ರಾಜ್ಯ

ಹೊರನಾಡು ದೇವಾಲಯ ಧರ್ಮಕರ್ತರ ಡೆಬಿಟ್ ಕಾರ್ಡ್ ಹ್ಯಾಕ್: 21 ಲಕ್ಷ ಕಳವು

ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಭೀಮೇಶ್ವರ ಚೋಶಿ ಅವರ ಡೆಬಿಟ್ ಕಾರ್ಡ್ ಹ್ಯಾಕ್ ಆಗಿದೆ!

ಹೊರನಾಡು ದೇವಾಲಯ ಧರ್ಮಕರ್ತರ ಡೆಬಿಟ್  ಕಾರ್ಡ್ ಹ್ಯಾಕ್: 21 ಲಕ್ಷ ಕಳವು
ಹೊರನಾಡು ದೇವಾಲಯ ಧರ್ಮಕರ್ತರ ಡೆಬಿಟ್ ಕಾರ್ಡ್ ಹ್ಯಾಕ್
Published On :
ಚಿಕ್ಕಮಗಳೂರು: ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಭೀಮೇಶ್ವರ ಚೋಶಿ ಅವರ ಡೆಬಿಟ್ ಕಾರ್ಡ್ ಹ್ಯಾಕ್ ಆಗಿದೆ! ಕಾರ್ಡ್ ಹ್ಯಾಕ್  ಮಾಡಿರುವ ವಂಚಕರು 21 ಲಕ್ಷ ರೂ. ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 
ಭೀಮೇಶ್ವರ ಚೋಶಿ ಯುರೋಪ್ ಪ್ರವಾಸದಲ್ಲಿದ್ದಾಗ ಸೆ.4ರಂದು ಇವರದೇ ಕಾರ್ಡ್ ಬಳಸಿ ಶಾಪಿಂಗ್ ಮಾಡಿದ್ದರು. ಅಂದಿನ ಬ್ಯಾಲೆನ್ಸ್ 25 ಲಕ್ಷ ರೂ. ಗಳಿತ್ತು. ಸೆ.6ರಂದು ಭಾರತಕ್ಕೆ ವಾಪಸದಾಗಿದ್ದ ಚೋಶಿ ಸೆ.14ರಂದು ತಮ್ಮ ಖಾತೆ ವಿವರ ಪರಿಶೀಲಿಸಿದಾಗ ವಂಚನೆ ನಡೆದಿರುವುದು ಬಯಲಾಗಿದೆ.
ಸೆ.4ರಿಂದ 13ರವರೆಗೆ ಹಲವು ಬಾರಿ ಹ್ಯಾಕ್ ಮಾಡಿರುವ ದುಷ್ಕರ್ಮಿಗಳು ಕಳಸದ ಕರ್ನಾಟಕ ಬ್ಯಾಂಕ್‍ನಿಂದ 21 ಲಕ್ಷ ರೂ. ಎಗರಿಸಿದ್ದಾರೆ.
ಹಣ ಕಡಿತವಾದ ಸಂದೇಶ ಇವರ ಮೊಬೈಲ್‍ಗೆ ಬದಿದ್ದರೂ ಅದನ್ನು ಗಮನಿಸಿದೆ ಇದ್ದದ್ದು ಇಷ್ಟು ದೊಡ್ಡ ಅನಾಹುತಕ್ಕೆ ಕಾರಣವಾಗಿದೆ. 
ಸೆ.14ರಂದು ವಿಷಯ ತಿಳಿದ ಕೂಡಲೇ ಚಿಕ್ಕಮಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ.  ಐಟಿ ಕಾಯ್ದೆ 66ಡಿ ಮತ್ತು ಐಪಿಸಿ 420 ವಂಚನೆ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆಗಾಗಿ ಬೆಂಗಳೂರು ಸೈಬರ್ ವಿಭಾಗಕ್ಕೆ ವರ್ಗಾಹಿಸಲಾಗುವುದು ಎಂದು ಚಿಕ್ಕಮಗಳೂರು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.