'ನಮ್ಮ ಶತ್ರು' ಯಾರೆಂದು ನಮ್ಮೆಲ್ಲರಿಗೂ ಗೊತ್ತು: ಸಾವಿಗೂ ಮುನ್ನ ಟ್ವೀಟ್ ಮಾಡಿದ್ದ ಗೌರಿ ಲಂಕೇಶ್
ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದ ಪತ್ರಕರ್ತೆ ಹಾಗೂ ಚಿಂತಕಿ ಗೌರಿ ಲಂಕೇಶ್ ಅವರು ಸಾವಿಗೂ ಮುನ್ನ ಮಾಡಿರುವ ಕೊನೆಯ ಟ್ವೀಟ್ ವೊಂದು ಇದೀಗ ಹಲವು ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ...

Published On :
ಬೆಂಗಳೂರು: ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದ ಪತ್ರಕರ್ತೆ ಹಾಗೂ ಚಿಂತಕಿ ಗೌರಿ ಲಂಕೇಶ್ ಅವರು ಸಾವಿಗೂ ಮುನ್ನ ಮಾಡಿರುವ ಕೊನೆಯ ಟ್ವೀಟ್ ವೊಂದು ಇದೀಗ ಹಲವು ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ.
ತಮ್ಮ ಸಾವಿಗೂ ಮುನ್ನ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಗೌರಿ ಲಂಕೇಶ್ ಅವರು, ನಮ್ಮಲ್ಲಿರುವ ಒಳಜಗಳ ಬಿಡಬೇಕು. ಒಬ್ಬರನ್ನೊಬ್ಬರು ದ್ವೇಷಿಸೋದನ್ನ ನಾವು ಬಿಡಬೇಕು. ನಾವೆಲ್ಲರೂ ನಮ್ಮ ನಡುವೆಯೇ ಜಗಳವಾಡುತ್ತಿದ್ದೇವೆಂದು ನಾನು ಭಾವಿಸುತ್ತಿದ್ದೇನೆ. ನಾವೆಲ್ಲರೂ ನಮ್ಮ 'ದೊಡ್ಡ ಶತ್ರು' ಯಾರೆಂದು ತಿಳಿದಿದ್ದೇವೆ. ನಾವೆಲ್ಲರೂ ದಯವಿಟ್ಟು ಅದರತ್ತ ಗಮನ ಹರಿಸಬಹುದೇ' ಎಂದು ಹೇಳಿಕೊಂಡಿದ್ದಾರೆ.

ನಮ್ಮಲ್ಲಿರುವ ಕೆಲವರು ನಕಲಿ ಪೋಸ್ಟ್ ಗಳನ್ನು ಶೇರ್ ಮಾಡಿ ತಪ್ಪು ಮಾಡುತ್ತಾರೆ. ಈ ವಿಚಾರದಲ್ಲಿ ನಾವು ಪರಸ್ಪರ ಎಚ್ಚರಿಸೋಣ. ಆದರೆ, ಪರಸ್ಪರ ಕಾಲೆಳೆದುಕೊಳ್ಳೋದು ಬೇಡ. ಶಾಂತಿ ಇರಲಿ ಗೆಳೆಯರೇ...ಎಂದು ಎರಡನೇ ಟ್ವೀಟ್ ನಲ್ಲಿ ಹೇಳಿದ್ದಾರೆ.

ಇದಾದ ಬಳಿಕ ಗೌರಿಯವರು ಮ್ಯಾನ್ಮಾರ್ ರೊಹಿಂಗ್ಯಾ ಮುಸ್ಲಿಂ ನಿರಾಶ್ರಿತರ ಸಮಸ್ಯೆಗಳನ್ನು ತಿಳಿಸುವ ಸುದ್ದಿಗಳ ಪೋಸ್ಟ್ ಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಸಾವಿಗೂ ಮುನ್ನ ಗೌರಿ ಲಂಕೇಶ್ ಅವರು ಮಾಡಿರುವ ಈ ಟ್ವೀಟ್ ಇದೀಗ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ತಮ್ಮ ಆಪ್ತವಲಯದಲ್ಲಿ ಉಂಟಾಗಿದ್ದ ಭಿನ್ನಾಭಿಪ್ರಾಯ, ಒಳಜಗಳಗಳ ಕುರಿತಂತೆ ಗೌರಿಯವರು ತಮ್ಮ ಟ್ವಿಟರ್ ಹೇಳಿಕೊಂಡಿದ್ದು, ಅವರ ಹತ್ಯೆಗೆ ಇದೇ ಕಾರಣವಾಯಿತೇ ಎಂಬುದರ ಬಗ್ಗೆಯೂ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.
ಪ್ರಗತಿಪರ ಚಿಂತಕಿಯಾಗಿದ್ದ ಗೌರವ ಅವರಿಗೆ ಈ ಹಿಂದೆಯೇ ದುಷ್ಕರ್ಮಿಗಳಿಂದ ಜೀವ ಬೆದರಿಕೆಗಳಿದ್ದು ಎಂಬ ಮಾತುಗಳು ಇದೀಗ ಗೌರಿಯವರ ಆಪ್ತವಲಯಗಳಲ್ಲಿ ಕೇಳಿ ಬರತೊಡಗಿವೆ. ಈ ಬಗ್ಗೆ ಅಪ್ತರ ಬಳಿ ಗೌರಿಯವರು ಹೇಳಿಕೊಂಡಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


