ರಾಜ್ಯ

ಎಸ್ ಯುವಿ ಕಾರು ಅಪಘಾತ: ಉದ್ಯಮಿ ಆದಿಕೇಶವಲು ಮೊಮ್ಮಗ ಅರೆಸ್ಟ್

ಬುಧವಾರ ರಾತ್ರಿ ಸೌತ್‌ ಎಂಡ್‌ ವೃತ್ತದಲ್ಲಿ ಮತ್ತು ವ್ಯಾನ್ ಢಿಕ್ಕಿಯಾಗಿ ಐವರು ಗಾಯಗೊಂಡಿದ್ದಾರೆ.

ಎಸ್ ಯುವಿ ಕಾರು ಅಪಘಾತ: ಉದ್ಯಮಿ ಆದಿಕೇಶವಲು ಮೊಮ್ಮಗ ಅರೆಸ್ಟ್
ಅಪಘಾತಕ್ಕೀದಾದ ಎಸ್ ಯುವಿ ಕಾರ್
Published On :
ಬೆಂಗಳೂರು: ಬುಧವಾರ ರಾತ್ರಿ ಸೌತ್‌ ಎಂಡ್‌ ವೃತ್ತದಲ್ಲಿ ಮತ್ತು ವ್ಯಾನ್ ಢಿಕ್ಕಿಯಾಗಿ ಐವರು ಗಾಯಗೊಂಡಿದ್ದಾರೆ.
ಕಾರು ಚಾಲಕ  ಹಿರಿಯ ಉದ್ಯಮಿ ಆದಿಕೇಶವಲು ಮೊಮ್ಮಗ ವಿಷ್ಣು ವನ್ನು ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿ ಜಯನಗರ ಸಂಚಾರಿ ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ನಡೆದಿದೆ.
ಕಾರಿನಲ್ಲಿ 110 ಗ್ರಾಂ ಗಾಂಜಾ ಪತ್ತೆಯಾಗಿದ್ದು, ಈ ಸಂಬಂಧವೂ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಕಾರಿನಲ್ಲಿ ನಟ ಪ್ರಜ್ವಲ್ ದೇವರಾಜ್ ಹಾಗೂ ದಿಗಂತ್ ಸಹ ಇದ್ದರು ಎನ್ನುವ ಸ್ಥಳೀಯರ ಹೇಳಿಕೆ ಆಧರಿಸಿ ಜಯನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ‘ನಮಗೂ ಅಪಘಾತಕ್ಕೂ ಸಂಬಂಧವಿಲ್ಲ. ನಾಲ್ಕು ದಿನಗಳಿಂದ ನಾವು ಬೆಂಗಳೂರಿನಲ್ಲಿಲ್ಲ’ ಎಂದು ನಟರು ಹೇಳಿಕೊಂಡಿದ್ದಾರೆ.
ಅಪಘಾತದ ನಡೆದ ಬಳಿಕ ಪರಾರಿಯಾಗಲು ಯತ್ನಿಸಿದ ಕಾರು ಚಾಲಕನನ್ನು ಸ್ಥಳೀಯರು‌ ಹಿಡಿದು ಥಳಿಸಿದ್ದಾರೆ. ನಂತರ ಸ್ಥಳಕ್ಕೆ ದೌಡಾಯಿಸಿದ ಪೋಲೀಸರು, ಆರೋಪಿಯನ್ನು ವಶಕ್ಕೆ ಪಡೆದು ಕಾರನ್ನು ಜಪ್ತಿ ಮಾಡಿದರು. 
ಪೋಲೀಸರು ಆಲ್ಕೋಮೀಟರ್‌ನಿಂದ ತಪಾಸಣೆ ನಡೆಸಿದಾಗ, ‌ವಿಷ್ಣು ದೇಹದಲ್ಲಿ ಮದ್ಯದ ಪ್ರಮಾಣ 150 ಮಿ.ಗ್ರಾಂ ಇತ್ತು. (ಕನಿಷ್ಠ ಮಿತಿ 40 ಮಿ.ಗ್ರಾಂ) ಥಳಿತದಿಂದ ಗಾಯಗೊಂಡಿರುವ ಆತನನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.