ನಗರದ ರಸ್ತೆಗಳ ಗುಂಡಿ ಮುಚ್ಚಲು 10 ದಿನ ಗಡುವು: ಬಿಬಿಎಂಪಿ ಆಯುಕ್ತ
ಮುಂದಿನ 10 ದಿನಗಳೊಳಗೆ ನಗರದ ರಸ್ತೆಯಲ್ಲಿರುವ ಎಲ್ಲಾ ಗುಂಡಿಗಳನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಆಯುಕ್ತ ಎಂ. ಮಂಜುನಾಥ್ ಪ್ರಸಾದ್ ಗಡುವು ...

Published On :
ಬೆಂಗಳೂರು: ಮುಂದಿನ 10 ದಿನಗಳೊಳಗೆ ನಗರದ ರಸ್ತೆಯಲ್ಲಿರುವ ಎಲ್ಲಾ ಗುಂಡಿಗಳನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಆಯುಕ್ತ ಎಂ. ಮಂಜುನಾಥ್ ಪ್ರಸಾದ್ ಗಡುವು ನೀಡಿದ್ದಾರೆ.
ತಾವು ನೀಡಿರುವ ಗಡುವಿನಲ್ಲಿ ಗುಂಡಿಗಳನ್ನ ಮುಚ್ಚಲು ರಾತ್ರಿ 10 ಗಂಟೆಯಿಂದ ಬೆಳಗ್ಗಿನ ಜಾವ 3 ಗಂಟೆ ವರೆಗೂ ಕಾಮಗಾರಿ ನಡೆಸಲು ಸೂಚಿಸಿದ್ದಾರೆ. ಈ ವೇಳೆ ನಗರದ ರಸ್ತೆಗಳಲ್ಲಿ ಸಂಚಾರ ಕಡಿಮೆ ಇರುತ್ತದೆ.
ಗುಂಡಿಗಳನ್ನು ಮುಚ್ಚುವದಷ್ಟೇ ಅಧಿಕಾರಿಗಳ ಕೆಲಸವಲ್ಲ, ಒಮ್ಮೆ ರಿಪೇರಿಯಾದ ರಸ್ತೆಗಳ ಫೋಟೋ ತೆಗೆದು ಜಿಪಿಎಸ್ ಇರುವ ಮೊಬೈಲ್ ನಿಂದ ಆಯುಕ್ತರಿಗೆ ರವಾನಿಸಬೇಕಿದೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರಿನ ರಸ್ತೆಗಳು ತೀರಾ ಹದಗೆಟ್ಟು ಪ್ರಯಾಣಿಕರ ಪಾಲಿಗೆ ನರಕದಂತಾಗಿವೆ.
ಕೇವಲ ಕಳಪೆ ಗುಣಮಟ್ಟದಿಂದ ಮಾತ್ರ ರಸ್ತೆಗಳಲ್ಲಿ ಗುಂಡಿಗಳಾಗಿಲ್ಲ, ಹಲವು ಎಜೆನ್ಸಿಗಳು ರಸ್ತೆ ಅಗೆದಿರುವುದು ಕಾರಣವಾಗಿದೆ, ಆದರೆ ಆಂತಿಮವಾಗಿ ನಾವು ನಾಗರಿಕರ ಆಕ್ರೋಶಕ್ಕೆ ಗುರಿಯಾಗುತ್ತೇವೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


