಸೇರಿಸಿ ಓದಿಸುವ ಕೆಲಸವನ್ನು ಮಾಡಿಸುತ್ತೇನೆ. ದಾನಿಗಳಿಂದಲೇ ನಡೆಯುತ್ತಿರುವ ಶಾಲೆಯೊಂದರಲ್ಲಿ ನಿಮ್ಮ ಮಕ್ಕಳನ್ನು ಸೇರಿಸುತ್ತೇನೆ. ಹೈಸ್ಕೂಲ್ ನಿಂದ ಹಿಡಿದು, ಪಿಯುಸಿ, ಡಿಗ್ರಿಯವರೆಗೂ ಶಿಕ್ಷಣ ಕೊಡಿಸುತ್ತೇನೆಂದು ಬೀದಿ ವ್ಯಾಪಾರಿಗಳ ಮನಗೆದ್ದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengaluruಮೆಜೆಸ್ಟಿಕ್ಭಾಷಣMejesticಬೀದಿ ವ್ಯಾಪಾರಿಗಳುRavi channannavarStreet tradersPowerful speechರವಿ ಚನ್ನಣ್ಣನವರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


