ವಿಶ್ವದ ಅನೇಕ ಸಮಸ್ಯೆಗಳಿಗೆ ನಮ್ಮ ಸಂಸ್ಕೃತಿಯಲ್ಲಿ ಉತ್ತರವಿದೆ: ಪ್ರಧಾನಿ ಮೋದಿ
ಆದಿ ಶಂಕರರು ರಚಿಸಿದ ಸೌಂದರ್ಯ ಲಹರಿಯನ್ನು ಸರಿಯಾಗಿ ಅರ್ಥಮಾಡಿಕೊಂಡರೆ ವಿವಿಧತೆಯಲ್ಲಿ ಏಕತೆ ಕಂಡುಕೊಳ್ಳಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

Published On :
ಬೆಂಗಳೂರು: ಆದಿ ಶಂಕರರು ರಚಿಸಿದ ಸೌಂದರ್ಯ ಲಹರಿಯನ್ನು ಸರಿಯಾಗಿ ಅರ್ಥಮಾಡಿಕೊಂಡರೆ ವಿವಿಧತೆಯಲ್ಲಿ ಏಕತೆ ಕಂಡುಕೊಳ್ಳಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಅರಮನೆ ಮೈದಾನದಲ್ಲಿ ವೇದಾಂತ ಭಾರತಿ, ಯಡತೊರೆ ಮಠದ ವತಿಯಿಂದ ಆಯೋಜಿಸಲಾಗಿದ್ದ ದಶಮಃ ಸೌಂದರ್ಯ ಲಹರಿ ಪರಾಯಣದ ಮಹಾಸಮರ್ಪಣೆಯಲ್ಲಿ ಭಾಗವಹಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ
ಆದಿ ಶಂಕರಾಚಾರ್ಯರು ಭಾರತದ ಸಾಂಸ್ಕೃತಿಕ ಉದ್ಧಾರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು, ಭವಿಷ್ಯದ ಪೀಳಿಗೆಯ ಒಳಿತಿಗಾಗಿ ಶಂಕರರು ಲಹರಿ ರಚಿಸಿದರು, ವಿಶ್ವವನ್ನೇ ಒಂದು ಕುಟುಂಬ ಎಂದು ಭಾವಿಸಿದ್ದ ಶಂಕರಾಚಾರ್ಯರಿಗೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಲ್ಲಿ ವಿಶ್ವಾಸವಿತ್ತು ಎಂದು ಹೇಳಿದ್ದಾರೆ.
ಕಳೆದ ವಾರ ನಾನು ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ್ದೆ, ಅಲ್ಲಿಗೆ ಹೋದಾಗಲೆಲ್ಲಾ ನನಗೆ ಆದಿ ಶಂಕರರು ನೆನಪಾಗುತ್ತಾರೆ, ಈಗಿನ ಅತ್ಯಾಧುನಿಕ ಸೌಲಭ್ಯಗಳ ಹೊರತಾಗಿಯೂ ಕೇದಾರನಾಥವಿರುವ ಪ್ರದೇಶ ತಲುಪುವುದು ದುರ್ಗಮ, ಇನ್ನು ಸಹಸ್ರ ವರ್ಷಗಳ ಹಿಂದೆ ಯಾವುದೇ ಸೌಲಭ್ಯಗಳಿಲ್ಲದೇ, ಶಂಕರರು ಅಲ್ಲಿಗೆ ತೆರಳಿ ಸಾಧನೆ ಮಾಡಿದ್ದರ ಬಗ್ಗೆ ಅಚ್ಚರಿಯಾಗುತ್ತದೆ ಎಂದು ಮೋದಿ ಶಂಕರರಾಚಾರ್ಯರನ್ನು ಸ್ಮರಿಸಿದ್ದಾರೆ.
