ಮೈಸೂರು ದಸರಾ 2017: ಜಂಬೂ ಸವಾರಿಯಲ್ಲಿ ಗಮನ ಸೆಳೆಯಲು ಸ್ತಬ್ಧ ಚಿತ್ರಗಳು ಸಿದ್ಧ
ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಗೆ ಸಿದ್ಧತೆ ಪೂರ್ಣಗೊಂಡಿರುವ ಬೆನ್ನಲ್ಲೇ ಜಂಬೂಸವಾರಿಯ ಮತ್ತೊಂದು ಆಕರ್ಷಣೆ ಸ್ಥಬ್ಧ ಚಿತ್ರಗಳ ಮೆರವಣಿಗೆಗೂ ಸಕಲ ಸಿದ್ಧತೆಗಳೂ ಪೂರ್ಣಗೊಂಡಿವೆ.

Published On :
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಗೆ ಸಿದ್ಧತೆ ಪೂರ್ಣಗೊಂಡಿರುವ ಬೆನ್ನಲ್ಲೇ ಜಂಬೂಸವಾರಿಯ ಮತ್ತೊಂದು ಆಕರ್ಷಣೆ ಸ್ಥಬ್ಧ ಚಿತ್ರಗಳ ಮೆರವಣಿಗೆಗೂ ಸಕಲ ಸಿದ್ಧತೆಗಳೂ ಪೂರ್ಣಗೊಂಡಿವೆ.
ನಾಡಿನ ವಿವಿಧ ಕಲಾ ತಂಡಗಳು ಹಾಗೂ ವಿವಿಧ ಸಾಂಸ್ಕ್ರತಿಕ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲ್ಲಿದ್ದು, ಮೆರವಣಿಗೆಯಲ್ಲಿ ಜನರ ಮನಸೂರೆಗೊಳಿಸುವ ಸ್ತಬ್ಧ ಚಿತ್ರಗಳೂ ಕೂಡ ಪಾಲ್ಗೊಳ್ಳಲ್ಲಿವೆ. ಜಂಬೂ ಸವಾರಿ ಅಂಬಾರಿ ಆನೆಗಳ ಜತೆ ಹೆಜ್ಜೆ ಹಾಕಲು ಸ್ಥಬ್ಧಚಿತ್ರಗಳು ತಯಾರಾಗಿದ್ದು, ವಿವಿಧ ಜಿಲ್ಲೆಗಳ ಸುಮಾರು 40 ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.
ಪ್ರಮುಖವಾಗಿ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಬಿಂಬಿಸುವ ಸ್ಥಬ್ಧ ಚಿತ್ರಗಳು, ಜಿಲ್ಲೆಗಳ ಸಾಂಸ್ಕ್ರತಿಕತೆಯನ್ನು ಬಿಂಬಿಸುವ ಸ್ಥಬ್ಧಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿವೆ. ಈ ಪೈಕಿ ಸಿಎಂ ಸಿದ್ದರಾಮಯ್ಯ ಸರ್ಕಾರದ ಜನಪ್ರಿಯ ಯೋಜನೆಗಳಾದ ಇಂದಿರಾ ಕ್ಯಾಂಟೀನ್ ಯೋಜನೆಯ ಜನಸಾಮಾನ್ಯರ ಆಹಾರ ತಾಣ ಸ್ಧಬ್ಧಚಿತ್ರ, ನುಡಿದಂತೆ ನಡೆಯುತ್ತಿರುವ ಜನಪರ ಸರ್ಕಾರ ಎಂಬ ಸ್ಥಬ್ಧಚಿತ್ರ, ಜೀವಜಲ ಸಂರಕ್ಷಣೆ, ಆರೋಗ್ಯವೇ ಭಾಗ್ಯ, ಸ್ವಚ್ಛ ಭಾರತ್ ಮಿಷನ್ ಯಶೋಗಾಥೆ, ಶುದ್ಧೀಕರಿಸಿದ ನೀರು ಮರುಬಳಕೆ, ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ ಸೇರಿದಂತೆ ವಿವಿಧ ಜಿಲ್ಲೆಗಳ ಸಾಂಸ್ಕೃತಿಕ ಹಾಗೂ ಐತಿಹಾಸಿಕತೆಯನ್ನು ಬಿಂಬಿಸುವ ಚತುರ್ಮುಖ ಬಸದಿ, ಜಾಗತಿಕ ಜೈನ ಕ್ಷೇತ್ರ ಶ್ರವಣಬೆಳಗೊಳ ಸಿರಿ, ಆನೆಗೊಂದಿ ಅರಮನೆ, ಜಾನಪದ ಸಿರಿ, ಶ್ರೀರಂಗನಾಥಸ್ವಾಮಿ ದೇವಸ್ಥಾನ, ತುಮಕೂರಿನ ಯಡಿಯೂರು ಸಿದ್ದಲಿಂಗೇಶ್ವರ, ಚಿಕ್ಕಮಗಳೂರಿನ ದೇವೀರಮ್ಮನ ಬೆಟ್ಟ, ಮದಕರಿನಾಯಕ ದುರ್ಗದ ಗತವೈಭವ, ಭೂತನಾಥ ದೇವಾಲಯ, ಮಡಿವಾಳ ಮಾಚಿದೇವರ ಹೊಂಡ, ನವರಂಗ ದರ್ವಾಜ್ ಮುದಗಲ್ ಕೋಟೆ ಸೇರಿದಂತೆ ಒಟ್ಟು 40 ಸ್ಥಬ್ಧಚಿತ್ರಗಳು ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಮೈಸೂರುKarnatakaಕರ್ನಾಟಕMysuruಜಂಬೂ ಸವಾರಿJamboo Savariದಸರಾ-2017Dasara- 2017Tablo Processionಸ್ಥಬ್ಧಚಿತ್ರ ಮೆರವಣಿಗೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.