ರಾಜ್ಯ

ಬೆಂಗಳೂರು:ರಸ್ತೆಯಲ್ಲಿ ಚಾಕು ಇರಿದು ಯುವಕನ ಹತ್ಯೆ, ಓರ್ವನ ಬಂಧನ

ಟಿ.ದಾಸರಹಳ್ಳಿ ಸಮೀಪ ತುಮಕೂರು ರಸ್ತೆಯಲ್ಲಿ ಜಗಳವುಂಟಾಗಿ 26 ವರ್ಷದ ಯುವಕ ಪವನ್ ಕುಮಾರ್ ನನ್ನು ಇರಿದು ಕೊಲೆ ಮಾಡಿದ ಪ್ರಕರಣಕ್ಕೆ ...

ಬೆಂಗಳೂರು:ರಸ್ತೆಯಲ್ಲಿ ಚಾಕು ಇರಿದು ಯುವಕನ ಹತ್ಯೆ, ಓರ್ವನ ಬಂಧನ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ಟಿ.ದಾಸರಹಳ್ಳಿ ಸಮೀಪ ತುಮಕೂರು ರಸ್ತೆಯಲ್ಲಿ ಜಗಳವುಂಟಾಗಿ 26 ವರ್ಷದ ಯುವಕ ಪವನ್ ಕುಮಾರ್ ನನ್ನು ಇರಿದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮಾದನಾಯಕನಹಳ್ಳಿ ಪೊಲೀಸರು ನಿನ್ನೆ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಮೂವರು ಪವನ್ ನನ್ನು ಕಾರಿನಿಂದ ಹೊರಗೆ ಎಳೆದು ಅವರಲ್ಲಿ ಒಬ್ಬ ಪವನ್ ಗೆ ಚಾಕುವಿನಿಂದ ಇರಿದು ಕೊಂದು ಹಾಕಿದ್ದ. ಈ ಘಟನೆ ಕಳೆದ ಭಾನುವಾರ ರಾತ್ರಿ ನಡೆದಿತ್ತು. ಪವನ್ ನನ್ನು ಇರಿದ ನಂತರ ದುಷ್ಕರ್ಮಿಗಳು ಮತ್ತೊಬ್ಬ ಬೈಕ್ ಸವಾರನ ಮೇಲೆ ದಾಳಿ ನಡೆಸಿ ದರೋಡೆ ಮಾಡಿದ್ದಾರೆ.
ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ವಿಶೇಷ ತಂಡ ಒಬ್ಬನನ್ನು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸರು ತಿಳಿಸಿದ್ದಾರೆ. ಪ್ರಮುಖ ಆರೋಪಿಯನ್ನು ಜಗದೀಶ್ ಅಲಿಯಾಸ್ ಜಗ್ಗ ಎಂದು ಗುರುತಿಸಲಾಗಿದೆ. ಈತ ಟಿ.ದಾಸರಹಳ್ಳಿಯ ನಿವಾಸಿಯಾಗಿದ್ದಾನೆ. ಎರಡನೇ ಆರೋಪಿ ಜಗ್ಗನ ಸ್ನೇಹಿತ ಮುನಿರತ್ನನಗರದ ದಯಾನಂದ್ ಅಲಿಯಾಸ್ ದಯಾ ಆಗಿದ್ದಾನೆ. ಮೂರನೇ ಆರೋಪಿ ಯಾರೆಂದು ಇನ್ನೂ ಗೊತ್ತಾಗಿಲ್ಲ.
ಮೂವರು ಕೂಡ ಈ ಹಿಂದೆ ಸಾಕಷ್ಟು ಕೊಲೆ ಮತ್ತು ಕೊಲೆ ಯತ್ನಗಳನ್ನು ನಡೆಸಿದ್ದು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದರು. 
ಮೂವರು ಆರೋಪಿಗಳು ಕಳೆದ ಭಾನುವಾರ ರಾತ್ರಿ ತುಮಕೂರು ರಸ್ತೆ ಬಳಿ ಹೋಗುತ್ತಿದ್ದಾಗ ಅವರ ಬೈಕ್ ಗೆ ಟ್ರಾವಲ್ ಏಜೆನ್ಸಿಯಲ್ಲಿ ನೌಕರರಾಗಿದ್ದ ಪವನ್ ಕುಮಾರ್ ಕಾರು ಡಿಕ್ಕಿ ಹೊಡೆಯಿತು ಎಂದು ಜಗಳ ಆರಂಭವಾಗಿತ್ತು.
Story image
ಪವನ್ ಕುಮಾರ್
ಪವನ್ ತಮ್ಮ ಸ್ನೇಹಿತರ ಜೊತೆ ಸಿನಿಮಾ ವೀಕ್ಷಿಸಿ ಜಾಲಹಳ್ಳಿ ಕ್ರಾಸ್ ನಿಂದ  ತಮ್ಮ ಮನೆ ಚಿಕ್ಕಬಿದಿರಕಲ್ಲಿನ ವಿನಾಯಕನಗರ ಕಡೆಗೆ ಬರುತ್ತಿದ್ದರು. ಮೂವರು ಆರೋಪಿಗಳು ಬೈಕ್ ನಲ್ಲಿ ಪವನ್ ಕಾರನ್ನು ಹಿಂಬಾಲಿಸಿಕೊಂಡು ಬಂದು 8ನೇ ಮೈಲಿ ಹತ್ತಿರ ಕಾರು ಅಡ್ಡಗಟ್ಟಿ ಬೈಯಲು ಆರಂಭಿಸಿದರು. ನಂತರ ಜಗಳ ತಾರಕಕ್ಕೇರಿತ್ತು. 
ಅಲ್ಲಿಂದ ಇಬ್ಬರು ಬುದ್ಧಜ್ಯೋತಿ ಲೇ ಔಟ್ ಗೆ ಓಡಿಹೋಗಿ ಅಲ್ಲಿ ಮತ್ತೊಬ್ಬ ಯುವಕ ಚರಣ್ ನನ್ನು ಹಿಡಿಯಲೆತ್ನಿಸಿದರು. ಚರಣ್ ಮಾದನಾಯಕನಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಚರಣ್ ನೀಡಿರುವ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಪೊಲೀಸರು ಹುಡುಕುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.