ನವರಾತ್ರಿಯ ವ್ರತಾಚರಣೆಯಲ್ಲಿ ಸೌಂದರ್ಯ ಲಹರಿ
ಇದೇ ವೇಳೆ ತಮಗೂ ಸೌಂದರ್ಯ ಲಹರಿಗೂ ಇರುವ ನಂಟಿನ ಬಗ್ಗೆಯೂ ಮೋದಿ ಹೇಳಿದ್ದು, ಅನೇಕ ವರ್ಷಗಳಿಂದ ತಾವು ಆಚರಿಸುತ್ತಿರುವ ನವರಾತ್ರಿ ವ್ರತದಲ್ಲಿ ತಾವು ಸೌಂದರ್ಯ ಲಹರಿ ಪಾರಾಯಣಕ್ಕೆ ವಿಶೇಷ ಸ್ಥಾನ ನೀಡಿರುವುದಾಗಿ ಹೇಳಿದ್ದು, ಮಂತ್ರೋಚ್ಛಾರಣೆಯಲ್ಲಿ ವಿಶೇಷ ಶಕ್ತಿ ಇದೆ, ನಾದ ಬ್ರಹ್ಮನ ಕಲ್ಪನೆಯನ್ನು ನಾವು ಸ್ವೀಕರಿಸಿದ್ದೇವೆ, ನಾದ ಬ್ರಹ್ಮನಲ್ಲಿರುವ ಶಕ್ತಿಯನ್ನು ಆಧುನಿಕ ವಿಜ್ಞಾನವೂ ಅಲ್ಲಗಳೆಯುವುದಿಲ್ಲ, ಸೌಂದರ್ಯ ಲಹರಿ ಪಾರಾಯಣ ಬೇಧಭಾವವಿಲ್ಲದೇ ಎಲ್ಲರೂ ಒಂದಾಗುವಂತೆ ಮಾಡುತ್ತದೆ. ಭಾರತವನ್ನು ಬರಿಗಾಲಲ್ಲಿ 3 ಬಾರಿ ಸುತ್ತಿ, 4 ಮಠಗಳನ್ನು ಸ್ಥಾಪಿಸಿದ ಶಂಕರಾಚಾರ್ಯರು ಭಗವಂತನನ್ನು ತಲುಪಲು ಅದ್ವೈತ ಮಾರ್ಗವನ್ನು ಪ್ರತಿಪಾದಿಸಿದ್ದರು. ಎಲ್ಲಿ ದ್ವೈತವಿರುವುದಿಲ್ಲವೋ ಅಲ್ಲಿ ಅದ್ವೈತವಿರುತ್ತದೆ, ಎಲ್ಲಿ ಅದ್ವೈತವಿದ್ದಲ್ಲಿ ಸಂಘರ್ಷ ವಿರುವುದಿಲ್ಲ ಎಂದು ಮೋದಿ ಹೇಳಿದ್ದಾರೆ.
ಭಾರತದ ಆಧ್ಯಾತ್ಮಿಕ ಸಂಸ್ಕೃತಿ, ಶ್ರೀಮಂತಿಕೆಯನ್ನು ನಾಶ ಮಾಡಲು ಅನೇಕ ದಾಳಿಗಳು ನಡೆದಿವೆ, ಆದರೆ ನಮ್ಮ ಸಂಸ್ಕೃತಿಯನ್ನು ನಾಶ ಮಾಡಲು ಸಾಅಧ್ಯವಾಗಿಲ್ಲ. ಇಂದು ನಮ್ಮ ಪೀಳಿಗೆ ಪುಸ್ತಕಗಳಿಗಿಂಟ ಗ್ಯಾಡ್ಜೆಟ್ ಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ, ನಮ್ಮ ಪರಂಪರೆಯ ಸಾರ ಪುಸ್ತಕಗಳಲ್ಲಿ ಅಡಗಿದೆ ಫೋನ್ ಗಳಿಂದ್ ಅಪುಸ್ತಕಗಳ ಕಡೆಗೆ ತರಬೇಕು. ಭಾರತದ ಪ್ರಾಚೀನ ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಿದ್ದು, ಯಾರೂ ಯಾರನ್ನೂ ದ್ವೇಶಿಸಬಾರದೆಂಬ ನಮ್ಮ ಸಂಸ್ಕೃತಿಯ ಸಾರವಾಗಿದ್ದು ವಿಶ್ವದಲ್ಲಿನ ಅನೇಕ ಸಮಸ್ಯೆಗಳಿಗೆ ನಮ್ಮ ಸಂಸ್ಕೃತಿಯಲ್ಲಿ ಉತ್ತರವಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಸಹಸ್ರಾರು ಜನರೊಂದಿಗೆ ಸೌಂದರ್ಯ ಲಹರಿ ಪಠಿಸಿದ ಪ್ರಧಾನಿ ಮೋದಿ!
ಅರಮನೆ ಮೈದಾನದಲ್ಲಿ ನಡೆದ ಸೌಂದರ್ಯ ಲಹರಿ ಪಾರಾಯಣೋತ್ಸವದ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಸಹಸ್ರಾರು ಜನರೊಂದಿಗೆ ತಾವೂ ಸಹ ಸೌಂದರ್ಯ ಲಹರಿ ಪಠಿಸಿದರು. ಬಳಿಕ ಮಾತನಾಡಿದ ಅವರು ಸೌಂದರ್ಯ ಲಹರಿ ಪಾರಯಾಣ ಮಾಡಿ ದಿವ್ಯ ಅನುಭೂತಿ ಉಂಟಾಯಿತು. ಸೌಂದರ್ಯ ಲಹರಿ ಪಾರಾಯಣ ಮಾಡುವುದರಿಂದ ಜ್ಞಾನ, ನೆಮ್ಮದಿ ವೃದ್ಧಿಸುತ್ತದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ನೀಡಿದ ಶಂಕರ ಭಾರತಿ ಸ್ವಾಮಿಗಳು ಹಾಗೂ ವೇದಾಂತ ಭಾರತಿ ಸಂಸ್ಥೆಗೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengaluruPM Narendra Modiಪ್ರಧಾನಿ ನರೇಂದ್ರ ಮೋದಿSoundarya lahari Parayana mahasamarpaneಸೌಂದರ್ಯ ಲಹರಿ ಪಾರಾಯಣ ಮಹಾಸಮರ್ಪಣೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


